ಇಮ್ರಾನ್ ಖಾನ್ ಭೇಟಿಯಾದ‌ ಸಹೋದರಿ:ಸಾವಿನ ವದಂತಿಗಳಿಗೆ ತೆರೆ

ಪಾಕಿಸ್ತಾನ: ಪಾಕ್ ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಾವಿನ ಊಹಾಪೋಹದ ಸುದ್ದಿ ಹರಡಿದ್ದರ ಬೆನ್ನಲ್ಲೆ ಜೈಲಿನಲ್ಲಿ ಇಮ್ರಾನ್ ರನ್ನು ಸಹೋದರಿ ಡಾ.ಉಜ್ಮಾ ಖಾನಮ್ ಭೇಟಿಯಾಗಿ‌ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ವದಂತಿಗಳ ನಡುವೆ ಪಾಕಿಸ್ತಾನ ಸರ್ಕಾರ ಜೈಲಿನಲ್ಲಿ ಇಮ್ರಾನ್ ಖಾನ್ ಭೇಟಿಯಾಗಲು ಅವರ ಸಹೋದರಿಗೆ ಅವಕಾಶ ನೀಡಿತ್ತು.

ಮಂಗಳವಾರ ರಾವಲ್ಪಿಂಡಿಯ ಅಡಿಯಾಲ ಜೈಲಿನ ಅಧಿಕಾರಿಗಳು ಸಹೋದರನನ್ನು ಭೇಟಿ ಮಾಡಲು ಉಜ್ಮಾ ಖಾನಮ್ ಅವರಿಗೆ ಅನುಮತಿ ನೀಡಿತ್ತು.

ಇಮ್ರಾನ್ ಖಾನ್ ಅವರ ಭೇಟಿಯನ್ನು ನಿರ್ಬಂಧಿಸಲಾಗಿದೆ ಎಂದು ಆರೋಪಿಸಿ ಪಿಟಿಐ ಸದಸ್ಯರು ಇಸ್ಲಾಮಾಬಾದ್ ಹೈಕೋರ್ಟ್ ಮತ್ತು ಅಡಿಯಾಲ ಜೈಲಿನ ಹೊರಗೆ ಪ್ರತಿಭಟನೆ ಕೂಡಾ ನಡೆಸಿದ್ದರು.

ಕಳೆದ ವಾರ, ಇಮ್ರಾನ್ ಖಾನ್ ಅವರ ಮಗ ಮತ್ತು ಸಹೋದರಿ ಇಬ್ಬರೂ ಜೈಲಿನಲ್ಲಿರುವ ಇಮ್ರಾನ್‌ ಜೀವಂತವಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಕುಟುಂಬಕ್ಕೆ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ನ್ಯಾಯಾಲಯದ ಅನುಮತಿ ನೀಡಿದ್ದರೂ, ಅವರ ಸಹೋದರಿಯರಿಗೆ ಮತ್ತು ‌ಮಕ್ಕಳಿಗೆ ಅವರನ್ನು ಭೇಟಿ ಮಾಡಲು ಅವಕಾಶ ನಿರಾಕರಿಸಲಾಗಿದೆ ಎಂದು ವರದಿಯಾದ ನಂತರ ಅವರ ಸಾವಿನ ವದಂತಿಗಳು ಹರಡಿದವು.

ಯಾವುದೇ ಫೋನ್ ಕರೆಗಳು ಬಂದಿಲ್ಲ. ಯಾವುದೇ ಸಭೆಗಳು ನಡೆದಿಲ್ಲ. ಜೀವನದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ನನ್ನ ಸಹೋದರ ಮತ್ತು ನಾನು ನಮ್ಮ ತಂದೆಯೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಇಮ್ರಾನ್ ಪುತ್ರ ಖಾಸಿಮ್ ಖಾನ್ ಹೇಳಿದ್ದಾರೆ.

ನನ್ನ ಸಹೋದರ ಇಮ್ರಾನ್ ಜೀವಂತವಾಗಿದ್ದರೂ ಏಕಾಂತ ಬಂಧನದಲ್ಲಿ ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ ಎಂದು ಅವರ ಸಹೋದರಿ ಡಾ. ಉಜ್ಮಾ ಖಾನ್ ಹೇಳಿದ್ದಾರೆ.

ಇಮ್ರಾನ್ ಖಾನ್ ಭೇಟಿಯಾದ‌ ಸಹೋದರಿ:ಸಾವಿನ ವದಂತಿಗಳಿಗೆ ತೆರೆ Read More

ಭಾರತದೊಂದಿಗೆ ಶಾಂತಿ ಮಾತುಕತೆಗೆ ಸಿದ್ದ:ಪಾಕ್ ಪ್ರಧಾನಿ

ಇಸ್ಲಾಮಾಬಾದ್: ಭಾರತದೊಂದಿಗೆ ಶಾಂತಿ ಮಾತುಕತೆಗೆ ಸಿದ್ದರಿದ್ದೇವೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ.

ನಾಲ್ಕು ದೇಶಗಳ ಪ್ರವಾಸದ ವೇಳೆ ಮಾತನಾಡಿರುವ ಅವರು, ಕಾಶ್ಮೀರ, ಭಯೋತ್ಪಾದನೆ, ನೀರು ಮತ್ತು ವ್ಯಾಪಾರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಭಾರತದೊಂದಿಗೆ ಮಾತುಕತೆ ನಡೆಸುವ ಇಚ್ಚೆ ಇದೆ ಎಂದು ಹೇಳಿದ್ದಾರೆ.

ಟರ್ಕಿಯಿಂದ ಇರಾನ್​ಗೆ ಬಂದಿಳಿದ ಷರೀಫ್​ ಅವರನ್ನು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಸಾದಾಬಾದ್ ಅರಮನೆಯಲ್ಲಿ ಸ್ವಾಗತಿಸಿದರು. ಈ ವೇಳೆ ಪೆಜೆಶ್ಕಿಯಾನ್ ಜೊತೆಗೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಷರೀಫ್, ಶಾಂತಿಗಾಗಿ ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ.

ಕಾಶ್ಮೀರ, ನೀರು ಸೇರಿದಂತೆ ಎಲ್ಲ ಬಿಕ್ಕಟ್ಟನ್ನು ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ. ನಾವು ನೆರೆಯ ದೇಶದೊಂದಿಗೆ ವ್ಯಾಪಾರ ಮತ್ತು ಭಯೋತ್ಪಾದನೆ ಎದುರಿಸುವ ಕುರಿತು ಮಾತುಕತೆ ನಡೆಸಲು ಸಿದ್ಧರಿದ್ದೇವೆ ಎಂದಿದ್ದಾರೆ.

ಇದೇ ವೇಳೆ ಭಾರತ ಯುದ್ಧವನ್ನು ಆಯ್ಕೆ ಮಾಡಿಕೊಂಡಲ್ಲಿ ಅದನ್ನು ಎದುರಿಸಲೂ ಸಿದ್ಧ ಎಂದು ಕೂಡಾ ಶಹಬಾಜ್ ಹೇಳಿದ್ದಾರೆ.

ಒಂದು ವೇಳೆ ಆಕ್ರಮಣಕಾರಿ ಮಾರ್ಗ ಆರಿಸಿಕೊಂಡರೆ, ನಾವು ನಮ್ಮ ಪ್ರದೇಶವನ್ನು ರಕ್ಷಿಸಿಕೊಳ್ಳುವುದು ಗೊತ್ತಿದೆ,ಅವರು ಶಾಂತಿಯನ್ನು ಸ್ವೀಕರಿಸಿದರೆ, ನಾವು ಪ್ರಾಮಾಣಿಕವಾಗಿ ಶಾಂತಿಯನ್ನು ಬಯಸುತ್ತೇವೆ ಎಂದು ತಿಳಿಸಿದ್ದಾರೆ.

ಭಾರತದೊಂದಿಗಿನ ನಾಲ್ಕು ದಿನಗಳ ಸೇನಾ ಸಂಘರ್ಷದಲ್ಲಿ ನಾವು ಗೆದ್ದಿದ್ದೇವೆ ಎಂದು ಶಹಬಾಜ್ ಷರೀಫ್ ಸಮರ್ಥಿಸಿಕೊಂಡಿದ್ದಾರೆ.

ಭಾರತದೊಂದಿಗೆ ಶಾಂತಿ ಮಾತುಕತೆಗೆ ಸಿದ್ದ:ಪಾಕ್ ಪ್ರಧಾನಿ Read More