H-1B ವೀಸಾ ಅರ್ಜಿಗಳಿಗೆ 100,000 ಡಾಲರ್​ ಶುಲ್ಕ: ಟ್ರಂಪ್‌ ವಿರುದ್ಧ ಮೊಕದ್ದಮೆ

ವಾಶಿಂಗ್ಟನ್:‌ H-1B ವೀಸಾ ಅರ್ಜಿಗಳಿಗೆ ಅಗತ್ಯವಿರುವ ಹೊಸ ಶುಲ್ಕ 100,000 ಡಾಲರ್​ ಶುಲ್ಕ ವಿಧಿಸಿರುವ ಟ್ರಂಪ್​ ಆದೇಶವನ್ನು ಪ್ರಶ್ನಿಸಿ ಅಮೆರಿಕದ ಇಪ್ಪತ್ತು ರಾಜ್ಯಗಳು ಮೊಕದ್ದಮೆ ಹೂಡಿವೆ.

ಈ ನೀತಿ ಕಾನೂನುಬಾಹಿರವಾಗಿದ್ದು, ಪ್ರಮುಖ ಸಾರ್ವಜನಿಕ ಸೇವೆಗಳಿಗೆ ಗಂಭೀರ ಬೆದರಿಕೆಯನ್ನು ಒಡ್ಡಿದೆ ಎಂದು ಪ್ರತಿಪಾದಿಸಲಾಗಿದೆ.

ಈ ವೀಸಾ ಯೋಜನೆಯನ್ನು ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು ಮತ್ತು ಸಾರ್ವಜನಿಕ ಶಾಲೆಗಳು ವ್ಯಾಪಕವಾಗಿ ಬಳಸುತ್ತಿವೆ. ಈ ಶುಲ್ಕ ಹೆಚ್ಚಳವು ಹೆಚ್ಚು ಕೌಶಲ್ಯಪೂರ್ಣ ವಿದೇಶಿ ಕೆಲಸಗಾರರನ್ನು ನೇಮಿಸಿಕೊಳ್ಳಲು ಬಯಸುವ ಉದ್ಯೋಗದಾತರ ಮೇಲೆ ಭಾರೀ ಹೊರೆಯಾಗುತ್ತದೆ ಎಂದು ಅರ್ಜಿಯಲ್ಲಿ
ತಿಳಿಸಲಾಗಿದೆ.

ಟ್ರಂಪ್ ಆಡಳಿತವು ಶುಲ್ಕ ವಿಧಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ರಾಬ್ ಬೊಂಟಾ ಹೇಳಿದ್ದಾರೆ.

ಪ್ರಪಂಚದಾದ್ಯಂತದ ಕೌಶಲ್ಯಪೂರ್ಣ ಪ್ರತಿಭೆಗಳು ನಮ್ಮ ಕಾರ್ಯಪಡೆಗೆ ಸೇರಿದಾಗ ಅವರು ರಾಜ್ಯವನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ.

ಅಧ್ಯಕ್ಷ ಟ್ರಂಪ್ ವಿಧಿಸಿರುವ ಈ ಅಕ್ರಮ 100,000 ಡಾಲರ್​ ಶುಲ್ಕವು ಕ್ಯಾಲಿಫೋರ್ನಿಯಾದ ಸಾರ್ವಜನಿಕ ಸಂಸ್ಥೆಗಳ ಮೇಲೆ ಅನಗತ್ಯ ಹೊರೆಯನ್ನು ಹೆಚ್ಚುವಂತೆ ಮಾಡುತ್ತಿದೆ. ಇದು ಪ್ರಮುಖ ವಲಯಗಳಲ್ಲಿ ಕಾರ್ಮಿಕರ ಕೊರತೆಯನ್ನು ಉಲ್ಬಣಗೊಳಿಸುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ರಾಬ್ ಬಂಟಾ ಮತ್ತು ಮ್ಯಾಸಚೂಸೆಟ್ಸ್ ಅಟಾರ್ನಿ ಜನರಲ್ ಆಂಡ್ರಿಯಾ ಜಾಯ್ ಕ್ಯಾಂಪ್ಬೆಲ್ ಅವರು ಈ ಮೊಕದ್ದಮೆ ಹೂಡಿದ್ದಾರೆ.

ಜೊತೆಗೆ ಅರಿಜೋನಾ, ಕೊಲೊರಾಡೋ, ಕನೆಕ್ಟಿಕಟ್, ಡೆಲವೇರ್, ಹವಾಯಿ, ಇಲಿನಾಯ್ಸ್, ಮೇರಿಲ್ಯಾಂಡ್, ಮಿಚಿಗನ್, ಮಿನ್ನೇಸೋಟ, ನೆವಾಡಾ, ನಾರ್ತ್ ಕೆರೊಲಿನಾ, ನ್ಯೂಜೆರ್ಸಿ, ನ್ಯೂಯಾರ್ಕ್, ಒರೆಗಾನ್, ರೆಡ್​ ಐಲ್ಯಾಂಡ್,ವರ್ಮೊಂಟ್, ವಾಷಿಂಗ್ಟನ್ ಮತ್ತು ವಿಸ್ಕಾನ್ಸಿನ್ ರಾಜ್ಯಗಳ ಅಟಾರ್ನಿ ಜನರಲ್‌ಗಳು ಸಹ ಮೊಕದ್ದಮೆ ದಾಖಲಿಸಿವೆ.

H-1B ವೀಸಾ ಅರ್ಜಿಗಳಿಗೆ 100,000 ಡಾಲರ್​ ಶುಲ್ಕ: ಟ್ರಂಪ್‌ ವಿರುದ್ಧ ಮೊಕದ್ದಮೆ Read More

ಭಾರತ ಮತ್ತಿತರ ದೇಶಗಳ ಸರಕುಗಳ ಮೇಲೆ ಪ್ರತಿ ಸುಂಕ ನೀತಿ ಇಂದಿನಿಂದ ಜಾರಿಗೆ

ವಾಷಿಂಗ್ಟನ್: ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಭಾರತವು ಶೇ.100ರಷ್ಟು ಸುಂಕ ವಿಧಿಸುತ್ತದೆ,ಹಾಗೆಯೇ ಇತರ ದೇಶಗಳು ಹೆಚ್ಚು ಸುಂಕ ವಿಧಿಸುವುದರಿಂದ ಅಮೆರಿಕದ ಉತ್ಪನ್ನಗಳನ್ನು ಆ ರಾಷ್ಟ್ರಗಳಿಗೆ ರಫ್ತು ಮಾಡುವುದು ಅಸಾಧ್ಯ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.

ಭಾರತ ಮತ್ತು ಇತರ ದೇಶಗಳು ಅಮೆರಿಕದ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುತ್ತಿರುವುದನ್ನು ಡೊನಾಲ್ಡ್ ಟ್ರಂಪ್‌ ಹಲವು ಸಲ ಟೀಕಿಸಿದ್ದರು.

ಭಾರತ ಒಳಗೊಂಡಂತೆ ಕೆಲವು ದೇಶಗಳ ಸರಕುಗಳ ಮೇಲೆ ಟ್ರಂಪ್‌ ಘೋಷಿಸಿರುವ ಪ್ರತಿ ಸುಂಕ ನೀತಿಯು ಏಪ್ರಿಲ್ 2ರಿಂದ ಜಾರಿಗೆ ಬರಲಿದೆ,ಇದು ಅಮೆರಿಕದ ವಿಮೋಚನಾ ದಿನ ಎಂದು ಹೇಳಿದ್ದಾರೆ.

ದುರದೃಷ್ಟವಶಾತ್, ಈ ದೇಶಗಳು ಹಲವು ವರ್ಷಗಳಿಂದ ನಮ್ಮ ಹಣವನ್ನು ಸುಲಿಗೆ ಮಾಡುತ್ತಿವೆ ಮತ್ತು ಅಮೆರಿಕದ ಕಾರ್ಮಿಕರ ಬಗ್ಗೆ ಅವುಗಳು ತಿರಸ್ಕಾರ ಮನೋಭಾವ ಹೊಂದಿವೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೆವಿಟ್ ಟೀಕಿಸಿದ್ದಾರೆ.

ಎಷ್ಟು ಪ್ರಮಾಣದಲ್ಲಿ ಪ್ರತಿ ಸುಂಕ ವಿಧಿಸಲಾಗುತ್ತದೆ ಮತ್ತು ಅವು ಯಾವೆಲ್ಲಾ ದೇಶಗಳ ಮೇಲೆ ಪರಿಣಾಮ ಬೀರಲಿವೆ ಎಂಬುದನ್ನು ಲೆವಿಟ್ ವಿವರಿಸಲಿಲ್ಲ.

ಅಮೆರಿಕದ ಡೇರಿ ಉತ್ಪನ್ನಗಳ ಮೇಲೆ ಯುರೋಪಿಯನ್ ಯೂನಿಯನ್ ಶೇ 50 ಸುಂಕ ವಿಧಿಸುತ್ತಿದ್ದರೆ, ನಾವು ಕಳುಹಿಸುವ ಅಕ್ಕಿಯ ಮೇಲೆ ಜಪಾನ್ ಶೇ 700ರಷ್ಟು ಸುಂಕ ವಿಧಿಸುತ್ತದೆ. ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಭಾರತವು ಶೇ 100ರಷ್ಟು ಸುಂಕ ಮತ್ತು ಅಮೆರಿಕದ ಬೆಣ್ಣೆ ಹಾಗೂ ಚೀಸ್ ಮೇಲೆ ಕೆನಡಾ ಶೇ 300ರಷ್ಟು ಸುಂಕ ವಿಧಿಸುತ್ತಿವೆ ಎಂದು ಲೆವಿಟ್ ಹೇಳಿದ್ದಾರೆ.

ಈ ರೀತಿಯ ಹೆಚ್ಚಿನ ಪ್ರಮಾಣದ ಸುಂಕದಿಂದ ಕಳೆದ ಕೆಲವು ದಶಕಗಳಲ್ಲಿ ಅಮೆರಿಕದ ಹಲವು ವ್ಯಾಪಾರಿಗಳು ನಷ್ಟ ಅನುಭವಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭಾರತ ಮತ್ತಿತರ ದೇಶಗಳ ಸರಕುಗಳ ಮೇಲೆ ಪ್ರತಿ ಸುಂಕ ನೀತಿ ಇಂದಿನಿಂದ ಜಾರಿಗೆ Read More

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ ನಿರ್ದೇಶಕ ಭಾರತೀಯ ಮೂಲದ ವಿಜ್ಞಾನಿ

ವಾಷಿಂಗ್ಟನ್: ಅಮೆರಿಕದ ಉನ್ನತ ಆರೋಗ್ಯ ಸಂಶೋಧನೆ ಮತ್ತು ಧನಸಹಾಯ ಸಂಸ್ಥೆಗಳಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ನಿರ್ದೇಶಕರಾಗಿ ಭಾರತೀಯ ಮೂಲದ ವಿಜ್ಞಾನಿ ನೇಮಕವಾಗಿದ್ದಾರೆ.

ಭಾರತೀಯ-ಅಮೆರಿಕನ್ ವಿಜ್ಞಾನಿ ಜೈ ಭಟ್ಟಾಚಾರ್ಯ ಅವರ ನೇಮಕವನ್ನು ಅಮೆರಿಕಾ ಸೆನೆಟ್ ದೃಢಪಡಿಸಿದೆ.

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಆರೋಗ್ಯ ನೀತಿಯ ಪ್ರಾಧ್ಯಾಪಕ ಭಟ್ಟಾಚಾರ್ಯ ಅವರು 53-47 ಮತಗಳಿಂದ ನಿರ್ದೇಶಕರಾಗಿ ದೃಢಪಟ್ಟಿದ್ದಾರೆ ಎಂದು ಯುಎಸ್ ಸೆನೆಟ್‌ನ ಅಧಿಕೃತ ವೆಬ್‌ಸೈಟ್ ತಿಳಿಸಿದೆ.

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಭಟ್ಟಾಚಾರ್ಯರನ್ನು 18 ನೇ ಎನ್‌ಐಎಚ್ ನಿರ್ದೇಶಕರಾಗಿ ನಾಮನಿರ್ದೇಶನ ಮಾಡಿದ್ದರು.

ಡಾ. ಭಟ್ಟಾಚಾರ್ಯ ಅವರು ರಾಬರ್ಟ್ ಎಫ್ ಕೆನಡಿ ಜೂನಿಯರ್ ಅವರ ಜೊತೆಗೆ ರಾಷ್ಟ್ರದ ವೈದ್ಯಕೀಯ ಸಂಶೋಧನೆಯನ್ನು ನಿರ್ದೇಶಿಸಲು ಮತ್ತು ಆರೋಗ್ಯವನ್ನು ಸುಧಾರಿಸುವ, ಜೀವಗಳನ್ನು ಉಳಿಸುವ ಪ್ರಮುಖ ಆವಿಷ್ಕಾರಗಳನ್ನು ಮಾಡಲು ಕೆಲಸ ಮಾಡುತ್ತಾರೆ ಎಂದು ಟ್ರಂಪ್ ಮಾಹಿತಿ ನೀಡಿದ್ದರು.

ಇದೀಗ ಡಾ. ಭಟ್ಟಾಚಾರ್ಯ ಅವರ ನೇಮಕ ಆವಿಷ್ಕಾರ ಮಾಡಲು ಪ್ರೇರಣೆಯಾಗಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ ನಿರ್ದೇಶಕ ಭಾರತೀಯ ಮೂಲದ ವಿಜ್ಞಾನಿ Read More