ಇಸ್ರೇಲ್ ವೈಮಾನಿಕ ದಾಳಿ; ಜನರಲ್ ಹುಸೇನ್ ಸಲಾಮಿ ಸಾವು

ಇರಾನ್, ಟೆಲ್ ಅವಿವ್: ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್ ಮುಖ್ಯಸ್ಥ ಜನರಲ್ ಹುಸೇನ್ ಸಲಾಮಿ ಅವರು ಮೃತಪಟ್ಟಿದ್ದಾರೆ.

ಇರಾನ್‌ ನ ಪರಮಾಣು ಸ್ಥಾವರಗಳು ಮತ್ತು ಮಿಲಿಟರಿ ನೆಲೆಗಳ ಮೇಲೆ ಶುಕ್ರವಾರ ಇಸ್ರೇಲ್ ದಾಳಿ ನಡೆಸಿದ್ದು, ದಾಳಿಯಲ್ಲಿ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್ ಮುಖ್ಯಸ್ಥ ಜನರಲ್ ಹುಸೇನ್ ಸಲಾಮಿ ಅವರು ಸಾವನ್ನಪ್ಪಿದ್ದಾರೆ.

ರೆವಲ್ಯೂಷನರಿ ಗಾರ್ಡ್ಸ್, ಇರಾನ್ ದೇಶದ ಶಕ್ತಿಕೇಂದ್ರ ಎಂದು ಬಿಂಬಿತವಾಗಿದೆ. ಹಾಗಾಗಿ, ಇದನ್ನೇ ಕೇಂದ್ರೀಕರಿಸಿ ಇಸ್ರೇಲ್ ದಾಳಿ ನಡೆಸಿದ್ದು, ಇರಾನ್ ದೊಡ್ಡ ಪೆಟ್ಟು ಬಿದ್ದಂತಾಗಿದೆ.

ಸಲಾಮಿ ಆರು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಿದ್ದರು ಮತ್ತು ಅಮೆರಿಕ ಹಾಗೂ ಇಸ್ರೇಲ್‌ಗೆ ಬೆದರಿಕೆ ಒಡ್ಡಿ ಹೆಸರಾಗಿದ್ದರು. ಹಾಗಾಗಿ, ಉದ್ದೇಶಪೂರ್ವಕವಾಗಿಯೇ ಇಸ್ರೇಲ್ ಅವರನ್ನು ಟಾರ್ಗೆಟ್ ಮಾಡಿದೆ.

1979ರ ಇಸ್ಲಾಮಿಕ್ ಕ್ರಾಂತಿಯ ನಂತರ ರೆವಲ್ಯೂಷನರಿ ಗಾರ್ಡ್ಸ್ ಅಸ್ತಿತ್ವಕ್ಕೆ ಬಂದಿತ್ತು. ಇದಾದ ನಂತರ, ಇದು ದೇಶೀಯ ಭದ್ರತಾ ಪಡೆಯಾಗಿ ಮುಂದುವರಿಯಿತು.

ಇಸ್ರೇಲ್ ವೈಮಾನಿಕ ದಾಳಿ; ಜನರಲ್ ಹುಸೇನ್ ಸಲಾಮಿ ಸಾವು Read More

ಇರಾನ್‌ನ ರಾಜೇ ಬಂದರಿನಲ್ಲಿ ಸ್ಪೋಟ:5 ಮಂದಿ ಸಾವು:500 ಕ್ಕೂ ಹೆಚ್ಚು ಮಂದಿಗೆ‌ ಗಾಯ

ಇರಾನ್​; ದಕ್ಷಿಣ ಇರಾನ್‌ನ ಬಂದರಿನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಹಠಾತ್ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆಕಾಶದೆತ್ತರಕ್ಕೆ ಚುಮ್ಮಿತು ಯಾರು ಏನಾಗಿದ್ದಾರೆ ಎಲ್ಲಿದ್ದಾರೆ ಎಂಬುದು ಕಾಣದಂತಾಗಿತ್ತು, ಅಬ್ಬಾಸ್ ನಗರದ ಹೊರಗಿನ ರಾಜೇ ಬಂದರಿನಲ್ಲಿ ಶನಿವಾರ ಈ ಸ್ಫೋಟ ಸಂಭವಿಸಿದೆ.

ರಾಜೇ ಬಂದರಿನಲ್ಲಿ ಹಲವಾರು ಕಂಟೇನರ್‌ಗಳಲ್ಲಿ ಸ್ಫೋಟ ಸಂಭವಿಸಿದೆ,
ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ವಿಪತ್ತು ನಿರ್ವಹಣಾ ಅಧಿಕಾರಿ ಮೆಹರ್ದಾದ್ ಹಸನ್ಜಾದೆ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು,ರಾಜೇ ಬಂದರಿನಲ್ಲಿ ಸಂಗ್ರಹಿಸಲಾದ ಕೆಲವು ಪಾತ್ರೆಗಳು ಸ್ಫೋಟಗೊಂಡಾಗ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು.

ಸ್ಫೋಟದ ತೀವ್ರತೆಗೆ ಘಟನಾ ಸ್ಥಳದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಕಟ್ಟಡಗಳ ಕಿಟಕಿಗಳು ಒಡೆದು ಹೋಗಿವೆ.

ರಾಜೇ ಬಂದರು ಮುಖ್ಯವಾಗಿ ಕಂಟೇನರ್ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ. ವಾರ್ಷಿಕವಾಗಿ 80 ಮಿಲಿಯನ್ ಟನ್ (72.5 ಮಿಲಿಯನ್ ಮೆಟ್ರಿಕ್ ಟನ್) ಸರಕುಗಳನ್ನು ರಫ್ತು ಮಾಡಲಾಗುತ್ತದೆ ಮತ್ತು ಆಮದು ಮಾಡಿಕೊಳ್ಳಲಾಗುತ್ತದೆ.

ಇರಾನ್‌ನ ರಾಜೇ ಬಂದರಿನಲ್ಲಿ ಸ್ಪೋಟ:5 ಮಂದಿ ಸಾವು:500 ಕ್ಕೂ ಹೆಚ್ಚು ಮಂದಿಗೆ‌ ಗಾಯ Read More