ಡಿಜಿಟಲ್ ಅರೆಸ್ಟ್ ಭೀತಿ:27.50 ರೂ ಕಳೆದುಕೊಂಡ ನರ್ಸ್

ಮೈಸೂರು: ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿಸಿದ ವಂಚಕರು ಸರ್ಕಾರಿ ಆಸ್ಪತ್ರೆ ನರ್ಸ್ ಒಬ್ಬರಿಗೆ ಬರೋಬ್ಬರಿ 27,49,999 ರೂ ವಂಚಿಸಿದ ಪ್ರಕರಣ ಸೆನ್ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಮೈಸೂರಿನ ಬೃಂದಾವನ ಬಡಾವಣೆ ವಾಸಿ ಸರ್ಕಾರಿ ಆಸ್ಪತ್ರೆ ಹಿರಿಯ ನರ್ಸ್ ಅಮರಜಾ ಪಿ ಹೆಗ್ಗಡೆ ಹಣ ಕಳೆದುಕೊಂಡವರು.

ಕೆಲ ದಿನಗಳ ಹಿಂದೆ ಮುಂಬೈ ಕ್ರೈಂ ಬ್ರಾಂಚ್ ನಿಂದ ಎಂದು ಹೇಳಿ ವ್ಯಕ್ತಿಯೊಬ್ಬ ನರೇಶ್ ಗೋಯಲ್ ಅವರು ಮನಿಲಾಂಡ್ರಿಂಗ್ ನಲ್ಲಿ ಸಿಕ್ಕಿಬಿದ್ದಿದ್ದಾರೆ. ನಿಮ್ಮ ಖಾತೆಗೆ 20% ಕಮೀಷನ್ ವರ್ಗಾವಣೆ ಆಗಿದೆ.ಆದ್ದರಿಂದ ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನ ಪರಿಶೀಲಿಸಬೇಕೆಂದು ಬೆದರಿಕೆ ಹುಟ್ಟಿಸಿದ್ದಾರೆ.

ತನಿಖೆಗೆ ಸಹಕರಿಸದಿದ್ದರೆ ಅರೆಸ್ಟ್ ಮಾಡುವುದಾಗಿ ತಿಳಿಸಿದ್ದಾರೆ.ನಂತರ ಬ್ಯಾಂಕ್ ಮೂಲಕ 99,999 ರೂ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಬ್ಯಾಂಕ್ ಖಾತೆಯ ಸ್ಕ್ರೀನ್ ಶಾಟ್ ಪಡೆದುಕೊಂಡು ಆರ್ ಟಿ ಜಿ ಎಸ್ ಟ್ರಾಕ್ ಮಾಡಬೇಕೆಂದು ತಿಳಿಸಿ ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಬೆದರಿಸಿ 4.5 ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ನಂತರ ಪತಿಯ ಖಾತೆಯಿಂದಲೂ 22 ಲಕ್ಷ ವರ್ಗಾವಣೆ ಮಾಡಿಕೊಂಡು ನಿಮ್ಮ ಪಿಎಫ್ ಖಾತೆಯ ಹಣ ವರ್ಗಾವಣೆ ಮಾಡುವಂತೆ ತಿಳಿಸಿದಾಗ ಅಮರಜಾ ಪಿ ಹೆಗ್ಗಡೆ ಅವರಿಗೆ ತಾವು ಮೋಸ ಹೋಗಿರುವುದು ಖಚಿತವಾಗಿದೆ.

ಈ ಸಂಬಂಧ ಸೆನ್ ಪೊಲೀಸ್ ಠಾಣೆಗೆ‌ ನರ್ಸ್ ದೂರು ನೀಡಿದ್ದು,ಪ್ರಕರಣ ದಾಖಲಾಗಿದೆ.

ಡಿಜಿಟಲ್ ಅರೆಸ್ಟ್ ಭೀತಿ:27.50 ರೂ ಕಳೆದುಕೊಂಡ ನರ್ಸ್ Read More

ಕೇರಳ ಮೂಲದ ನರ್ಸ್ ಗೆ ಯಮೆನ್ ನಲ್ಲಿಜುಲೈ 16 ರಂದು ಗಲ್ಲು ಶಿಕ್ಷೆ

ಯಮೆನ್: ಕೇರಳದ ನಿಮಿಷಾ ಪ್ರಿಯಾ ಎಂಬ ನರ್ಸ್ ಒಬ್ಬರಿಗೆ ಯೆಮೆನ್ ನಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

ನಿಮಿಷಾ ಪ್ರಿಯಾ ಗೆ ಜುಲೈ 16 ರಂದು ಗಲ್ಲು ವಿಧಿಸಲು ದಿನ ನಿಗದಿಪಡಿಸಲಾಗಿದೆ. ಯೆಮೆನ್ ಪ್ರಜೆಯ ಕೊಲೆ ಆರೋಪದ ಮೇಲೆ ನರ್ಸ್ ದೋಷಿ ಎಂದು ಸಾಬೀತಾಗಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿವಾಸಿ ನಿಮಿಷಾ ಪ್ರಿಯಾ ಅವರು ಕೊಲೆ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದು,
2017 ರಿಂದ ಯೆಮೆನ್ ಜೈಲಿನಲ್ಲಿದ್ದಾರೆ.

ನರ್ಸ್ ನಿಮಿಷಾ ಪ್ರಿಯಾ ಒಂದು ದಶಕದಿಂದ ಯೆಮೆನ್‌ನಲ್ಲಿ ನೆಲೆಸಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು. ಆರ್ಥಿಕ ಕಾರಣಗಳಿಂದಾಗಿ ಅವರ ಪತಿ ಮತ್ತು ಮಗಳು ಭಾರತಕ್ಕೆ ಮರಳಿದ ನಂತರ, ಪ್ರಿಯಾ ಯಮೆನ್ ಪ್ರಜೆ ಲಾಲ್ ಅಬೊ
ಮೆಹದಿ ಅವರ ಸಹಾಯದಿಂದ ಯೆಮೆನ್‌ನಲ್ಲಿ ತನ್ನದೇ ಆದ ಕ್ಲಿನಿಕ್ ಇಟ್ಟುಕೊಂಡಿದ್ದರು.

ನಿಮಿಷಾ ಪ್ರಿಯಾಗೆ ಸೇರಿದ ಪಾಸ್ಪೋರ್ಟ್ ಅನ್ನು ಕಿತ್ತುಕೊಂಡಿದ್ದ ಲಾಲ್ ಅಬೊ ಮೆಹದಿ ಎಂಬಾತನಿಂದ‌ ಪಾಸ್‌ಪೋರ್ಟ್ ವಾಪಸ್‌ ಪಡೆಯಲು‌ ನರ್ಸ್ ಪ್ರಯತ್ನಿಸಿದ್ದರು ಆದರೆ ಆತ ಕೊಟ್ಟಿರಲಿಲ್ಲ.

ಕಡೆಗೆ ಆಕೆ ಹತಾಶಳಾಗಿ ಮೆಹದಿಗೆ ಮತ್ತು ಬರುವ ಇಂಜೆಕ್ಷನ್ ಚುಚ್ಚಿದ್ದಳು.ಅದು ಓವರ್ ಡೋಸ್‌ ಆಗಿ ಆತ ಮೃತಪಟ್ಟಿದ್ದ. ಇದಾದ ನಂತರ ಆಕೆ ದೇಶ ತೆರೆಯಲು ಮುಂದಾಗಿದ್ದರು.ವಿಷಯ ಗೊತ್ತಾಗುತ್ತಿದ್ದಂತೆ
ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದರು.

2020 ರಲ್ಲಿ ವಿಚಾರಣಾ ನ್ಯಾಯಾಲಯವು ಮರಣದಂಡನೆ ವಿಧಿಸಿತು ಮತ್ತು ಯೆಮೆನ್‌ನ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ನವೆಂಬರ್ 2023 ರಲ್ಲಿ ನರ್ಸ್ ಮನವಿಯನ್ನು ತಿರಸ್ಕರಿಸಿತು.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್‌ನ ನರ್ಸ್ ನಿಮಿಷಾ ಪ್ರಿಯಾ 2008 ರಲ್ಲಿ ಯೆಮೆನ್‌ಗೆ ತೆರಳಿದ್ದರು.

ಯೆಮೆನ್ ಪ್ರಜೆಯನ್ನು ಹತ್ಯೆಗೈದ ಆರೋಪದಲ್ಲಿ ಯೆಮೆನ್ ನಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಅವರು ಕೇರಳದ ನರ್ಸ್‌ಗೆ ಮರಣದಂಡನೆ ಶಿಕ್ಷೆಯನ್ನು ಅನುಮೋದಿಸಿದ ನಂತರ. ಯೆಮೆನ್ ಪ್ರಜೆಯನ್ನು ಕೊಂದಿದ್ದಕ್ಕಾಗಿ ಆಕೆಗೆ ಶಿಕ್ಷೆ ವಿಧಿಸಲು ನಿರ್ಧರಿಸಿ ದಿನಾಂಕ ನಿಗದಿಗೊಳಿಸಲಾಗಿದೆ.

ಕೇರಳ ಮೂಲದ ನರ್ಸ್ ಗೆ ಯಮೆನ್ ನಲ್ಲಿಜುಲೈ 16 ರಂದು ಗಲ್ಲು ಶಿಕ್ಷೆ Read More