ಹಡ್ಸನ್ ನದಿಗೆ ಹೆಲಿಕಾಪ್ಟರ್ ಅಪ್ಪಳಿಸಿ 6ಮಂದಿ ಸಾ*ವು

ನ್ಯೂಯಾರ್ಕ್: ಹೆಲಿಕಾಪ್ಟರ್ ಪತನಗೊಂಡು‌ ನದಿಗೆ ಬಿದ್ದ ಪರಿಣಾಮ ಪೈಲಟ್‌ ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ನ್ಯೂಯಾರ್ಕ್‌ನಲ್ಲಿ ನಡೆದಿದೆ.

ಮೃತರಲ್ಲಿ ನಾಲ್ವರು ಸ್ಪ್ಯಾನಿಷ್ ಮೂಲದ ಒಂದೇ ಕುಟುಂಬದವರಾಗಿದ್ದು, ಪ್ರವಾಸಕ್ಕಾಗಿ ನ್ಯೂಯಾರ್ಕ್‌ಗೆ ಬಂದಿದ್ದರು. ಮೃತಪಟ್ಟವರಲ್ಲಿ ಮೂವರು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ಮಧ್ಯಾಹ್ನ ಪಿಯರ್ 40ರಲ್ಲಿ ಸಂಭವಿಸಿದ ಘಟನೆಯಲ್ಲಿ ಬೆಲ್ 206L-4 ಲಾಂಗ್‌ರೇಂಜರ್ IV ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ.

ಲೋವರ್​​ ಮ್ಯಾನ್‌ಹ್ಯಾಟನ್‌ನಿಂದ ಹೊರಟ ಹೆಲಿಕಾಪ್ಟರ್​​, ಲಿಬರ್ಟಿ ಪ್ರತಿಮೆಯನ್ನು ಸುತ್ತು ಹಾಕಿದ ಬಳಿಕ, ಉತ್ತರಕ್ಕೆ ಹಡ್ಸನ್ ನದಿಯ ಮೇಲಿಂದ ಜಾರ್ಜ್ ವಾಷಿಂಗ್ಟನ್ ಬ್ರಿಡ್ಜ್​​ನತ್ತ ಹೊರಟಿದೆ, ಏಕಾಏಕಿ ದಕ್ಷಿಣಕ್ಕೆ ತಿರುಗಿದ ಹೆಲಿಕಾಪ್ಟರ್ ನ್ಯೂಜೆರ್ಸಿ ಬಳಿ ನದಿಗೆ ಅಪ್ಪಳಿಸಿದೆ.

ಹೆಲಿಕಾಪ್ಟರ್‌ ಪತನದ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಡಿಯೋದಲ್ಲಿ ಬೆಲ್ 206 ಹೆಲಿಕಾಪ್ಟರ್‌ನ ಪತನಗೊಂಡ ಭಾಗಗಳು ಹಡ್ಸನ್ ನದಿಗೆ ಬೀಳುವುದು ಕಾಣುತ್ತದೆ.

ಹಡ್ಸನ್ ನದಿಗೆ ಹೆಲಿಕಾಪ್ಟರ್ ಅಪ್ಪಳಿಸಿ 6ಮಂದಿ ಸಾ*ವು Read More

ಹೆಲಿಕಾಪ್ಟರ್ ಪತನ:ಮೂವರ ದುರ್ಮರಣ

ಪೋರ್‌ಬಂದರ್‌: ಗುಜರಾತ್‌ನ ಪೋರ್‌ಬಂದರ್‌ನಲ್ಲಿ ಹೆಲಿಕಾಪ್ಟರ್ ಪತನಗೊಂಡಿದ್ದು ಮೂವರು ಮೃತಪಟ್ಟಿದ್ದಾರೆ.

ಎಎಲ್‌ಎಚ್ ಧ್ರುವ್ ಹೆಸರಿನ ಭಾರತೀಯ ಕರಾವಳಿ ಪಡೆ ಹೆಲಿಕಾಪ್ಟರ್ ಪತನಗೊಂಡಿದ್ದು ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ.

ಪೈಲಟ್‌ಗಳಿಗೆ ತರಬೇತಿ ನೀಡುತ್ತಿದ್ದಾಗ ಈ ಘಟನೆ ನಡೆದಿದ್ದು ಮೂವರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದರು.

ಮೂವರು ಸಿಬ್ಬಂದಿಯನ್ನು ಹೆಲಿಕಾಪ್ಟರ್‌ನಿಂದ ಹೊರಕ್ಕೆ ತಂದು ಪೋರಬಂದರ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ ಎಂದು ಕಮಲಾ ಬಾಗ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಜೇಶ್ ಕಾನ್ಮಿಯಾ ತಿಳಿಸಿದ್ದಾರೆ.

ಹೆಲಿಕಾಪ್ಟರ್ ಪತನ:ಮೂವರ ದುರ್ಮರಣ Read More

ಹೆಲಿಕಾಪ್ಟರ್ ಪತನ: ಮೂವರು ದುರ್ಮರಣ

ಪುಣೆ: ಹೆಲಿಕಾಪ್ಟರ್ ಪತನವಾಗಿ ಮೂವರು ದುರ್ಮರಣ ಅಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆ ಸಮೀಪ ನಡೆದಿದೆ.

ಪುಣೆ ಸಮೀಪದ ಬವ್ಧಾನ್ ನ ಕಣಿವೆ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ.

ಬುಧವಾರ ಬೆಳಗ್ಗೆ ಹೆಲಿಕಾಪ್ಟರ್ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಸ್ಪೋಟಗೊಂಡಿದೆ ಹೆಲಿಕಾಪ್ಟರ್ ನಲ್ಲಿದ್ದ ಇಬ್ಬರು ಪೈಲಟ್ ಗಳು ಮತ್ತು ಇಂಜಿನಿಯರ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮುಂಜಾನೆ‌ ಸುಮಾರು 6.30ರ ವೇಳೆ ಹೆಲಿಕಾಪ್ಟರ್ ಪತನಗೊಂಡಿದೆ ದಟ್ಟ ಮಂಜಿನಿಂದಾಗಿ ಈ ಅವಘಡ ಸಂಭವಿಸಿರಬಹುದು ಎಂದು ಪುಣೆಯ ಪಿಂಪ್ರಿ ಚಿಂಚ್ವಾಡ್ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಇನ್ಸ್ಪೆಕ್ಟರ್ ಕನ್ಹಯ್ಯಾ ಥೋರಟ್ ಮಾಹಿತಿಯನ್ನು ನೀಡಿದ್ದು, ಪುಣೆ ಜಿಲ್ಲೆಯ ಬವ್ಧಾನ್ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೂವರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಈ ಹೆಲಿಕಾಪ್ಟರ್ ಯಾರಿಗೆ ಸೇರಿದ್ದು ಎಂದು ಇನ್ನೂ ಖಚಿತವಾಗಿಲ್ಲ ಎಂದು ತಿಳಿಸಿದ್ದಾರೆ.

ಹೆಲಿಕಾಪ್ಟರ್ ಪತನ: ಮೂವರು ದುರ್ಮರಣ Read More