ಮ್ಯಾನ್ಮಾರ್ ಗೆ ಭಾರತದ ಸಹಾಯ ಹಸ್ತ:ಅತ್ಯಗತ್ಯ ಸಾಮಗ್ರಿ ರವಾನೆ

ನವದೆಹಲಿ: ಮುನಿದ ಪ್ರಕೃತಿಗೆ ತುತ್ತಾಗಿರುವ ಮ್ಯಾನ್ಮಾರ್‌ಗೆ ಭಾರತ ಸಮರೋಪಾದಿಯಲ್ಲಿ ಸಹಾಯ ಮಾಡುತ್ತಿದೆ.

ಟೆಂಟ್‌ಗಳು, ಹೊದಿಕೆಗಳು, ನೆಲ ಹಾಸಿಗೆಗಳು, ಆಹಾರದ ಪೊಟ್ಟಣಗಳು, ನೈರ್ಮಲ್ಯ ಕಿಟ್‌ಗಳು, ಜನರೇಟರ್‌ಗಳು ಮತ್ತು ಅಗತ್ಯ ಔಷಧಗಳು ಸೇರಿದಂತೆ 15 ಟನ್ ಪರಿಹಾರ ಸಾಮಗ್ರಿಗಳನ್ನು ಮೊದಲ ಕಂತಿನಲ್ಲಿ ಯಾಂಗೂನ್‌ಗೆ ರವಾನಿಸಿತ್ತು.

ಇಂದು ಬೆಳಿಗ್ಗೆ ಭಾರತದ ರಾಯಭಾರಿ ಅಭಯ್ ಠಾಕೂರ್ ಅವರು ಯಾಂಗೂನ್ ಮುಖ್ಯಮಂತ್ರಿ ಯು ಸೋ ಥೀನ್ ಅವರಿಗೆ ಸಾಮಗ್ರಿಗಳನ್ನು ಹಸ್ತಾಂತರಿಸಿದರು.

ಮಂಡಲಯ್​​ನಲ್ಲಿ ಭಾರತವು ಫೀಲ್ಡ್​ ಆಸ್ಪತ್ರೆ ಸ್ಥಾಪನೆ ಮಾಡಲು ನಿರ್ಧರಿಸಿದೆ, ಅದಕ್ಕಾಗಿ ವೈದ್ಯರು ಮತ್ತು ಶುಶ್ರೂಷರು ಸೇರಿದಂತೆ 118 ತಜ್ಞರ ತಂಡ ಶನಿವಾರ ಸಂಜೆ ಅಲ್ಲಿಗೆ ಹೊರಟಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಎರಡು ವಿಮಾನಗಳು ಮತ್ತು 80 ಮಂದಿ ಎನ್‌ಡಿಆರ್‌ಎಫ್ ತಂಡವನ್ನೂ ಮಯನ್ಮಾರ್‌ಗೆ ಕಳುಹಿಸಲಾಗಿದೆ.

ಇತ್ತ ಥಾಯ್ಲೆಂಡ್​ನಲ್ಲೂ ಕೂಡ ಭೂಕಂಪನ ಉಂಟಾಗಿದ್ದು, ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡ ಕುಸಿದು ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ.

ಮ್ಯಾನ್ಮಾರ್ ಮತ್ತು ಥಾಯ್ಲೆಂಡ್​ಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದರು ಅದರಂತೆ ಇಂದು ಅತ್ಯಗತ್ಯ ಸಾಮಗ್ರಿಗಳನ್ನು ರವಾನಿಸಲಾಗಿದೆ.

ಮ್ಯಾನ್ಮಾರ್ ಗೆ ಭಾರತದ ಸಹಾಯ ಹಸ್ತ:ಅತ್ಯಗತ್ಯ ಸಾಮಗ್ರಿ ರವಾನೆ Read More

ಭಾರತ ಮೂಲದ ನಾಲ್ವರು ಸಾಧಕಿಯರಿಗೆ ಗೌರವ

ನ್ಯೂಯಾರ್ಕ್: ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಹಾಗೂ ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್‌ (ಎಫ್‌ಐಎ), ವಿಶ್ವ ಮಹಿಳಾ ದಿನದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಭಾರತ ಮೂಲದ ನಾಲ್ವರು ಸಾಧಕಿಯರನ್ನು ಸನ್ಮಾನಿಸಿ ಗೌರವಿಸಿದೆ.

ಜೆಪಿ ಮಾರ್ಗನ್ ಕಂಪನಿಯ ಸಲಹೆ, ವಿಲೀನ ಹಾಗೂ ಸ್ವಾಧೀನ ಕುರಿತ ಜಾಗತಿಕ ಮುಖ್ಯಸ್ಥೆ ಅನು ಅಯ್ಯಂಗಾರ್, ಎ-ಸೀರಿಸ್ ಮ್ಯಾನೇಜ್‌ಮೆಂಟ್ ಮತ್ತು ಇನ್ವೆಸ್ಟ್‌ಮೆಂಟ್ ಸಿಇಒ ಅಂಜುಲಾ ಆಚಾರ್ಯ, ಎಲ್‌ಡಿಪಿ ವೆಂಚರ್ಸ್‌ ಸಂಸ್ಥಾಪಕಿ ವೆಂಡಿ ಡೈಮಂಡ್ ಮತ್ತು ಸಿಎನ್‌ಬಿಸಿಯ ನಿರೂಪಕಿ ಸೀಮಾ ಮೋದಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅವರು ಮುಖ್ಯ ಅತಿಥಿಯಾಗಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅನ್ನಪೂರ್ಣ ದೇವಿ ಅವರು, ‘ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವಲ್ಲಿ ಉಭಯ ದೇಶಗಳ ಮಹಿಳೆಯರು ಮುಂಚೂಣಿ ಪಾತ್ರ ವಹಿಸಿದ್ದಾರೆ’ ಎಂದು ಹೇಳಿದರು.

ಭಾರತ ಮೂಲದ ನಾಲ್ವರು ಸಾಧಕಿಯರಿಗೆ ಗೌರವ Read More

ಭಾರತ ಗೆದ್ದು ಬರಲೆಂದು ಪ್ರಾರ್ಥಿಸಿ 101 ಗಣಪತಿಗೆ ಈಡುಗಾಯಿ

ಮೈಸೂರು, ಮಾ.9: ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ಅಗ್ರಹಾರದಲ್ಲಿರುವ 101 ಗಣಪತಿ ದೇವಾಲಯದಲ್ಲಿ, ಭಾರತ ಕ್ರಿಕೆಟ್ ತಂಡ ಫೈನಲ್ ಪಂದ್ಯದಲ್ಲಿ‌ ಗೆದ್ದು ಬರಲೆಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಭಾರತ ನ್ಯೂಜಿಲೆಂಡ್ ತಂಡದ ವಿರುದ್ಧ ಜಯಗಳಿಸಲೆಂದು ವಿಘ್ನ ವಿನಾಶಕ ವಿಘ್ನೇಶ್ವರನಲ್ಲಿ ವಿಶೇಷ ಪೂಜೆ ಮಾಡಿಸಿ, 101 ತೆಂಗಿನಕಾಯಿಗಳನ್ನು ಈಡುಗಾಯಿ ಹೊಡೆಯಲಾಯಿತು.

ಭಾರತ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿ ಕಪ್ ಗೆಲ್ಲಲಿ ಎಂದು ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೇತೃತ್ವದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಸಂಸ್ಕೃತಿ ಪೋಷಕ ಡಾ. ರಘುರಾಮ್ ವಾಜಪೇಯಿ, ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್ ಜಯಪ್ರಕಾಶ್, ಸುರೇಶ್ ಗೋಲ್ಡ್, ಪ್ರಭಾಕರ್, ಕುಮಾರ್ ಗೌಡ, ಪ್ರಜೀಶ್, ಪ್ರಭುಶಂಕರ್, ಕೇದಾರ್ ಲೋಕೇಶ್ , ನೇಹಾ, ಕೃಷ್ಣಪ್ಪ, ಸಿಂಧುವಳ್ಳಿ ಶಿವಕುಮಾರ್, ಹನುಮಂತಯ್ಯ, ನಂದಕುಮಾರ್, ಚಂದ್ರಶೇಖರ್, ರವೀಶ್, ರವಿ ನಾಯಕ್, ವಿಷ್ಣು, ಮಹದೇವಸ್ವಾಮಿ ಪರಿಸರ ಚಂದ್ರು, ಆನಂದ್ ಗೌಡ, ತ್ಯಾಗರಾಜ್ ಸುಬ್ಬೇಗೌಡ, ಜಗದೀಶ್ ಮತ್ತಿತರರು ಹಾಜರಿದ್ದರು.

ಭಾರತ ತಂಡದ‌ ಆಟಗಾರರ ಭಾವಚಿತ್ರಗಳು ಮತ್ತು ಭಾರತದ ಬಾವುಟಗಳನ್ನು ಭಾರತ ಗೆದ್ದು ಬಾ ಮುಂತಾದ ಘೋಷಣೆಗಳನ್ನು ಕೂಗಿದರು.ಗೆದ್ದು‌ ಬಾ ಭಾರತ ಗೆದ್ದು ಬಾ,ಬೊಲೊ ಭಾರತ್ ಮಾತಾಕೀ‌ ಜೈ, ಒಂದೇ ಮಾತರಂ, ಜೈ ಹಿಂದ್ ಮುಂತಾದ ಘೋಷಣೆಗಳು ಮೊಳಗಿದವು.

ಭಾರತ ಗೆದ್ದು ಬರಲೆಂದು ಪ್ರಾರ್ಥಿಸಿ 101 ಗಣಪತಿಗೆ ಈಡುಗಾಯಿ Read More

ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ವಿಧಿವಶ

ನವದೆಹಲಿ: ವಿಶ್ವವಿಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ ಅವರು ಭಾನುವಾರ ಅಮೆರಿಕದಲ್ಲಿ ನಿಧನರಾಗಿದ್ದಾರೆ.

ಅವರಿಗೆ‌ 73 ವರ್ಷಗಳಾಗಿತ್ತು.
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ.

ಭಾರತ ಸೇರಿದಂತೆ ವಿದೇಶಗಳಲ್ಲಿ ಅವರು ಪ್ರಸಿದ್ದರಾಗಿದ್ದರು. ಹಲವಾರು ಹಾಲಿವುಡ್ ಚಿತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದರು.

ಸದ್ಯ ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಜಾಕಿರ್ ಹುಸೇನ್ ಅವರಿಗೆ ಕಳೆದ ಎರಡು ವಾರಗಳಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು, ಹಾಗಾಗಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು.

ಆದರೆ ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಜಾಕಿರ್ ಹುಸೇನ್ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಭಾರತದ ಅತ್ಯಂತ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾಗಿರುವ ಜಾಕಿರ್ ಹುಸೇನ್​, ಪ್ರಸಿದ್ಧ ತಬಲಾ ವಾದಕ ಅಲ್ಲಾ ರಖಾರವರ ಹಿರಿಯ ಪುತ್ರ. ಮಾರ್ಚ್ 9, 1951 ರಂದು ಮುಂಬೈನಲ್ಲಿ ಜನಿಸಿದ ಜಾಕಿರ್ ಹುಸೇನ್, ಚಿಕ್ಕ ವಯಸ್ಸಿನಿಂದಲೂ ಸಂಗೀತದ ವಾತಾವರಣದಲ್ಲಿ ಬೆಳೆದವರು. ಅವರ ತಂದೆಯ ಕಟ್ಟುನಿಟ್ಟಿನ ಮಾರ್ಗದರ್ಶನದಲ್ಲಿ ಜಾಕಿರ್ ಹುಸೇನ್​​ ಅಸಾಧಾರಣ ಪ್ರತಿಭೆಯಾಗಿ ಹೊರಹೊಮ್ಮಿದರು.

ಜಾಕಿರ್ ಹುಸೇನ್ ಅವರಿಗೆ 5 ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾಗಿದ್ದರು. 1988ರಲ್ಲಿ ಪದ್ಮಶ್ರೀ ಪ್ರಶಸ್ತಿ, 2002ರಲ್ಲಿ ಪದ್ಮಭೂಷಣ ಮತ್ತು 2023ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯ ಗರಿಗಳು ಮುಡಿಗೇರಿದ್ದವು.

ಪ್ರಧಾನಿ ಮೋದಿ,ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕರ್ನಾಟಕ
ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಜಾಕಿರ್ ಹುಸೇನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ವಿಧಿವಶ Read More

ತವರಿಗೆ‌ ಬಂದ ಸೈನಿಕನಿಗೆ ಅದ್ದೂರಿ ಸ್ವಾಗತ

ಮೈಸೂರು: ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ತವರೂರಿಗೆ ವಾಪಸಾದ ಮೈಸೂರು ನಗರದ ಸೈನಿಕ ಗಿರೀಶ್ ಆರಾಧ್ಯ ಅವರನ್ನು ನಗರದ ರೈಲ್ವೆ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಹುಣಸೂರು ತಾಲೂಕು,ಬಿಳಿಕೆರೆ ಹೋಬಳಿ
ಗಿರೀಶ್ ಆರಾಧ್ಯ ಅವರು
ಜಮ್ಮು ಕಾಶ್ಮೀರ, ಸಿಕ್ಕಿಮ್ ಸೇರಿದಂತೆ ಹಲವಾರು ಕಡೆ ದೇಶ ಸೇವೆ ಮಾಡಿದ್ದಾರೆ, ರಾಂಚಿ, ಜಾರ್ಕಂಡ್ ನಲ್ಲಿ ರಿಟೈಡ್ ಆಗಿ ಮೈಸೂರಿಗೆ ಆಗಮಿಸಿದ ಅವರಿಗೆ ಸ್ನೇಹಿತರು ಪಟಾಕಿ ಸಿಡಿಸಿ ಹೂಗೊಚ್ಚ ನೀಡಿ
ಆತ್ಮೀಯವಾಗಿ ಸ್ವಾಗತಿಸಿದರು.

ದಿವಾಕರ್ ಆರಾಧ್ಯ, ನಟೇಶ್ ಆರಾಧ್ಯ ,
ರವೀಶ್ ಆರಾಧ್ಯ,ಬಸವಆರಾಧ್ಯ ಮತ್ತಿತರ ಸ್ನೇಹಿತರು, ಬಂಧುಗಳು ಹಾಜರಿದ್ದು ಗಿರೀಶ್ ಆರಾಧ್ಯ ಅವರನ್ನು ಬರಮಾಡಿಕೊಂಡರು.

ತವರಿಗೆ‌ ಬಂದ ಸೈನಿಕನಿಗೆ ಅದ್ದೂರಿ ಸ್ವಾಗತ Read More

ಒಂದು ರಾಷ್ಟ್ರ ಒಂದು ಚುನಾವಣೆ:ಭಾರತದ ಆರ್ಥಿಕ ಪ್ರಗತಿಗೆ ಪೂರಕ:ಜೋಗಿ ಮಂಜು

ಮೈಸೂರು: ಒಂದು ರಾಷ್ಟ್ರ ಒಂದು ಚುನಾವಣೆಯಿಂದ ನಮ್ಮ ದೇಶವು ಆರ್ಥಿಕ ಪ್ರಗತಿಯತ್ತ ಸಾಗಲಿದೆ ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷ ಜೋಗಿ ಮಂಜು ಅಭಿಪ್ರಾಯ ಪಟ್ಟಿದ್ದಾರೆ.

ಒಂದು ರಾಷ್ಟ್ರ ಒಂದು ಚುನಾವಣೆಯಿಂದ ಭಾರತದಲ್ಲಿ ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆಯು ಏಕಕಾಲದಲ್ಲಿ ನಡೆಯುವುದರಿಂದ ಪ್ರಜಾಪ್ರಭುತ್ವ ಗಟ್ಟಿಗೊಳ್ಳಲಿದೆ ಹಾಗೂ ಚುನಾವಣಾ ವೆಚ್ಚದಲ್ಲಿ ಬಾರಿ ಇಳಿಕೆಯಾಗಲಿದೆ ಜತೆಗೆ ಸಮಯ ಉಳಿತಾಯವಾಗಲಿದೆ ಆಂತರಿಕವಾಗಿ ಪ್ರಜಾಪ್ರಭುತ್ವಕ್ಕೆ ಜಯ ಸಿಗಲಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಸ್ವಾತಂತ್ರ್ಯ ದಿನಾಚರಣೆಯ ಸಂಧರ್ಭದಲ್ಲಿ ಕೆಂಪು ಕೋಟೆಯಲ್ಲಿ ಈ ವಿಚಾರ ಪ್ರಸ್ತಾಪಿಸುವ ಮೂಲಕ ರಾಷ್ಟ್ರಕ್ಕೆ ಸಂದೇಶವನ್ನು ನೀಡಿದ್ದರು,ಅದು ಈಗ ನಿಜವಾಗಿದೆ.

ಗ್ರಾಮ ಪಂಚಾಯತಿಯಿಂದ ಲೋಕಸಭಾ ಚುನಾವಣಾ ಯವರೆಗೂ ಒಟ್ಟೊಟ್ಟಿಗೆ ನಡೆಯುವುದು ಇದು ಐತಿಹಾಸಿಕ ನಿಲುವುವಾಗಿದೆ, ಇದು ಪ್ರಜಾಪ್ರಭುತ್ವ ದ ಗೆಲುವಾಗಿದೆ ಎಂದು ಜೋಗಿ ಮಂಜು ಹೇಳಿದ್ದಾರೆ.

ವಿರೋಧ ಪಕ್ಷಗಳು ಒಂದು ದೇಶ ಒಂದು‌ ಚುನಾವಣೆಯನ್ನು ವಿರೋಧ ಮಾಡುವುದನ್ನು ಬಿಟ್ಟು ಇದಕ್ಕೆ ಪೂರಕವಾಗಿ ಸಹಕಾರ ಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಒಂದು ರಾಷ್ಟ್ರ ಒಂದು ಚುನಾವಣೆ:ಭಾರತದ ಆರ್ಥಿಕ ಪ್ರಗತಿಗೆ ಪೂರಕ:ಜೋಗಿ ಮಂಜು Read More