ಬಲೂಚಿಸ್ತಾನ್ ಅರೆಸೇನಾ ಪಡೆ ಕಚೇರಿ ಬಳಿ ಮಹಿಳಾ ಆತ್ಮಹುತಿ ಬಾಂಬರ್ ಸ್ಪೋಟ
ಕರಾಚಿ: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಅರೆಸೇನಾ ಪಡೆಯ ಪ್ರಧಾನ ಕಚೇರಿ ಪ್ರವೇಶದ್ವಾರದಲ್ಲಿ ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ ಮಹಿಳಾ ಆತ್ಮಹುತಿ ಬಾಂಬರ್ ಒಬ್ಬಾಕೆ ತನ್ನನ್ನೇ ಸ್ಫೋಟಿಸಿಕೊಂಡ ಘಟನೆ ನಡೆದಿದೆ.
ಈ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿದ್ದು ಆರು ಉಗ್ರರನ್ನು ಉಡೀಸ್ ಮಾಡಲಾಗಿದೆ.
ತನ್ನನ್ನು ತಾನು ಸ್ಪೋಟಿಸಿಕೊಂಡ ಬಾಂಬರ್ ಮಹಿಳೆಯನ್ನು ಜಿನಾಟಾ ರಫೀಕ್ ಎಂದು ಗುರುತಿಸಲಾಗಿದೆ.
ಸ್ಫೋಟದ ನಂತರ, ಆರು ಉಗ್ರರು ಪ್ರಧಾನ ಕಚೇರಿಗೆ ನುಗ್ಗಲು ಯತ್ನಿಸಿದ್ದಾರೆ, ತಕ್ಷಣ ಎಚ್ಚೆತ್ತ ಭದ್ರತಾ ಪಡೆಗಳು ಪ್ರವೇಶದ್ವಾರದ ಬಳಿಯೇ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಉಳಿದ ಮೂವರು ಎಫ್‌ಸಿ ಸಿಬ್ಬಂದಿ ಸುತ್ತುವರಿಯುವ ಮೊದಲೇ ಆವರಣ ಪ್ರವೇಶಿಸಿದ್ದಾರೆ, ಆಗ ಮೂವರನ್ನೂ ಹತ್ಯೆ ಮಾಡಲಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಸಂಜೆಯವರೆಗೆ ಪ್ರಧಾನ ಕಚೇರಿಯ ಒಳಗಿನಿಂದ ಗುಂಡಿನ ಸದ್ದು ಮತ್ತು ಸ್ಫೋಟಗಳು ಕೇಳಿಬಂದವು ಎಂದು ಸ್ಥಳೀ ವಾಸಿಗಳು ತಿಳಿಸಿದ್ದಾರೆ.
ಬಲೂಚಿಸ್ತಾನದಲ್ಲಿ ಅತ್ಯಂತ ಸಕ್ರಿಯ ಮತ್ತು ಸುಸಜ್ಜಿತ ದಂಗೆಕೋರ ಗುಂಪು ಎಂದು ಪರಿಗಣಿಸಲಾದ ಬಿಎಲ್‌ಎ, ಮಹಿಳಾ ಆತ್ಮಹುತಿ ದಾಳಿಕೋರಳನ್ನು ಬಳಸಿಕೊಂಡು ಮೂರನೇ ಬಾರಿ ದಾಳಿ ಮಾಡಿದೆ.