ದರ್ಶನ್ ಅಭಿಮಾನಿಗಳಿಂದ ವೃದ್ಧಾಶ್ರಮದಲ್ಲಿ ಸೇವಾ ಕಾರ್ಯ

ಮೈಸೂರು: ದರ್ಶನ್ ಅಭಿಮಾನಿಗಳು ವೃದ್ಧಾಶ್ರಮದಲ್ಲಿ ಸೇವಾ ಕಾರ್ಯ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ ‘ಡೆವಿಲ್’ ಡಿಸೆಂಬರ್ 11ರಿಂದ ರಾಜ್ಯಾದ್ಯಂತ ತೆರೆ ಕಾಣುತ್ತಿರುವ ಹಿನ್ನೆಲೆಯಲ್ಲಿ, ದರ್ಶನ್ ಅಭಿಮಾನಿಗಳ ಸಂಘದವರು ಹೂಟಗಳ್ಳಿಯಲ್ಲಿರುವ ಪಿ.ಜಿ.ಆರ್.ಎಸ್.ಎಸ್. ಆಶ್ರಯ ಕೇಂದ್ರ ಮತ್ತು ವೃದ್ಧರ ಬೃಂದಾವನನಲ್ಲಿ ವೃದ್ಧ ನಾಗರಿಕರಿಗೆ ಹೊದಿಕೆ ಹಾಗೂ ಅಗತ್ಯ ಸಾಮಗ್ರಿಗಳನ್ನು ವಿತರಿಸುವ ಮೂಲಕ ಹೃದಯಸ್ಪರ್ಶಿ ಸೇವಾ ಕಾರ್ಯ ಮಾಡಿದರು.
ಚಿತ್ರ ಯಶಸ್ವಿಯಾಗಲಿ, ತಂಡದ ಮೇಲೆ ಹಿರಿಯ ನಾಗರಿಕರ ಆಶೀರ್ವಾದ ಇರಲಿ ಎಂಬ ಸಂಕಲ್ಪದೊಂದಿಗೆ ಈ ಸೇವಾ ಚಟುವಟಿಕೆಯನ್ನು ಆಯೋಜಿಸಿದ್ದರು.
ಹಿರಿಯ ನಾಗರಿಕರು ಆಶೀರ್ವಾದ ನೀಡಿ,
ಚಿತ್ರ ಹಿಟ್ ಆಗಲಿ, ದರ್ಶನ್ ಉತ್ತಮ ಗೆಲುವು ಕಾಣಲಿ ಎಂದು ಹಾರೈಸಿದರು.
ಬಿಜೆಪಿ ಮುಖಂಡರಾದ ಕೇಬಲ್ ಮಹೇಶ್,ಕಡಕೋಳ ಜಗದೀಶ್,ಬೈರತಿ ಲಿಂಗರಾಜು,ರಕ್ತದಾನಿ ಮಂಜು,ಸಹನಗೌಡ,ಹರೀಶ್ ನಾಯ್ಡು,ಎಸ್ ಎನ್ ರಾಜೇಶ್,ರವಿಚಂದ್ರ,ರಾಕೇಶ್ ಸೇರಿದಂತೆ ಅನೇಕರು ಹಾಜರಿದ್ದರು.

ದರ್ಶನ್ ಅಭಿಮಾನಿಗಳಿಂದ ವೃದ್ಧಾಶ್ರಮದಲ್ಲಿ ಸೇವಾ ಕಾರ್ಯ Read More

ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು, ವೃದ್ಧರ ಬೃಂದಾವನಕ್ಕೆ ಲಯನ್ಸ್ ಕ್ಲಬ್ ನಿಂದ ಕೊಡುಗೆ

ಮೈಸೂರು: ಮೈಸೂರಿನ ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನಕ್ಕೆ ಲಯನ್ ಕ್ಲಬ್ ಆಫ್ ಮೈಸೂರು ಎಲೆಟ್ ವತಿಯಿಂದ‌ ವಾಕರ್ ಹಾಗೂ ವಾಕಿಂಗ್ ಸ್ಟಿಕ್ ನೀಡಲಾಯಿತು.

ಬುದವಾರ ಸಂಜೆ ಲಯನ್ ಕ್ಲಬ್ ಆಫ್ ಮೈಸೂರು ಎಲೆಟ್ ಪದಾಧಿಕಾರಿಗಳು ಆಗಮಿಸಿ,ಪಿ ಜಿ ಆರ್ ಎಸ್ ಎಸ್ ಆಶ್ರಮದ ನಿರಾಶ್ರಿತರಿಗೆ ನಾಲ್ಕು ವಾಕರ್ ಮತ್ತು ನಾಲ್ಕು ವಾಕಿಂಗ್ ಸ್ಟಿಕ್ ಗಳನ್ನು ನೀಡಿದರು.

ಈ ವೇಳೆ ಲ. ಚಂದ್ರಶೇಖರ,ಲ. ಹೇಮಂತ್,
ಲ. ಸುರೇಶ ಬಿ.ಕೆ,ಲ. ಅಭಿಜೀತ್,
ಲ.ಕಮಲ ತುಳಸಿ,ಲ. ಮೇಟಿ,
ಲ. ಉಮಾಪತಿ,ಲ. ದರ್ಶನ್ ಅವರುಗಳ ಸಮಕ್ಷಮದಲ್ಲಿ ವಾಕರ್,ವಾಕಿಂಗ್ ಸ್ಟಿಕ್ ಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ತಾಯಂದಿರ ಆಶೀರ್ವಾದದೊಂದಿಗೆ ಲಯನ್ ಕ್ಲಬ್ ಆಫ್ ಮೈಸೂರು ಎಲೆಟ್ ಪದಾಧಿಕಾರಿಗಳನ್ನು
ಸಲ್ಲಿಸಲಾಯಿತು.

ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು, ವೃದ್ಧರ ಬೃಂದಾವನಕ್ಕೆ ಲಯನ್ಸ್ ಕ್ಲಬ್ ನಿಂದ ಕೊಡುಗೆ Read More

ಪಿ‌ ಜಿ ಆರ್ ಎಸ್ ಎಸ್ ನಿರಾಶ್ರಿತರು, ವೃದ್ಧರ ಬೃಂದಾವನಕ್ಕೆ ಸ್ವಾತಿ ರಾಜ್ ಭೇಟಿ

ಮೈಸೂರು: ಮೈಸೂರಿನ ಪಿ‌ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನಕ್ಕೆ ಸಮಾಜ ಸೇವಕರಾದ ಸ್ವಾತಿ ರಾಜ್ ಅವರು ಆಗಮಿಸಿ ತಮ್ಮ ಹುಟ್ಟುಹಬ್ಬವನ್ನು ಎಲ್ಲಾ ತಾಯಂದಿರ ಸಮ್ಮುಖದಲ್ಲಿ ಆಚರಿಸಿಕೊಂಡರು.

ಈ ವೇಳೆ ದಿನಸಿ ಪದಾರ್ಥ ಮತ್ತು ಎಲ್ಲರಿಗೂ ಬೆಡ್ ಶೀಟ್ ಕೊಡುವ ಮುಖಾಂತರ ಸ್ವಾತಿ ಅವರು ಸರಳವಾಗಿ ಹುಟ್ಟುಹಬ್ಬವನ್ನು ಅವರ ಸ್ನೇಹಿತರ ಜೊತೆ ಸೇರಿ ಆಚರಣೆ ಮಾಡಿಕೊಂಡರು.

ಎಲ್ಲಾ ತಾಯಂದಿರಿಗೆ ಸಿಹಿ ಹಂಚುವ ಮುಖಾಂತರ ಅವರ ಆಶೀರ್ವಾದವನ್ನು ಪಡೆದರು.

ತಾಯಿಯೇ ಮೊದಲ ದೇವರು ತಾಯಿಯನ್ನು ಕಾಪಾಡುವಲ್ಲಿ ಪಿ‌ ಜಿ ಆರ್ ಎಸ್ ಎಸ್ ನ ಎಲ್ಲಾ ಅಧ್ಯಕ್ಷರು ಮತ್ತು ನಿರ್ದೇಶಕರು ಶ್ರಮಿಸುತ್ತಿದ್ದಾರೆ ಎಂದು ಧನ್ಯವಾದಗಳನ್ನು ತಿಳಿಸಿದರು.

ಮುಂದಿನ ದಿನದಲ್ಲಿ ನಾನು ಮತ್ತು ನನ್ನ ಸ್ನೇಹಿತರು ಹೆಚ್ಚಿನ ರೀತಿಯಲ್ಲಿ ಆಶ್ರಮಕ್ಕೆ ಸಹಕಾರ ನೀಡುತ್ತೇವೆ ಎಂದು ಸ್ವಾತಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಖಜಾಂಚಿ ಮಂಜುಳಾ, ರಾಜ್ಯ ಸಂಚಾಲರಾದ ರಕ್ತದಾನಿ ಮಂಜು,ಚೈತ್ರ, ಹರಿಣಿ ಮತ್ತು ತಾಯಂದಿರು ಉಪಸ್ಥಿತರಿದ್ದರು.

ಪಿ‌ ಜಿ ಆರ್ ಎಸ್ ಎಸ್ ನಿರಾಶ್ರಿತರು, ವೃದ್ಧರ ಬೃಂದಾವನಕ್ಕೆ ಸ್ವಾತಿ ರಾಜ್ ಭೇಟಿ Read More