ಕೆ ಆರ್ ಬ್ಯಾಂಕಿನ ನೂತನ ದಿನದರ್ಶಿಕೆ ಬಿಡುಗಡೆ

ಮೈಸೂರು: ಮೈಸೂರಿನ ಅಗ್ರಹಾರದ ಕೃಷ್ಣರಾಜೇಂದ್ರ ಬ್ಯಾಂಕಿನ 2026ರ ದಿನದರ್ಶಿಕೆಯನ್ನು ಹೊರತರಲಾಗಿದ್ದು,
ಭಾನುವಾರ ಬಿಡುಗಡೆ ಮಾಡಲಾಯಿತು.

ಕೆ.ಆರ್. ಬ್ಯಾಂಕಿನ ಅಧ್ಯಕ್ಷ ಬಸವರಾಜು ಬಸಪ್ಪ ಹಾಗೂ ಸಹಕಾರ ಇಲಾಖೆಯ ಉಪ ನಿಬಂಧಕ ವೀರೇಂದ್ರ ಅವರು ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿದರು.

ಈ ವೇಳೆ ಉಪ ನಿಬಂಧಕ ವೀರೇಂದ್ರ ಅವರು ಮಾತನಾಡಿ, ಗ್ರಾಹಕರಿಗೆ ಸೇವಾ ಸೌಲಭ್ಯ ಬ್ಯಾಂಕಿನ ವತಿಯಿಂದ ನಿರಂತರವಾಗಿ ತಲುಪಲಿ. ಬ್ಯಾಂಕ್ ಯಶಸ್ವಿಯಾಗಿ ಮುಂದುವರಿಯಲಿ, ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನು ಇಲಾಖೆ ಕೊಡಲಿದೆ ಎಂದು ತಿಳಿಸಿದರು.

ಬ್ಯಾಂಕಿನ ಅಧ್ಯಕ್ಷ ಬಸವಾರಾಜು ಬಸಪ್ಪ ಮಾತನಾಡಿ, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೀಕೃತ ಕಟ್ಟಡವನ್ನು ಉದ್ಘಾಟಿಸಿದರು ಎಂದು ಹೇಳಿದರು.

ಬ್ಯಾಂಕಿನ ಅಭಿವೃದ್ಧಿಗೆ ನಮ್ಮ ಆಡಳಿತ ಮಂಡಳಿಯ ಎಲ್ಲರ ಸಹಕಾರವಿದೆ. ಮುಂದಿನ ದಿನಗಳಲ್ಲಿ ಹೊಸ ಹೊಸ ಶಾಖೆಗಳನ್ನು ತೆರೆಯುವ ಆಲೋಚನೆ ಇದೆ. ಬ್ಯಾಂಕಿನ ಎಲ್ಲ ಸದಸ್ಯರಿಗೆ ಕ್ಯಾಲೆಂಡರ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ನಂ.ಸಿದ್ದಪ್ಪ, ಹೆಚ್. ವಾಸು, ಪ್ರತಿದ್ವನಿ ಪ್ರಸಾದ್, ನಾಗಜ್ಯೋತಿ, ಪಂಚಾಕ್ಷರಿ, ಗಣೇಶ ಮೂರ್ತಿ, ಶಿವಪ್ರಕಾಶ್, ಅಧಿಕಾರಿಗಳಾದ ಸಹಾಯಕ ನಿರೀಕ್ಷಕ ಕೆ.ರಾಜು, ಕೆಆರ್ ಬ್ಯಾಂಕಿನ ಮ್ಯಾನೇಜರ್ ಅನಂತ ವೀರಪ್ಪ ಮತ್ತಿತರರು ಹಾಜರಿದ್ದರು.

ಕೆ ಆರ್ ಬ್ಯಾಂಕಿನ ನೂತನ ದಿನದರ್ಶಿಕೆ ಬಿಡುಗಡೆ Read More

ಜನರಿಗೆ ಹೋಳಿಗೆ ವಿತರಿಸಿ ಕನಕ ಜಯಂತಿ

ಮೈಸೂರು: ಮೈಸೂರಿನಲ್ಲಿ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜು ಬಸಪ್ಪ ಅವರ ನೇತೃತ್ವದಲ್ಲಿ ಸಾರ್ವ ಜನಿಕರಿಗೆ ಹೋಳಿಗೆ ಹಂಚುವ ಮೂಲಕ ಕನಕ ದಾಸರ ಜಯಂತಿಯನ್ನು ವಿಶೇಷವಾಗಿ ಆಚಾರಿಸಲಾಯಿತು.

ಕುಲ, ಜಾತಿ ,ಮತಗಳ ತಾರತಮ್ಯವನ್ನು ವಿರೋಧಿಸಿ ಸಮಾನತೆ ಸಾರಿದ ಕನಕದಾಸರ ಜಯಂತಿಯನ್ನು ಸಾರ್ವಜನಿಕರೊಂದಿಗೆ ಸೇರಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂತ,ಕವಿ ಕನಕದಾಸರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿ ಪೂಜೆ ಮಾಡಿ ನಂತರ ಸರ್ವಜನರಿಗೆ ಹೋಳಿಗೆ ವಿತರಲಿಸಲಾಯಿತು.

ಕನಕದಾಸರ ಜೀವನ ಮತ್ತು ಸಾಧನೆ, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಸಮಾಜದಲ್ಲಿ ಎಲ್ಲರೂ ಸಮಾನರು ಎಂಬುದನ್ನು ಮರೆಯಬಾರದು ಎಂದು ಬಸವರಾಜ್ ಬಸಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಸವರಾಜು ಬಸಪ್ಪ ಅವರಿಗೆ ಮಂಜೇಶ್, ವಿದ್ಯಾ ಮತ್ತಿತರರು ಸಾಥ್ ನೀಡಿದರು.

ಜನರಿಗೆ ಹೋಳಿಗೆ ವಿತರಿಸಿ ಕನಕ ಜಯಂತಿ Read More

ಕೋರ್ಟ್ ತೀರ್ಪು ಸ್ವಾಗತಾರ್ಹ:ಬಸವರಾಜ ಬಸಪ್ಪ

ಮೈಸೂರು: ಮುಡಾ ಪ್ರಕರಣ ಸಿಬಿಐಗೆ ಒಪ್ಪಿಸಬೇಕೆಂದು ಕೋರಿದ ಪ್ರಕರಣ ಹೈಕೋರ್ಟ್‌ ತಿರಸ್ಕರಿಸಿರುವುದು ಸ್ವಾಗತಾರ್ಹ ಎಂದು ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಕೊಡುತ್ತ ಬಂದಿರುವ ಬಿಜೆಪಿ ನಾಯಕರಿಗೆ ಇಂದಿನ ಹೈಕೋರ್ಟ್ ತೀರ್ಪು ಬುದ್ದಿ ಕಲಿಸಿದಂತಾಗಿದೆ ಎಂದು ಅವರು ಹೇಳಿದ್ದಾರೆ.

ಮುಡಾ ಪ್ರಕರಣದ ಬಗ್ಗೆ ಈಗಾಗಲೇ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಆದರೆ ಸಿಬಿಐ ಮೂಲಕ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕಬೇನ್ನುವ ಬಿಜೆಪಿ ನಾಯಕರ ಕನಸಿಗೆ ಭಂಗವಾಗಿದೆ,ಇನ್ನಾದರೂ ನಾಯಕರು ಎಚ್ಚೆತ್ತು ಕೊಳ್ಳಲಿ ಎಂದು ಬಸವರಾಜ್ ಬಸಪ್ಪ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಬಿಜೆಪಿ ಆಡಳಿತದಲ್ಲಿಯೇ 50:50 ರಂತೆ ಸೈಟ್ ಹಂಚಿಕೆ ನಿಯಮ ಮಾಡಿಕೊಂಡು, ಅದೇ ಅವಧಿಯಲ್ಲಿ ಸೈಟ್ ಹಂಚಿಕೆ ಮಾಡಿ ಸಿದ್ದರಾಮಯ್ಯನವರದ್ದೇ ತಪ್ಪು ಎಂದು ಸಾರಲು ಹೊರಟವರಿಗೆ ಹೈಕೋರ್ಟ್ ನೀಡಿದ ತೀರ್ಪು ಚಾಟಿ ಏಟು ನೀಡಿದಂತಾಗಿದೆ
ಎಂದು ಅವರು ತಿಳಿಸಿದ್ದಾರೆ.

ಕೋರ್ಟ್ ತೀರ್ಪು ಸ್ವಾಗತಾರ್ಹ:ಬಸವರಾಜ ಬಸಪ್ಪ Read More

ಕೆ ಆರ್ ಬ್ಯಾಂಕ್ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

ಮೈಸೂರು: ಮೈಸೂರು ಅಗ್ರಹಾರ ವೃತದಲ್ಲಿರುವ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕಿನಲ್ಲಿ 2025ರ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.

ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ನಂ ಸಿದ್ದಪ್ಪ ಅವರು ಕ್ಯಾಲೆಂಡರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು

ಈ ಸಂದರ್ಭದಲ್ಲಿ ಕೆ ಆರ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಬಸಪ್ಪ, ಉಪಾಧ್ಯಕ್ಷರಾದ
ಸರ್ವಮಂಗಳ, ಹೆಚ್ ವಿ ಭಾಸ್ಕರ್, ಎಂ ಡಿ ಪಾರ್ಥಸಾರಥಿ, ಜಿ ಎಂ ಪಂಚಾಕ್ಷರಿ, ಶಿವಪ್ರಕಾಶ್, ಗಣೇಶ್ ಮೂರ್ತಿ,ಅರುಣ್ ಸಿದ್ದಪ್ಪ, ಕಾರ್ಯದರ್ಶಿ ಅನಂತ್ ವೀರಪ್ಪ , ಸಿಬ್ಬಂದಿ ಪ್ರಕಾಶ್, ಗಿರೀಶ್, ಎಚ್ ಸಿ ಮಹದೇವಸ್ವಾಮಿ, ಸಂತೋಷ್ ಮತ್ತಿತರರು ಹಾಜರಿದ್ದರು.

ಕೆ ಆರ್ ಬ್ಯಾಂಕ್ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ Read More

ಕೆ ಆರ್ ಬ್ಯಾಂಕ್ ಅಧ್ಯಕ್ಷರಾಗಿ ಬಸವರಾಜ್ ಬಸಪ್ಪ,ಉಪಾಧ್ಯಕ್ಷರಾಗಿ ಸರ್ವಮಂಗಳ ಆಯ್ಕೆ

ಮೈಸೂರು: ಮೈಸೂರಿನ ಪ್ರತಿಷ್ಠಿತ ಶ್ರೀ ಕೃಷ್ಣ ರಾಜೇಂದ್ರ ಸಹಕಾರಿ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಬಸವರಾಜ್ ಬಸಪ್ಪ ಹಾಗೂ ಉಪಾಧ್ಯಕ್ಷರಾಗಿ ಎಚ್ ಎನ್ ಸರ್ವಮಂಗಳ ಆಯ್ಕೆಯಾಗಿದ್ದಾರೆ.

ಶ್ರೀ ಕೃಷ್ಣ ರಾಜೇಂದ್ರ ಸಹಕಾರಿ ಬ್ಯಾಂಕ್ 2024 -2029ನೇ ಸಾಲಿನ
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಅಗ್ರಹಾರದಲ್ಲಿರುವ ಬ್ಯಾಂಕ್ ನ ಕಚೇರಿಯಲ್ಲಿ ಸಂಘದ ರಿಟರ್ನಿಂಗ್ ಅಧಿಕಾರಿ ಬಿ ರಾಜು ಚುನಾವಣೆ ಪ್ರಕ್ರಿಯೆ ನಡೆಸಿದರು.

ಚುನಾವಣೆಯಲ್ಲಿ ಮಾಜಿ ಉಪಾಧ್ಯಕ್ಷರಾದ ಬಸವರಾಜ್ ಬಸಪ್ಪ ಅವರು ಅಧ್ಯಕ್ಷರಾಗಿಯೂ, ಮಾಜಿ ನಿರ್ದೇಶಕರಾದ ಎಚ್ ಎನ್ ಸರ್ವಮಂಗಳ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಈ ವೇಳೆ ಬ್ಯಾಂಕ್ ನಿರ್ದೇಶಕ ಹೆಚ್ ವಿ ಭಾಸ್ಕರ್, ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ ಡಿ ಪಾರ್ಥಸಾರಥಿ (ಪಾತಿ), ಜಿ ಎಂ ಪಂಚಾಕ್ಷರಿ, ಟಿ ವಿ ಗಣೇಶ್ ಮೂರ್ತಿ ತಾಯೂರು, ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಜಿ ರಾಘವೇಂದ್ರ, ಲೋಕೇಶ್ ಕುಮಾರ್,ಶಿವಮೂರ್ತಿ, ಮಲ್ಲೇಶ್, ಮಹಾನ್ ಶ್ರೇಯಸ್, ಮಂಜಪ್ಪ, ತೀರ್ಥ ಕುಮಾರ್, ಮಂಜುನಾಥ್ ಮತ್ತು ಬ್ಯಾಂಕ್ ಸಿಬ್ಬಂದಿ ಹಾಗೂ ಸ್ನೇಹಿತರು ಶುಭ ಕೋರಿದರು.

ಕೆ ಆರ್ ಬ್ಯಾಂಕ್ ಅಧ್ಯಕ್ಷರಾಗಿ ಬಸವರಾಜ್ ಬಸಪ್ಪ,ಉಪಾಧ್ಯಕ್ಷರಾಗಿ ಸರ್ವಮಂಗಳ ಆಯ್ಕೆ Read More