ಇಬ್ಬರ ಬಂಧನ: ಗಾಂಜಾ* 7.30 ಲಕ್ಷ ಹಣ ವಶ

ಮೈಸೂರು: ಮೈಸೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು‌ ಬಂಧಿಸಿ 10 ತಲವಾರ್ ಗಳು,2 kg ಗಾಂಜಾ ಹಾಗೂ 7.30 ಲಕ್ಷ ರೂ ವಶಪಡಿಸಿಕೊಂಡಿದ್ದಾರೆ.
ಫಿರ್ದೋಶ್ ಹಾಗೂ ರೋಶನ್ ಬಂಧಿತ ಆರೋಪಿಗಳು.
ಖಚಿತ ಮಾಹಿತಿ ಆಧರಿಸಿ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಮನೆಗಳ ಮೇಲೆ ದಾಳಿ ನಡೆಸಿದಾಗ ಆರೋಪಿಗಳು ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ.
ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರ ನೇತೃತ್ವದಲ್ಲಿ ಡಿಸಿಪಿಗಳಾದ ಬಿಂದುಮಣಿ ಹಾಗೂ ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ಮಂಡಿ ಠಾಣಾ ಪೊಲೀಸರು ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಫಿರ್ದೋಶ್ ಹಾಗೂ ರೋಶನ್ ಬಂಧಿತರು. ಆರೋಪಿಗಳಿಗೆ ಇಷ್ಟು ದೊಡ್ಡ ಪ್ರಮಾಣದ ಗಾಂಜಾ ಬಂದಿದ್ದು ಹೇಗೆ ಇದರ ಹಿಂದಿರುವ ದೊಡ್ಡ ವ್ಯಕ್ತಿಗಳು ಯಾರು ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಹತ್ತು ತಲ್ವಾರ್ ಗಳು ಸಹ ಸಿಕ್ಕಿದ್ದು ಮಾರಕಾಸ್ತ್ರಗಳನ್ನ ಸಂಗ್ರಹಿಸಿದ್ದ ಉದ್ದೇಶ ಏನು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಮಂಡಿ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.

ಇಬ್ಬರ ಬಂಧನ: ಗಾಂಜಾ* 7.30 ಲಕ್ಷ ಹಣ ವಶ Read More

ಮೈಸೂರಿನ ಜೈಲ್ ಗೆ ದಿಢೀರ್ ದಾಳಿ ಮಾಡಿದ ಪೊಲೀಸರು

ಮೈಸೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೋಜು ಮಸ್ತಿ ಕುರಿತು ಸುದ್ದಿ ಹರಡುತ್ತಿದ್ದಂತೆ ಮೈಸೂರು ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.

ಮೈಸೂರಿನ ಕಾರಾಗೃಹಕ್ಕೆ ಬೆಳ್ಳಂಬೆಳಿಗ್ಗೆ ಪೊಲೀಸರು ದಿಢೀರ್ ದಾಳಿ ಮಾಡಿ ಪರಿಶೀಲನೆ ನಡೆಸಿದರು.

ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಬಿಂದುಮಣಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಬಿಂದುಮಣಿ ಅವರಿಗೆ ಎಸಿಪಿಗಳು ಹಾಗೂ ವಿವಿಧ ಠಾಣೆಯ ನಿರೀಕ್ಷಕರು ಸಾಥ್ ನೀಡಿದರು.

ಒಂದೆಡೆ ಗೃಹಸಚಿವ ಪರಮೇಶ್ವರ್ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರೆ ಮತ್ತೊಂದೆಡೆ ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿ ಕುತೂಹಲ ಮೂಡಿಸಿದ್ದಾರೆ.

ಮೈಸೂರಿನ ಜೈಲ್ ಗೆ ದಿಢೀರ್ ದಾಳಿ ಮಾಡಿದ ಪೊಲೀಸರು Read More

ಪೊಲೀಸರನ್ನ ಯಾಮಾರಿಸಲು ಹೋಗಿ‌ ಸಿಕ್ಕಿಬಿದ್ದ ಬೈಕ್ ಸವಾರ!

ಮೈಸೂರು: ತಪ್ಪು ಮಾಡಿದ ಮೇಲೆ ದಂಡ ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನ ಸವಾರರು ಏನೇನೊ ತಲೆ ಉಪಯೋಗಿಸುತ್ತಾರೆ.
ಹಾಗೇನೆ‌ ಮೈಸೂರಿನಲ್ಲೊಬ್ಬ ಸವಾರ ಪೊಲೀಸರನ್ನ ಯಾಮಾರಿಸಲು ಹೋಗಿ‌ ಸಿಕ್ಕಿಬಿದ್ದಿದ್ದಾರೆ.

ಈತ ಮಾಡಿದ್ದಿಷ್ಟೆ.ದಂಡ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ ಮೇಲೆ ಟಿಶ್ಯೂ ಪೇಪರ್ ಅಂಟಿಸಿ ಬೈಕ್ ಚಾಲನೆ ಮಾಡಿ ಸಿಕ್ಕಿಬಿದ್ದಿದ್ದಾನೆ.

ವಾಹನ ಮಾಲೀಕನ ವಿರುದ್ದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಈಗ ಎಫ್.ಐ.ಆರ್.
ದಾಖಲಾಗಿದೆ.

ಯಮಹಾ ಬೈಕ್ KA09JY 0275 ನೊಂದಣಿ ಸಂಖ್ಯೆಯ ಪ್ಲೇಟ್ ನ ಕೊನೆಯ ಎರಡು ಸಂಖ್ಯೆ ಮೇಲೆ ಟಿಶ್ಯೂ ಪೇಪರ್ ಅಂಟಿಸಿ ಚಾಲನೆ ಮಾಡುತ್ತಿದ್ದ ವೇಳೆ ಕೆ.ಆರ್.ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಈಗ ದಂಡ‌ ಪೀಕಲೇಬೇಕಿದೆ.

ಪೊಲೀಸರನ್ನ ಯಾಮಾರಿಸಲು ಹೋಗಿ‌ ಸಿಕ್ಕಿಬಿದ್ದ ಬೈಕ್ ಸವಾರ! Read More

ಶಿಸ್ತು, ರಕ್ಷಣೆಯ ಪ್ರತೀಕ ಪೊಲೀಸರು:ಖೊ-ಖೊ ಕ್ರೀಡಾಪಟು ಬಿ.ಚೈತ್ರ

ಮೈಸೂರು: ಪೊಲೀಸರೆಂದರೆ ಶಿಸ್ತು ಹಾಗೂ ರಕ್ಷಣೆಯ ಪ್ರತೀಕ. ದೇಶದ ಹೊರಗಡೆ ಸೈನಿಕರು ನಮ್ಮನ್ನು ಹೇಗೆ ರಕ್ಷಣೆ ಮಾಡುತ್ತಾರೊ ಹಾಗೆಯೇ ದೇಶದ ಒಳಗಡೆ ನಮ್ಮನ್ನು ರಕ್ಷಣೆ ಮಾಡುತ್ತಿರುವುದು ಪೊಲೀಸ್ ಇಲಾಖೆ ಎಂದು ರಾಷ್ಟ್ರ ಮಟ್ಟದ ಖೋ-ಖೋ ಕ್ರೀಡಾಪಟು ಬಿ. ಚೈತ್ರ ಹೇಳಿದರು.

ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಜ್ಯೋತಿನಗರ ಡಿ.ಎ.ಆರ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾರ್ವಜನಿಕರು ನೆಮ್ಮದಿಯ ಜೀವನ ಸಾಗಿಸಲು ಹಾಗೂ ಯಾವುದೇ ಕಾರ್ಯಕ್ರಮಗಳಲ್ಲಿ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳಲು ಪೊಲೀಸ್ ಸಿಬ್ಬಂದಿಯವರಿಂದ ಮಾತ್ರ ಸಾಧ್ಯ. ಹೆಣ್ಣು ಮಕ್ಕಳು ಯಾವುದೇ ಭಯ ಇಲ್ಲದೆ ಹೊರಗಡೆ ಓಡಾಡಲು ರಕ್ಷಣೆ ನೀಡುತ್ತಿರುವವರು ಪೊಲೀಸರು ಎಂದು ಬಣ್ಣಿಸಿದರು.

ಪೊಲೀಸ್ ಸಿಬ್ಬಂದಿ ತಮ್ಮ ಕುಟುಂಬವನ್ನು ಬಿಟ್ಟು ದೇಶದಲ್ಲಿ ನಡೆಯುವ ಅಮಾನವೀಯ ಕೃತ್ಯವನ್ನು ತಡೆಗಟ್ಟಲು ಸರ್ಕಾರದ ಶಿಷ್ಟಾಚಾರದಂತೆ ಹಗಲಿರುಳೆನ್ನದೇ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಎಲ್ಲರಿಗೂ ರಕ್ಷಣೆ ನೀಡಿದ್ದು ಪೊಲೀಸ್ ಇಲಾಖೆ ಎಂದು ಹೇಳಿ ಧನ್ಯವಾದ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಾಗೇಶ್, ಸಿ. ಮಲ್ಲಿಕ್, ಸವಿತಾ ವಗರ್ ಮತ್ತಿತರರು ಉಪಸ್ಥಿತರಿದ್ದರು.

ಶಿಸ್ತು, ರಕ್ಷಣೆಯ ಪ್ರತೀಕ ಪೊಲೀಸರು:ಖೊ-ಖೊ ಕ್ರೀಡಾಪಟು ಬಿ.ಚೈತ್ರ Read More

ಪೊಲೀಸರ ಮೇಲೆ ಹಲ್ಲೆ:11 ಮಂದಿ ವಿರುದ್ಧ ‌ಎಫ್ಐಆರ್

ಬೆಳಗಾವಿ: ಕಬ್ಬು ಬೆಳೆಗಾರರು ಬೆಳಗಾವಿಯ ಹತ್ತರಗಿ, ರಾಷ್ಟ್ರೀಯ ಹೆದ್ದಾರಿ 4ರ ಟೋಲ್ ನಾಕಾ ಬಳಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಪಿಎಸ್ಐ ಆರ್.ವಿ.ಪಾಟೀಲ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಭಟನೆ ವೇಳೆ ಪೊಲೀಸರ ಮೇಲೆ ದುರುದ್ದೇಶದಿಂದ ಕಲ್ಲು ತೂರಾಟ ನಡೆಸಿ, ಪೊಲೀಸರನ್ನು ಒದ್ದು ಹಲ್ಲೆ ನಡೆಸಲಾಗಿದೆ. ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯುಂಟು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಯಮಕನಮರಡಿ ಠಾಣೆಯಲ್ಲಿ 11 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಪೊಲೀಸರ ಮೇಲೆ ಹಲ್ಲೆ:11 ಮಂದಿ ವಿರುದ್ಧ ‌ಎಫ್ಐಆರ್ Read More

ಬೊಲೆರೋ ಚೇಸ್ ಮಾಡಿ 20 ಕರುಗಳ ರಕ್ಷಿಸಿದ ಪೊಲೀಸರು

ಮೈಸೂರು: ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನ ಪೊಲೀಸರು ಚೇಸ್ ಮಾಡಿ 20 ಕಾರುಗಳನ್ನು ರಕ್ಷಣೆ ಮಾಡಿದ್ದಾರೆ.

ನಂಜನಗೂಡು ತಾಲೂಕು ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಯಪುರ ಪೊಲೀಸರಿಗೆ ಅಕ್ರಮವಾಗಿ ಜಾನುವಾರುಗಳನ್ನ ಸಾಗಿಸುತ್ತಿರುವ ಮಾಹಿತಿ ಬಂದಿದೆ.

ತಕ್ಷಣ ಅಲರ್ಟ್ ಆದ ಪಿಎಸ್ಸೈ ಹೇಮಾವತಿ ಅವರು ವಾಹನವನ್ನ ಸಿನಮೀಯ ಶೈಲಿಯಲ್ಲಿ ಚೇಸ್ ಮಾಡಿದ್ದಾರೆ.

ಜತೆಗೆ ಹೇಮಾವತಿಯವರು ಹುಲ್ಲಹಳ್ಳಿ ಪಿಎಸ್ಸೈ ಚೇತನ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.ಅಲರ್ಟ್ ಆದ ಚೇತನ್ ಕುಮಾರ್ ಸಹ ಸಿಬ್ಬಂದಿಗಳ ಸಮೇತ ಜಾನುವಾರುಗಳನ್ನ ಸಾಗಿಸುತ್ತಿದ್ದ ವಾಹನ ಹಿಡಿಯಲು ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಇದರಿಂದ ಆತಂಕಗೊಂಡ ವಾಹನದಲ್ಲಿದ್ದವರು ವಾಹನವನ್ನು ವೇಗವಾಗಿ ಚಲಾಯಿಸಿದ್ದಾರೆ, ಅಹಲ್ಯಾ ಗ್ರಾಮದ ಬಳಿ ಜಾನುವಾರುಗಳನ್ನ ತುಂಬಿದ್ದ ವಾಹನ ಉರುಳಿಬಿದ್ದಿದೆ.

ವಾಹನದಲ್ಲಿದ್ದವರು ತಪ್ಪಿಸಿಕೊಡಿದ್ದಾರೆ, ಕರುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೂಡಲೇ ಪೊಲೀಸರು ಸ್ಥಳೀಯರ ಸಹಾಯದಿಂದ 20 ಕರುಗಳನ್ನ ರಕ್ಷಿಸಿ ಪಿಂಜರಾಪೋಲ್ ಗೆ ರವಾನಿಸಿ ಬೊಲೆರೋ ವಾಹನ ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೊಲೆರೋ ಚೇಸ್ ಮಾಡಿ 20 ಕರುಗಳ ರಕ್ಷಿಸಿದ ಪೊಲೀಸರು Read More

ಮೈಸೂರು ನಗರದಲ್ಲಿ

ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕಲು ಕ್ರಮ

ಮೈಸೂರು: ಪೊಲೀಸ್ ರೌಡಿ ಪ್ರತಿಬಂಧಕ‌ ದಳದಿಂದ ಮೈಸೂರು ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಮೂಲಕ ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಲಾಗಿದೆ.

ಅಕ್ಟೋಬರ್ 10 ರಿಂದ ಮೈಸೂರು ನಗರದಲ್ಲಿ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಉದ್ಯಾನವನಗಳು, ಬಾರ್, ವೈನ್ ಸ್ಟೋರ್‌ಗಳು, ಟೀ ಅಂಗಡಿಗಳು, ಹೋಟೆಲ್‌ಗಳು, ಬೀದಿ ಬದಿ ಅಂಗಡಿಗಳು ಸೇರಿ ಎಲ್ಲಾ ಸ್ಥಳಗಳಲ್ಲಿ ಪೊಲೀಸರು ತಪಾಸಣೆ ನಡೆಸಿ ಕಟ್ಟೆಚ್ಚರ ವಹಿಸಿದ್ದಾರೆ.

ಕಾರ್ಯಾಚರಣೆಯ ವೇಳೆ, ಶಂಕಿತ ರೌಡಿಗಳು ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುವ ವ್ಯಕ್ತಿಗಳನ್ನು ಗುರುತಿಸಿ ಪ್ರಕರಣ ದಾಖಲಿಸಲಾಗುತ್ತಿದೆ. ಅವರ ವಿರುದ್ದ ಸಿಒಟಿಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ ಇದರೊಂದಿಗೆ ಐಎಂವಿ ಪ್ರಕರಣಗಳನ್ನು ಸಹ ದಾಖಲಿಸಲಾಗುತ್ತಿದೆ.

405 ಮಂದಿಯನ್ನು
ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

204 ಮಂದಿ ವಿರುದ್ಧ ಸಿಒಟಿಪಿಒ
ಪ್ರಕರಣ ದಾಖಲಾಗಿದೆ.
ಪೆಟ್ಟಿ ಕೇಸ್ ಹಾಗೂ ಕೆಪಿ ಕಾಯ್ದೆಯಡಿ – 487 ಪ್ರಕರಣಗಳು ದಾಖಲಾಗಿದೆ.

ತ್ರಿಬಲ್ ರೈಡಿಂಗ್ – 54 ಪ್ರಕರಣಗಳು
ಇತರ ಪ್ರಕರಣ (ಹೆಲ್ಮೆಟ್ ಇಲ್ಲದೆ ಪ್ರಯಾಣ, ದೋಷಯುಕ್ತ ನಂಬರ್‌ಪ್ಲೇಟ್, ವೀಲಿಂಗ್ ) 33 ಮಂದಿ ವಿರುದ್ಧ ಪ್ರಕರಣ ದಾಖಲಿಸಿ
59 ವಾಹನಗಳು ವಶಕ್ಕೆ ಪಡೆಯಲಾಗಿದೆ.

ಮೈಸೂರಿನ ದೊಡ್ಡಕೆರೆ ಮೈದಾನ, ದಸರಾ ವಸ್ತು ಪ್ರದರ್ಶನದ ಪಾರ್ಕಿಂಗ್ ಸ್ಥಳ, ಜ್ವಾಲಾಮುಖಿ ಪಾರ್ಕಿಂಗ್ ಸ್ಥಳ, ಮಕ್ಕಳ ಉದ್ಯಾನವನ, ಆರ್‌ಎಂಸಿ ಬಸ್ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ನಿರಂತರ ಪೊಲೀಸ್ ಕಾರ್ಯಾಚರಣೆ ಮಾಡಲಾಗುತ್ತಿದೆ.

ಈ ಕಾರ್ಯಾಚರಣೆಯನ್ನು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿದೆ.

ಡಿಸಿಪಿಗಳಾದ ಬಿಂದು ಮಣಿ, ಸುಂದರ್ ರಾಜ್ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಕಾರ್ಯಾಚರಣೆಯಲ್ಲಿ ಎಸಿಪಿಗಳು, ಇನ್ಸಪೆಕ್ಟರ್‌ಗಳು, ಸಬ್ ಇನ್ಸಪೆಕ್ಟರ್‌ಗಳು, ಎಎಸ್‌ಐಗಳು, ಹೆಡ್ ಕಾನ್ಸ್‌ಟೇಬಲ್‌ಗಳು, ಕಾನ್ಸ್‌ಟೇಬಲ್‌ಗಳು, ಮಹಿಳಾ ಸಿಬ್ಬಂದಿ ಸೇರಿ ಎಲ್ಲಾ ವಿಭಾಗದ‌ ಪೊಲೀಸರು ಭಾಗಿಯಾಗಿದ್ದಾರೆ.

ಈ ಕಾರ್ಯಾಚರಣೆ ನಿರಂತರವಾಗಿ ನಡೆಸಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು. ತಮ್ಮ ಸುತ್ತ‌ಮುತ್ತ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ಅಥವಾ ಅನುಮಾನಾಸ್ಪದ ಬೆಳವಣಿಗೆಗಳು ಕಂಡು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ‌ ನೀಡಬೇಕೆಂದು ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮ ಲಾಟ್ಕರ್ ಅವರು ಮನವಿ ಮಾಡಿದ್ದಾರೆ.

ಮಾಹಿತಿ ನೀಡಿದವರ ಗುರುತನ್ನು ಗೌಪ್ಯವಾಗಿಡಲಾಗುವುದು, ಮೈಸೂರು ನಗರದಲ್ಲಿ ಶಾಂತಿ ಕಾಪಾಡಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಕೈ ಜೋಡಿಸಿ ಎಂದು ಸೀಮ ಲಾಟ್ಕರ್ ತಿಳಿಸಿದ್ದಾರೆ.

ಮೈಸೂರು ನಗರದಲ್ಲಿ Read More

ಅಮೆರಿಕಾದಲ್ಲಿ ತೆಲಂಗಾಣದ ಟೆಕ್ಕಿ ಪೊಲೀಸರ ಗುಂಡಿಗೆ ಬಲಿ

ಅಮೆರಿಕ: ರೂಮ್ ಮೇಟ್ ಜೊತೆಗೆ ಹೊಡೆದಾಟದ ನಂತರ ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯ 29 ವರ್ಷದ ಟೆಕ್ಕಿ ಅಮೆರಿಕದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಸಾಫ್ಟ್‌ವೇರ್ ವೃತ್ತಿ ಮಾಡುತ್ತಿದ್ದ ಮೊಹಮ್ಮದ್ ನಿಜಾಮುದ್ದೀನ್ ಎಂಬಾತ ಮೃತಪಟ್ಟಿದ್ದಾರೆ.

ಸೆಪ್ಟೆಂಬರ್ 3 ರಂದು ಸಾಂಟಾ ಕ್ಲಾರಾ ಪೊಲೀಸರು ಕೊಂದಿದ್ದಾರೆ ಎಂದು ಹೇಳಲಾಗಿದೆ.

ಏನಾಯಿತು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಕ್ಷುಲಕ ವಿಚಾರಕ್ಕೆ ರೂಮ್‌ಮೇಟ್‌ನೊಂದಿಗೆ ಜಗಳ ನಡೆದಿದೆ. ಗುರುವಾರ ಬೆಳಗ್ಗೆ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಗೊತ್ತಾಗಿದೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿರುವ ಮೃತ ಮೊಹಮ್ಮದ್ ನಿಜಾಮುದ್ದೀನ್ ತಂದೆ ಹಸ್ನುದ್ದೀನ್ ತಮ್ಮ ಮಗನ ಮೃತದೇಹವನ್ನು ಮಹಬೂಬ್‌ನಗರಕ್ಕೆ ತರಲು ನೆರವು ನೀಡುವಂತೆ ಕೋರಿದ್ದಾರೆ. ವಾಷಿಂಗ್ಟನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಅಧಿಕಾರಿಗಳಿಂದ ತುರ್ತು ಸಹಾಯವನ್ನು ಕೋರಿದ್ದು, ಅಮೆರಿಕದ ಪೊಲೀಸರು ತನ್ನ ಮಗನನ್ನು ಯಾಕೆ ಗುಂಡಿಕ್ಕಿ ಕೊಂದಿದ್ದಾರೆ ಎಂಬುದಕ್ಕೆ ನಿಜವಾದ ಕಾರಣಗಳು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಐಸೆನ್‌ಹೋವರ್ ಡ್ರೈವ್‌ನಲ್ಲಿರುವ ಮನೆಯೊಳಗೆ ತನ್ನ ರೂಮ್‌ಮೇಟ್‌ಗೆ ಇರಿದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಅಧಿಕಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಸಾಂಟಾ ಕ್ಲಾರಾ ಪೋಲೀಸರು ತಿಳಿಸಿದ್ದಾರೆ.

ಅಮೆರಿಕಾದಲ್ಲಿ ತೆಲಂಗಾಣದ ಟೆಕ್ಕಿ ಪೊಲೀಸರ ಗುಂಡಿಗೆ ಬಲಿ Read More

ಗಾಂಜಾ ಶೀನ ಅರೆಸ್ಟ್:14 ಕೆಜಿ ಮಾದಕ ವಸ್ತು ವಶ

ಮೈಸೂರು: ಶ್ರೀನಿವಾಸ್ ಅಲಿಯಾಸ್ ಶೀನಪ ಅಲಿಯಾಸ್ ಗಾಂಜಾ ಶೀನ ಎಂಬ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಮೈಸೂರು ಪೊಲೀಸರು ಮಾದಕದ್ರವ್ಯದ ವಿರುದ್ದ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಗಾಂಜಾ ಸೀನ ಮೈಸೂರು ಬಿಟ್ಟು ಪರಾರಿಯಾಗಿದ್ದ, ಈತ ತನ್ನ ನಿಕಟ ವರ್ತಿಗಳಿಗೆ ಗಾಂಜಾ ಸರಬರಾಜು‌ ಮಾಡುತ್ತಿದ್ದ ಎಂದು ಹೇಳಿದ್ದಾರೆ.

ಈತನ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ‌ ಮಾಡಲಾಗಿತ್ತು. ಕಳೆದ 45 ದಿನಗಳಿಂದ ಈತನ ಪತ್ತೆಗಾಗಿ ಒಡಿಶಾ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡಿಗೆ ವಿವಿಧ ಶೋಧ ತಂಡಗಳನ್ನು ಕಳುಹಿಸಲಾಗಿತ್ತು.

ಭಾನುವಾರ ಮೈಸೂರು ಬಳಿ ಗಾಂಜಾ ಶೀನನನ್ನು ಬಂಧಿಸಲಾಗಿದೆ ಮತ್ತು ಆತನಿಂದ ಸುಮಾರು 14 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾದಕ‌ ದ್ರವ್ಯ ಪತ್ತೆ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಹಾಗೂ ಆರೋಪಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಕಮಿಷನರ್ ಹೇಳಿದ್ದಾರೆ.

ಗಾಂಜಾ ಶೀನ ಅರೆಸ್ಟ್:14 ಕೆಜಿ ಮಾದಕ ವಸ್ತು ವಶ Read More

ಗಣಪತಿ ಮೆರವಣಿಗೆ ವೇಳೆ ಪೊಲೀಸರಿಗೆ ಅವಾಚ್ಯ ಶಬ್ದದಿಂದ ನಿಂದನೆ:ಇಬ್ಬರು ಅರೆಸ್ಟ್

ಮೈಸೂರು: ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಕರ್ತವ್ಯ ನಿರತ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಮುಂದಾದ ಯುವಕರನ್ನ ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರವಿಚಂದ್ರ ಹಾಗೂ ಭುವನ್ ಬಂಧಿತರು. ಕುವೆಂಪುನಗರ ಎಂ ಬ್ಲಾಕ್ ನಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.ಕುವೆಂಪುನಗರ ಠಾಣೆ ಸಿಬ್ಬಂದಿಗಳಾದ ಮಾಲಯ್ಯ ಹಾಗೂ ಸುರೇಶ್ ಅವರನ್ನ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಮೆರವಣಿಗೆ ಶಾಲೆ ಬಳಿ ಬಂದಾಗ ರವಿಚಂದ್ರ ಹಾಗೂ ಭುವನ್ ಬಂದು ಡ್ಯಾನ್ಸ್ ಮಾಡುತ್ತಿದ್ದರು.ನಗಾರಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಾವು ಹೇಳಿದಂತೆ ಬಾರಿಸಬೇಕೆಂದು ಧಂಕಿ ಹಾಕುತ್ತಿದ್ದರು.

ಈ ವೇಳೆ ಕರ್ತವ್ಯ ನಿರತ ಸಿಬ್ಬಂದಿ ಯುವಕರಿಗೆ ಬುದ್ದಿವಾದ ಹೇಳಿದಾಗ ತಿರುಗಿ ಬಿದ್ದ ರವಿಚಂದ್ರನ್ ಹಾಗೂ ಭುವನ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಮುಂದಾದರು.

ತಕ್ಷಣ ಪಿಎಸ್ಸೈ ಮದನ್ ಕುಮಾರ್ ಅವರಿಗೆ ಸಿಬ್ಬಂದಿ ವಿಷಯ ತಿಳಿಸಿದರು.ಆಗ ಮದನ್ ಕುಮಾರ್ ಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾದರು.

ಹಾಗಾಗಿ ರವಿಚಂದ್ರನ್ ಹಾಗೂ ಭುವನ್ ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಗಣಪತಿ ಮೆರವಣಿಗೆ ವೇಳೆ ಪೊಲೀಸರಿಗೆ ಅವಾಚ್ಯ ಶಬ್ದದಿಂದ ನಿಂದನೆ:ಇಬ್ಬರು ಅರೆಸ್ಟ್ Read More