ಇಮ್ರಾನ್ ಖಾನ್ ಭೇಟಿಯಾದ‌ ಸಹೋದರಿ:ಸಾವಿನ ವದಂತಿಗಳಿಗೆ ತೆರೆ

ಪಾಕಿಸ್ತಾನ: ಪಾಕ್ ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಾವಿನ ಊಹಾಪೋಹದ ಸುದ್ದಿ ಹರಡಿದ್ದರ ಬೆನ್ನಲ್ಲೆ ಜೈಲಿನಲ್ಲಿ ಇಮ್ರಾನ್ ರನ್ನು ಸಹೋದರಿ ಡಾ.ಉಜ್ಮಾ ಖಾನಮ್ ಭೇಟಿಯಾಗಿ‌ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ವದಂತಿಗಳ ನಡುವೆ ಪಾಕಿಸ್ತಾನ ಸರ್ಕಾರ ಜೈಲಿನಲ್ಲಿ ಇಮ್ರಾನ್ ಖಾನ್ ಭೇಟಿಯಾಗಲು ಅವರ ಸಹೋದರಿಗೆ ಅವಕಾಶ ನೀಡಿತ್ತು.

ಮಂಗಳವಾರ ರಾವಲ್ಪಿಂಡಿಯ ಅಡಿಯಾಲ ಜೈಲಿನ ಅಧಿಕಾರಿಗಳು ಸಹೋದರನನ್ನು ಭೇಟಿ ಮಾಡಲು ಉಜ್ಮಾ ಖಾನಮ್ ಅವರಿಗೆ ಅನುಮತಿ ನೀಡಿತ್ತು.

ಇಮ್ರಾನ್ ಖಾನ್ ಅವರ ಭೇಟಿಯನ್ನು ನಿರ್ಬಂಧಿಸಲಾಗಿದೆ ಎಂದು ಆರೋಪಿಸಿ ಪಿಟಿಐ ಸದಸ್ಯರು ಇಸ್ಲಾಮಾಬಾದ್ ಹೈಕೋರ್ಟ್ ಮತ್ತು ಅಡಿಯಾಲ ಜೈಲಿನ ಹೊರಗೆ ಪ್ರತಿಭಟನೆ ಕೂಡಾ ನಡೆಸಿದ್ದರು.

ಕಳೆದ ವಾರ, ಇಮ್ರಾನ್ ಖಾನ್ ಅವರ ಮಗ ಮತ್ತು ಸಹೋದರಿ ಇಬ್ಬರೂ ಜೈಲಿನಲ್ಲಿರುವ ಇಮ್ರಾನ್‌ ಜೀವಂತವಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಕುಟುಂಬಕ್ಕೆ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ನ್ಯಾಯಾಲಯದ ಅನುಮತಿ ನೀಡಿದ್ದರೂ, ಅವರ ಸಹೋದರಿಯರಿಗೆ ಮತ್ತು ‌ಮಕ್ಕಳಿಗೆ ಅವರನ್ನು ಭೇಟಿ ಮಾಡಲು ಅವಕಾಶ ನಿರಾಕರಿಸಲಾಗಿದೆ ಎಂದು ವರದಿಯಾದ ನಂತರ ಅವರ ಸಾವಿನ ವದಂತಿಗಳು ಹರಡಿದವು.

ಯಾವುದೇ ಫೋನ್ ಕರೆಗಳು ಬಂದಿಲ್ಲ. ಯಾವುದೇ ಸಭೆಗಳು ನಡೆದಿಲ್ಲ. ಜೀವನದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ನನ್ನ ಸಹೋದರ ಮತ್ತು ನಾನು ನಮ್ಮ ತಂದೆಯೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಇಮ್ರಾನ್ ಪುತ್ರ ಖಾಸಿಮ್ ಖಾನ್ ಹೇಳಿದ್ದಾರೆ.

ನನ್ನ ಸಹೋದರ ಇಮ್ರಾನ್ ಜೀವಂತವಾಗಿದ್ದರೂ ಏಕಾಂತ ಬಂಧನದಲ್ಲಿ ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ ಎಂದು ಅವರ ಸಹೋದರಿ ಡಾ. ಉಜ್ಮಾ ಖಾನ್ ಹೇಳಿದ್ದಾರೆ.

ಇಮ್ರಾನ್ ಖಾನ್ ಭೇಟಿಯಾದ‌ ಸಹೋದರಿ:ಸಾವಿನ ವದಂತಿಗಳಿಗೆ ತೆರೆ Read More