ಇಸ್ರೇಲ್ ಗುಂಡಿನ ದಾಳಿ:41 ಪ್ಯಾಲೆಸ್ಟೀನಿಯನ್ನರು ಸಾವು

ಕೈರೊ: ಗಾಜಾದಲ್ಲಿ ಬುಧವಾರ ಇಸ್ರೇಲ್ ನಡೆಸಿದ ಗುಂಡಿನ ದಾಳಿ ಮತ್ತು ವೈಮಾನಿಕ ದಾಳಿಯಲ್ಲಿ ಸುಮಾರು 41 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ.

ಇದನ್ನು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ನೆಟ್‌ಜರೀಮ್‌ನಲ್ಲಿರುವ ಗಾಜಾ ಹ್ಯುಮ್ಯಾನಿಟೇರಿಯನ್ ಫೌಂಡೇಶನ್ ಬಳಿ ಇಸ್ರೇಲ್ ತೀವ್ರ ದಾಳಿ ನಡೆಸಿದೆ. ಈ ವೇಳೆ ಕನಿಷ್ಠ 25 ಜನರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಶಿಫಾ ಮತ್ತು ಅಲ್-ಕುದ್ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.

ರಫಾದಲ್ಲಿರುವ ಜಿಎಚ್‌ಎಫ್ ಬಳಿ ಇಸ್ರೇಲ್ ದಾಳಿಗೆ ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ ಎಂದು ಗಾಜಾ ಪಟ್ಟಿಯಲ್ಲಿರುವ ಖಾನ್ ಯೂನಿಸ್‌ ನಾಸರ್ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಖಾನ್ ಯೂನಿಸ್ ಬಳಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ಇಸ್ರೇಲ್ ದಾಳಿಗೆ ಬುಧವಾರ 41 ಜನರು ಮೃತಪಟ್ಟಂತಾಗಿದೆ.

ಇಸ್ರೇಲ್ ಗುಂಡಿನ ದಾಳಿ:41 ಪ್ಯಾಲೆಸ್ಟೀನಿಯನ್ನರು ಸಾವು Read More

ಗಾಜಾ ಪಟ್ಟಿಯಲ್ಲಿ ವೈಮಾನಿಕ ದಾಳಿ:400 ಪ್ಯಾಲೆಸ್ತೇನಿಯರು ಸಾವು

ದೀರ್ ಅಲ್-ಬಲಾಹ್: ಇಸ್ರೇಲ್ ಮತ್ತೆ ಮಂಗಳವಾರ ಬೆಳಗ್ಗೆ ಗಾಜಾ ಪಟ್ಟಿಯಾದ್ಯಂತ ವೈಮಾನಿಕ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 404 ಪ್ಯಾಲೆಸ್ತೀನಿಯನ್ನರು ಅನುಮತಿ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಅನಿರೀಕ್ಷಿತ ಬಾಂಬ್ ದಾಳಿಯು ಜನವರಿಯಿಂದ ಜಾರಿಯಲ್ಲಿದ್ದ ಕದನ ವಿರಾಮವನ್ನು ಉಲ್ಲಂಘಿಸಿದೆ. ಕದನ ವಿರಾಮ ಉಲ್ಲಂಘಿಸಿ ಮತ್ತೆ ಯುದ್ಧ ಆರಂಭಿಸಿರುವ ಇಸ್ರೇಲ್ ಗೆ ತಕ್ಕ ಉತ್ತರ ನೀಡುತ್ತೇವೆ. ಈ ದಾಳಿ ಒತ್ತೆಯಾಳುಗಳ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಹಮಾಸ್ ಎಚ್ಚರಿಸಿದೆ.

ಹಮಾಸ್​ ಆರೋಗ್ಯ ಸಚಿವಾಲಯದ ಪ್ರಕಾರ, ಈ ದಾಳಿಗಳಲ್ಲಿ ಮಕ್ಕಳು ಸೇರಿದಂತೆ ಅನೇಕರು ಮೃತಪಟ್ಟಿದ್ದಾರೆ ಮತ್ತು ಗಾಜಾ ಪಟ್ಟಿಯ ಆಸ್ಪತ್ರೆಗಳಲ್ಲಿ ಈವರೆಗೆ 326 ಮೃತದೇಹಗಳು ದಾಖಲಾಗಿವೆ. ಆದರೆ, ಇನ್ನೂ ಹಲವಾರು ಶವಗಳು ಧ್ವಂಸಗೊಂಡ ಸ್ಥಳದ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಸಚಿವಾಲಯ ಹೇಳಿದೆ.

ಕದನ ವಿರಾಮ ವಿಸ್ತರಿಸುವ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ದಾಳಿಗೆ ಆದೇಶ ನೀಡಿರುವುದಾಗಿ ಇಸೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೇಳಿದ್ದಾರೆ.

ಇಸ್ರೇಲ್, ಇಂದಿನಿಂದ, ಹೆಚ್ಚುತ್ತಿರುವ ಮಿಲಿಟರಿ ಬಲದೊಂದಿಗೆ ಹಮಾಸ್ ವಿರುದ್ದ ಕಾರ್ಯನಿರ್ವಹಿಸುತ್ತದೆ ಎಂದು ನೆತನ್ಯಾಹು ಅವರ ಕಚೇರಿ ತಿಳಿಸಿದೆ.

ಈ ಮಧ್ಯೆ, ಕಾರ್ಯಾಚರಣೆಯು ಮುಕ್ತವಾಗಿದೆ ಮತ್ತು ಅದನ್ನು ವಿಸ್ತರಿಸುವ ನಿರೀಕ್ಷೆಯಿದೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.

ಈಜಿಪ್ಟ್ ಮತ್ತು ಕತಾರ್ ಜೊತೆಗೆ ಮಧ್ಯಸ್ಥಿಕೆ ಪ್ರಯತ್ನಗಳನ್ನು ಮುನ್ನಡೆಸುತ್ತಿರುವ ಅಮೆರಿಕ ರಾಯಭಾರಿ ಸ್ಟೀವ್ ವಿಟ್ಕಾಫ್, ಒತ್ತೆಯಾಳುಗಳನ್ನು ಹಮಾಸ್ ತಕ್ಷಣವೇ ಬಿಡುಗಡೆ ಮಾಡಬೇಕು ಇಲ್ಲವಾದಲ್ಲಿ ತೀವ್ರ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಗಾಜಾ ಪಟ್ಟಿಯಲ್ಲಿ ವೈಮಾನಿಕ ದಾಳಿ:400 ಪ್ಯಾಲೆಸ್ತೇನಿಯರು ಸಾವು Read More

ಇಸ್ರೇಲ್ ಗೆ ನುಗ್ಗಲು ಯತ್ನಿಸಿದವ ಮಟಾಶ್

ಇಸ್ರೇಲ್: ಅಕ್ರಮವಾಗಿ ಇಸ್ರೇಲ್ ಗಡಿ ಪ್ರವೇಶಿಸಲು ಯತ್ನಿಸಿದ ಕೇರಳ ಮೂಲದ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಇಸ್ರೇಲ್ ಗಡಿ ನುಸುಳಲು ಯತ್ನಿಸಿದ ಈ ಗುಂಪಿನಲ್ಲಿ ಒಟ್ಟು ನಾಲ್ವರು ವ್ಯಕ್ತಿಗಳು ಇದ್ದರು ಎಂದು ವರದಿಗಳು ಸ್ಪಷ್ಟಪಡಿಸಿವೆ.

ಗುಂಪಿನಲ್ಲಿದ್ದ ಇಬ್ಬರು ಕೇರಳಿಯನ್ನರು ಪ್ರಸ್ತುತ ಇಸ್ರೇಲ್‌ನಲ್ಲಿ ಬಂಧನದಲ್ಲಿದ್ದಾರೆ.ಒಬ್ಬನ ಹತ್ಯೆಯಾಗಿದೆ.ಇನ್ನೊಬ್ಬನ ಬಗ್ಗೆ ಮಾಹಿತಿ ಇಲ್ಲ.

ಇಸ್ರೇಲ್ ಗೆ ನುಗ್ಗಲು ಯತ್ನಿಸಿದವ ಮಟಾಶ್ Read More

ಇಸ್ರೇಲ್ ಸೇನೆ ದಾಳಿಗೆ ಹಮಾಸ್ ಹಿರಿಯ ಅಧಿಕಾರಿ ಸಾವು

ಇಸ್ರೇಲ್: ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಹಮಾಸ್‌ನ ಹಿರಿಯ ಅಧಿಕಾರಿ ಇಝ್‌-ಅಲ್‌ ದೀನ್‌ ಕಸಬ್‌ ಹತರಾಗಿದ್ದಾರೆ‌.

ಇಝ್‌-ಅಲ್‌ ದೀನ್‌ ಕಸಬ್‌
ರನ್ನು ಕೊಂದು ಹಾಕಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.

ಗಾಜಾ ಪಟ್ಟಿಯಲ್ಲಿರುವ ಇತರ ಸಂಘಟನೆಗಳೊಂದಿಗೆ ಸಮನ್ವಯ ವಹಿಸುವಲ್ಲಿ ಕಸಬ್ ಪ್ರಮುಖ ಪಾತ್ರ ವಹಿಸುತ್ತಿದ್ದರು. ಅಲ್ಲದೆ ಹಮಾಸ್‌ನ ಉನ್ನತ ಶ್ರೇಣಿಯ ನಾಯಕರಾಗಿದ್ದರು ಎಂದು ಇಸ್ರೇಲ್‌ ಹೇಳಿದೆ.

ಕಸಬ್ ಸಾವನ್ನಪ್ಪಿರುವದನ್ನು ಹಮಾಸ್ ಬಂಡುಕೋರ ಸಂಘಟನೆ ಕೂಡಾ ಖಚಿತ ಪಡಿಸಿದೆ,ಜತೆಗೆ ಅವರ ಸಾವಿಗೆ ದುಃಖ ವ್ಯಕ್ತ ಪಡಿಸುತ್ತೇವೆ ಎಂದು ತಿಳಿಸಿದೆ.

ಮತ್ತೊಬ್ಬ ಅಧಿಕಾರಿ ಐಮನ್ ಆಯೆಷ್ ಕೂಡ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹಮಾಸ್ ತಿಳಿಸಿದೆ.

ಇಸ್ರೇಲ್ ಸೇನೆ ದಾಳಿಗೆ ಹಮಾಸ್ ಹಿರಿಯ ಅಧಿಕಾರಿ ಸಾವು Read More