ಅಮೆರಿಕದಲ್ಲಿ ಓದಿದ ವಿದ್ಯಾರ್ಥಿಗಳು ತವರಿಗೆ ಹೋಗುವುದು ನಾಚಿಕೆಗೇಡು: ಟ್ರಂಪ್​

ವಾಷಿಂಗ್ಟನ್: ನಮ್ಮಲ್ಲಿನ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿ, ಪ್ರತಿಭೆ ಸಂಪಾದಿಸಿದ ವಿದೇಶಿ ವಿದ್ಯಾರ್ಥಿಗಳು ತವರೂರಿಗೆ ತೆರಳುವುದು ನಾಚಿಕೆಗೇಡಿನ ಸಂಗತಿ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಚಾಟಿ ಬೀಸಿದ್ದಾರೆ.

ಹೊಸ ವಲಸೆ ನೀತಿ ಟ್ರಂಪ್​ ಗೋಲ್ಡ್​ ಕಾರ್ಡ್​ ಜಾರಿ ಅನುಷ್ಠಾನ ಮಾಡಿದ ನಂತರ ಮಾತನಾಡಿದ ಟ್ರಂಪ್, ಭಾರತ ಮತ್ತು ಚೀನಾದ ವಿದ್ಯಾರ್ಥಿಗಳು ಅಮೆರಿಕದ ಉನ್ನತ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದು ನಂತರ ತಾಯ್ನಾಡಿಗೆ ಹಿಂತಿರುಗುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮಲ್ಲಿನ ಕಂಪನಿಗಳು ಅಂತಹ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ಟ್ರಂಪ್ ಗೋಲ್ಡ್ ಕಾರ್ಡ್ ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ಅಮೆರಿಕಕ್ಕೆ ಶ್ರೀಮಂತ ವ್ಯಕ್ತಿಗಳು ಬರುವಂತೆ ಮಾಡುವುದು ಗೋಲ್ಡ್ ಕಾರ್ಡ್​ ಹಿಂದಿನ ಉದ್ದೇಶ. ಜೊತೆಗೆ, ಇಲ್ಲಿ ವ್ಯಾಸಂಗ ಮಾಡಿ ಪ್ರತಿಭೆಯನ್ನು ಹೊತ್ತೊಯ್ಯಬಾರದು ಎಂಬುದು ನನ್ನ ಉದ್ದೇಶ. ಅಂಥವರನ್ನು ಇಲ್ಲಿಯೇ ಉಳಿಸಿಕೊಳ್ಳಲು ಸರ್ಕಾರ ಹೊಸ ವಲಸೆ ನೀತಿ ರೂಪಿಸಿದೆ. ಈ ಮೂಲಕ ಅಮೆರಿಕನ್ನರಿಗೂ ಲಾಭವಾಗಲಿದೆ ಎಂದು ತಿಳಿಸಿದ್ದಾರೆ.

ನಮ್ಮ ಕಂಪನಿಗಳು ಉನ್ನತ ವಿಶ್ವವಿದ್ಯಾಲಯಗಳಾದ ವಾರ್ಟನ್, ಹಾರ್ವರ್ಡ್ ಮತ್ತು ಎಂಐಟಿಯಿಂದ ನೇಮಕ ಮಾಡಿಕೊಳ್ಳುವ ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳಲು ಗೋಲ್ಡ್ ಕಾರ್ಡ್ ಖರೀದಿಸಬಹುದು ಎಂದು ಟ್ರಂಪ್ ಕರೆ ನೀಡಿದರು.

ಹೊಸ ಗೋಲ್ಡ್ ಕಾರ್ಡ್ ಯೋಜನೆ ಬುಧವಾರದಿಂಸ ಆರಂಭವಾಗಿದ್ದು,
ನಿನ್ನೆಯಿಂದಲೇ ಅರ್ಜಿಗಳನ್ನು ಆಹ್ವಾನಿಸಿದೆ.

ಅಮೆರಿಕದಲ್ಲಿ ಓದಿದ ವಿದ್ಯಾರ್ಥಿಗಳು ತವರಿಗೆ ಹೋಗುವುದು ನಾಚಿಕೆಗೇಡು: ಟ್ರಂಪ್​ Read More

ದಸರಾ ಗೋಲ್ಡ್‌ ಕಾರ್ಡ್‌ ಬೆಲೆ 6,500 ರೂ: ಡಾ. ಹೆಚ್ ಸಿ ಮಹದೇವಪ್ಪ

ಮೈಸೂರು: ನಾಡಹಬ್ಬ ದಸರಾದ ಎಲ್ಲ ಕಾರ್ಯಕ್ರಮ ಮತ್ತು ಪ್ರವಾಸಿ ತಾಣಗಳನ್ನ ವೀಕ್ಷಣೆ ಮಾಡಲು ಒಂದು ಗೋಲ್ಡ್‌ ಕಾರ್ಡ್‌ ಬೆಲೆ 6,500 ರೂ ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ತಿಳಿಸಿದ್ದಾರೆ‌

ಆನ್​​ಲೈನ್​ನಲ್ಲಿ ಈ ಗೋಲ್ಡ್‌ ಕಾರ್ಡ್‌ ಸೆಪ್ಟೆಂಬರ್‌ 26 ರಿಂದ ಸೆಪ್ಟೆಂಬರ್‌ 30ರ ವರೆಗೆ ಐದು ದಿನಗಳ ಕಾಲ ಲಭ್ಯವಿರಲಿದೆ ಎಂದು ಅವರು ಮಾಹಿತಿ ನೀಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಗೋಲ್ಡ್‌ ಕಾರ್ಡ್‌ ಬೆಲೆ, 6,500 ರೂಪಾಯಿ, ಇದನ್ನ ಪಡೆದವರು ದಸರಾ ಸಂದರ್ಭದಲ್ಲಿ ಜಂಬೂ ಸವಾರಿ, ಬನ್ನಿಮಂಟಪದ ಪಂಜಿನ ಕವಾಯತು, ಚಾಮುಂಡಿ ಬೆಟ್ಟ, ಮೃಗಾಲಯ ಹಾಗೂ ಅರಮನೆ ಎಲ್ಲವನ್ನು ವೀಕ್ಷಣೆ ಮಾಡಬಹುದು ಎಂದು ಹೇಳಿದರು.

ಇದಲ್ಲದೇ 3,500 ರೂಪಾಯಿ ಗೋಲ್ಡ್‌ ಪಾಸ್‌ ಪಡೆದರೆ ಒಬ್ಬರು ಜಂಬೂ ಸವಾರಿ ಮಾತ್ರ ವೀಕ್ಷಣೆ ಮಾಡಬಹುದು. ಇದರ ಜತೆಗೆ ಪಂಜಿನ ಕವಾಯತು ವೀಕ್ಷಣೆ ಮಾಡಲು ಒಂದು ಸಾವಿರ ರೂಪಾಯಿಯ ಗೋಲ್ಡ್‌ ಕಾರ್ಡ್‌ ಪಡೆಯಬೇಕಾಗುತ್ತದೆ.

ಈ ಎಲ್ಲಾ ಗೋಲ್ಡ್‌ ಪಾಸ್​ಗಳು ಆನ್​ಲೈನ್​ನಲ್ಲಿ ಖರೀದಿ ಮಾಡಬೇಕು. ಈ ಬಾರಿ 1,000 ದಿಂದ 1,500 ಗೋಲ್ಡ್‌ ಪಾಸ್​ಗಳನ್ನ ಆನ್​ಲೈನ್​ನಲ್ಲಿ ಖರೀದಿ ಮಾಡಬಹುದಾಗಿದೆ ಎಂದು ಮಹದೇವಪ್ಪ ವಿವರಿಸಿದರು.

ದಸರಾ ಗೋಲ್ಡ್‌ ಕಾರ್ಡ್‌ ಬೆಲೆ 6,500 ರೂ: ಡಾ. ಹೆಚ್ ಸಿ ಮಹದೇವಪ್ಪ Read More