ಅಮೆರಿಕಾದಲ್ಲಿ ತೆಲಂಗಾಣದ ಟೆಕ್ಕಿ ಪೊಲೀಸರ ಗುಂಡಿಗೆ ಬಲಿ

ಅಮೆರಿಕ: ರೂಮ್ ಮೇಟ್ ಜೊತೆಗೆ ಹೊಡೆದಾಟದ ನಂತರ ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯ 29 ವರ್ಷದ ಟೆಕ್ಕಿ ಅಮೆರಿಕದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಸಾಫ್ಟ್‌ವೇರ್ ವೃತ್ತಿ ಮಾಡುತ್ತಿದ್ದ ಮೊಹಮ್ಮದ್ ನಿಜಾಮುದ್ದೀನ್ ಎಂಬಾತ ಮೃತಪಟ್ಟಿದ್ದಾರೆ.

ಸೆಪ್ಟೆಂಬರ್ 3 ರಂದು ಸಾಂಟಾ ಕ್ಲಾರಾ ಪೊಲೀಸರು ಕೊಂದಿದ್ದಾರೆ ಎಂದು ಹೇಳಲಾಗಿದೆ.

ಏನಾಯಿತು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಕ್ಷುಲಕ ವಿಚಾರಕ್ಕೆ ರೂಮ್‌ಮೇಟ್‌ನೊಂದಿಗೆ ಜಗಳ ನಡೆದಿದೆ. ಗುರುವಾರ ಬೆಳಗ್ಗೆ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಗೊತ್ತಾಗಿದೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿರುವ ಮೃತ ಮೊಹಮ್ಮದ್ ನಿಜಾಮುದ್ದೀನ್ ತಂದೆ ಹಸ್ನುದ್ದೀನ್ ತಮ್ಮ ಮಗನ ಮೃತದೇಹವನ್ನು ಮಹಬೂಬ್‌ನಗರಕ್ಕೆ ತರಲು ನೆರವು ನೀಡುವಂತೆ ಕೋರಿದ್ದಾರೆ. ವಾಷಿಂಗ್ಟನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಅಧಿಕಾರಿಗಳಿಂದ ತುರ್ತು ಸಹಾಯವನ್ನು ಕೋರಿದ್ದು, ಅಮೆರಿಕದ ಪೊಲೀಸರು ತನ್ನ ಮಗನನ್ನು ಯಾಕೆ ಗುಂಡಿಕ್ಕಿ ಕೊಂದಿದ್ದಾರೆ ಎಂಬುದಕ್ಕೆ ನಿಜವಾದ ಕಾರಣಗಳು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಐಸೆನ್‌ಹೋವರ್ ಡ್ರೈವ್‌ನಲ್ಲಿರುವ ಮನೆಯೊಳಗೆ ತನ್ನ ರೂಮ್‌ಮೇಟ್‌ಗೆ ಇರಿದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಅಧಿಕಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಸಾಂಟಾ ಕ್ಲಾರಾ ಪೋಲೀಸರು ತಿಳಿಸಿದ್ದಾರೆ.

ಅಮೆರಿಕಾದಲ್ಲಿ ತೆಲಂಗಾಣದ ಟೆಕ್ಕಿ ಪೊಲೀಸರ ಗುಂಡಿಗೆ ಬಲಿ Read More

ಲಾಭದ ಆಸೆಗೆ 11.10 ಲಕ್ಷ ಕಳೆದುಕೊಂಡ ಟೆಕ್ಕಿ

ಮೈಸೂರು, ಮಾ. 2: ವ್ಯಕ್ತಿಯೊಬ್ಬ
ರಿವ್ಯೂಸ್ ಟಾಸ್ಕ್ ಕಂಪ್ಲೀಟ್ ಮಾಡಿದರೆ ಲಾಭ ನೀಡುವುದಾಗಿ ಹೇಳಿದ್ದನ್ನು ನಂಬಿ ಟೆಕ್ಕಿಯೊಬ್ಬರು 11.10 ಲಕ್ಷ ಕಳೆದುಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ವಂಚಕನ ವಿರುದ್ದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿನ ವಿಜಯನಗರ ಬಡಾವಣೆ 2ನೇ ಹಂತದ ನಿವಾಸಿ ವೃತ್ತಿಯಲ್ಲಿ ಇಂಜಿನಿಯರ್ ಸಂದೀಪ್ ಗ್ರಾಂಧಿ ವಂಚನೆಗೆ ಒಳಗಾದ ಟೆಕ್ಕಿ.

ಪ್ರಾರಂಭದಲ್ಲಿ ಸ್ಥಳಗಳ ಬಗ್ಗೆ ರಿವ್ಯೂಸ್ ಹಾಕುವ ಟಾಸ್ಕ್ ಕಂಪ್ಲೀಟ್ ಮಾಡಿದರೆ ಕಮೀಷನ್ ನೀಡುವುದಾಗಿ ವ್ಯಕ್ತಿ ನಂಬಿಸಿದ್ದಾನೆ.

ಗೂಗಲ್ ನಲ್ಲಿ ಮೂರು ಸ್ಥಳಗಳಿಗೆ ರಿವ್ಯೂಸ್ ಹಾಕಿದಾಗ 150 ರೂ. ಕಮೀಷನ್ ಬಂದಿದೆ.
ನಂತರ 2000 ಇನ್ವೆಸ್ಟ್ ಮಾಡಿದಾಗ 2800 ರೂ ಬಂದಿದೆ.ನಂತರ 7000 ಇನ್ವೆಸ್ಟ್ ಮಾಡಿದಾಗ 9300 ರೂ. ಬಂದಿದೆ.

ಹೀಗೆ ಕಮಿಷನ್ ಬಂದಿದ್ದನ್ನು ನಂಬಿದ ಸಂದೀಪ್ ನಂತರ ಹಂತಹಂತವಾಗಿ 11.10 ಲಕ್ಷ ಇನ್ವೆಸ್ಟ್ ಮಾಡಿದ್ದಾರೆ. ಆದರೆ ಯಾವುದೇ ಕಮೀಷನ್ ಆಗಲಿ ಲಾಭವಾಗಲಿ ನೀಡದೆ ವ್ಯಕ್ತಿ ವಂಚಿಸಿದ್ದಾನೆ

ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾಭದ ಆಸೆಗೆ 11.10 ಲಕ್ಷ ಕಳೆದುಕೊಂಡ ಟೆಕ್ಕಿ Read More