ಉಡುಪಿ: ಕೃಷಿಯಲ್ಲಿ ಸಾಧನೆ ಮಾಡಿರುವ
ಕೃಷಿ ಜೋಸೆಫ್ ಲೋಬೊ ಅವರ ಮನೆಯ ತಾರಸಿ ತೋಟವನ್ನು ವೀಕ್ಷಣೆ ಮಾಡಿ ಶಾಲಾ ಮಕ್ಕಳು ಸಂಭ್ರಮಿಸಿದರು.
ಇಂದು ಉಡುಪಿ ಜಿಲ್ಲೆಯ ಶಂಕರಾಪುರದ ಸೆಂಟ್ ಜಾನ್ ಪ್ರೈಮರಿ ಶಾಲೆಯ ಮಕ್ಕಳು ಕ್ಷೇತ್ರ ಬೇಟಿ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಈ ಕಾರ್ಯಕ್ರಮದ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕರಾದ ಜೋಸೆಫ್ ಲೋಬೋ ಅವರ ಮನೆಯ ತಾರಸಿ ತೋಟದ ವೀಕ್ಷಣೆ ಮಾಡಿ,ವಿವಿದ ಅಮೂಲ್ಯ ಗಿಡಗಳ ಪರಿಚಯ ಮಾಡಿಕೊಂಡರು.
ಈ ವೇಳೆ ಶಾಲೆಯ ಮುಖ್ಯೋಪಾಧ್ಯಕ್ಷರು ಹಾಗೂ ಅಧ್ಯಾಪಕ ವೃಂದ ಸೇರಿದಂತೆ ನೂರಕ್ಕೂ ಹೆಚ್ಚು ಮಕ್ಕಳು ಹಾಜರಿದ್ದರು.