ಹಾಂಗ್ ಕಾಂಗ್: ಹಾಂಗ್ ಕಾಂಗ್‌ನಲ್ಲಿನ ಬಹುಮಹಡಿ ಕಟ್ಟಡದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿ 13 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.
ಈ ಅವಘಡದಲ್ಲಿ ಹಲವರು ಗಾಯಗೊಂಡಿದ್ದಾರೆ.
ಹಾಂಗ್ ಕಾಂಗ್‌ನ ತೈ ಪೊ ಜಿಲ್ಲೆಯಲ್ಲಿ ಬಹುಮಹಡಿ ಅಪಾರ್ಟ್ಮೆಂಟ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು 9 ಮಂದಿ ಸಜೀವ ದಹನವಾದರೆ ನಾಲ್ವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಬೆಂಕಿ ವೇಗವಾಗಿ ಹರಡುತ್ತಿದ್ದಂತೆ ಸುಮಾರು 700 ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಬೆಂಕಿ ಆರಿಸಲು ಬಂದಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ 13 ಜನ ಮೃತಪಟ್ಟಿದ್ದಾರೆ.
ಮೈಸೂರು: ಸರ್ಕಾರಿ ಬಸ್ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕಕ್ಕೆ ಒಳಗಾಗಿದ್ದ ಚಾಮುಂಡಿದಲ್ಲಿ ಭಕ್ತರ ನೆರವಿಗೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಬಿಂದುಮಣಿ ಧಾವಿಸಿ ಕಳಕಳಿ ಮೆರೆದ ಪ್ರಸಂಗ ನಡೆಯಿತು.
ಈ ಪೊಲೀಸ್ ಅಧಿಕಾರಿ ಬಿಂದುಮಣಿಯವರ ಸಮಯಪ್ರಜ್ಞೆಯಿಂದ ಪ್ರಯಾಣಿಕರ ಆತಂಕ ದೂರವಾಗಿ ಅವರ ಸರಳತೆ ಮಾನವೀಯತೆಗೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದು ನಾಡದೇವತೆ ಚಾಮುಂಡೇಶ್ವರಿ ವರ್ಧಂತಿ.ಎಂದಿನಂತೆ ಚಾಮುಂಡಿ ಬೆಟ್ಟಕ್ಕೆ ತೆರಳಲು ಭಕ್ತರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಉಚಿತ ಸಾರಿಗೆ ಬಸ್ ಹತ್ತಿ ಬೆಟ್ಟಕ್ಕೆ ತೆರಳುತ್ತಿದ್ದ ಬಸ್ ನಲ್ಲಿ ಮಾರ್ಗಮಧ್ಯೆ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರು ಆತಂಕ್ಕೆ ಒಳಗಾದರು.
ತಕ್ಷಣ ಚಾಲಕನ ನಿರ್ದೇಶನದಂತೆ ಪ್ರಯಾಣಿಕರು ಬಸ್ ನಿಂದ ಕೆಳಗೆ ಇಳಿದು ಅಸಹಾಯಕರಾಗಿ ನಿಂತಿದ್ದರು.
ಇದೇ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಬಿಂದುಮಣಿ ಅವರು ತಮ್ಮ ಅಧಿಕೃತ ವಾಹನದಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳುತ್ತಿದ್ದಾಗ ಆತಂಕದಲ್ಲಿ ಸಿಲುಕಿದ್ದ ಪ್ರಯಾಣಿಕರ ಪರಿಸ್ಥಿತಿ ನೋಡಿ ಅಲ್ಲಿಗೆ ಆಗಮಿಸಿದ್ದಾರೆ.
ತಮ್ಮ ವಾಹನದಿಂದ ಇಳಿದು ಪ್ರಯಾಣಿಕರಿಗೆ ಧೈರ್ಯತುಂಬಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಪ್ರಯಾಣಿಕರಿಗೆ ಬೆಟ್ಟಕ್ಕೆ ತೆರಳಲು ಅನುವು ಮಾಡಿಕೊಟ್ಟಿದ್ದಾರೆ.
ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿ ತಿಳಿದು ನಂತರ ಸುಸ್ಥಿತಿಗೆ ತಲುಪಿದ್ದನ್ನ ಖಚಿತಪಡಿಸಿಕೊಂಡು ಪ್ರಯಾಣಿಕರಿಗೆ ತೆರಳಲು ಅನುಕೂಲ ಮಾಡಿಕೊಟ್ಟರು.
ಡಿಸಿಪಿ ಬಿಂದುಮಣಿ ಅವರ ಸರಳತೆ ಹಾಗೂ ಸಮಯಪ್ರಜ್ಞೆ ಮೆಚ್ಚುಗೆಗೆ ಪಾತ್ರವಾಗಿದೆ.
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಕಿಡಿಗೇಡಿಗಳ ಬೆಂಕಿ ಹಾಕಿದ ಕೃತ್ಯದಿಂದ 100 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ನಾಶವಾಗಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೈಸೂರಿನ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಸಿ ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಜಿಲ್ಲಾಡಳಿತ ಕೂಡಲೇ 100 ಎಕರೆ ಪ್ರದೇಶದಲ್ಲಿ ಎರಡು ಪಟ್ಟು, ಗಿಡ ಮರಗಳನ್ನು ನೆಡಬೇಕು, ಜತೆಗೆ ಇವುಗಳನ್ನು ಸಂರಕ್ಷಣೆ ಮಾಡಬೇಕು, ಹೆಚ್ಚು ಹೆಚ್ಚು ಅರಳಿ ಮರಗಳನ್ನು ನೆಡಬೇಕು ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ತೇಜೇಶ್ ಲೋಕೇಶ್ ಗೌಡ ಒತ್ತಾಯಿಸಿದರು.
ನಿನ್ನೆ ನಡೆದ ಈ ಘಟನೆಯನ್ನು ಸರ್ಕಾರ ತೀವ್ರವಾಗಿ ಪರಿಗಣಿಸಿ ಚಾಮುಂಡಿ ಬೆಟ್ಟಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಪ್ರತಿ ದಿನ ಪೋಲೀಸ್ ಜೀಪು ಎರಡು- ಮೂರು ಬಾರಿ ಚಾಮುಂಡಿ ಬೆಟ್ಟ ಗಸ್ತು ತಿರುಗುವ ವ್ಯವಸ್ಥೆ ಮಾಡಬೇಕು,ಈ ರೀತಿ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕೆಂದು ಕೋರಿದರು.
ಪ್ರತಿಭಟನೆಯಲ್ಲಿ ಕೃಷ್ಣಪ್ಪ, ಪ್ರಭುಶಂಕರ್, ಪ್ರಜೀಶ್, ಶಿವಲಿಂಗಯ್ಯ, ನೇಹಾ, ವರಕೂಡು ಕೃಷ್ಣೇಗೌಡ, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಸುನೀಲ್ ಕುಮಾರ್, ಎಳನೀರು ರಾಮಣ್ಣ, ಬಸವರಾಜು, ಮಂಜುಳಾ, ನಾಗರಾಜು, ಕುಮಾರ್ ಗೌಡ, ರಘು ಅರಸ್, ಗೀತಾ ಗೌಡ, ದರ್ಶನ್ ಗೌಡ, ಪ್ರಭಾಕರ್, ಸುಬ್ಬೇಗೌಡ, ಅಕ್ಬರ್, ಸ್ವಾಮಿ ಗೌಡ, ಭಾಗ್ಯಮ್ಮ, ರವೀಶ್, ಪರಿಸರ ಚಂದ್ರು, ವಿಷ್ಣು ಮತ್ತಿತರರು ಪಾಲ್ಗೊಂಡಿದ್ದರು.
ಮೈಸೂರು: ಪಾಳು ಬಿದ್ದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಅಕ್ಕಪಕ್ಕದ ನಿವಾಸಗಳಿಗೂ ವ್ಯಾಪಿಸಿ ಆತಂಕ ಸೃಷ್ಟಿಸಿದ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ಪಟ್ಟಣದ ತ್ಯಾಗರಾಜ ಕಾಲೋನಿಯ ಎರಡನೇ ತಿರುವಿನಲ್ಲಿರುವ ಗೋವಿಂದರಾಜು ಎಂಬುವರಿಗೆ ಸೇರಿದ ಮನೆಗೆ ಬೆಂಕಿ ಬಿದ್ದಿದೆ.
ಹಲವು ವರ್ಷಗಳಿಂದ ಹೆಂಚಿನ ಮನೆ ಪಾಳು ಬಿದ್ದಿದೆ.ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಅಕ್ಕಪಕ್ಕದ ಮನೆಗಳಿಗೂ ವ್ಯಾಪಿಸಲಾರಂಭಿಸಿದೆ,ತಕ್ಷಣ ಎಚ್ಚೆತ್ತ ಮನೆಯವರು ಆತಂಕದಿಂದ ಹೊರಬಂದು ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಾರೋ ಕಿಡಿಗೇಡಿಗಳು ಪಾಳು ಬಿದ್ದ ಮನೆಗೆ ಬೆಂಕಿ ಹಚ್ಚಿದ್ದಾರೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಠಾಣಾಧಿಕಾರಿ ಚೆಲುವರಾಜು ಸ್ಪಷ್ಟಪಡಿಸಿದ್ದಾರೆ.
ಅಗ್ನಿಶಾಮಕ ಠಾಣಾಧಿಕಾರಿ ಚೆಲುವರಾಜು ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಸಪ್ಪ, ರಘುನಂದನ್, ವಿಶ್ವನಾಥ್, ರಾಹುಲ್, ಮಂಜುನಾಥ್, ಪಿ. ಆರಾಧ್ಯ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ಮೈಸೂರು: ನಿಂತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡು ಸುಟ್ಟು ಕರಕಲಾದ ಘಟನೆ ಮೈಸೂರಿನ ವಿವಿ ಮೊಹಲ್ಲಾದಲ್ಲಿ ನಡೆದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ,ಆದರೂ ಕಾರು ಸಂಪೂರ್ಣ ಸುಟ್ಟು ಕರುಕಲಾಗಿದೆ.
ಕಾರಿನಲ್ಲಿ ಬಂದಿದ್ದವರು ರಸ್ತೆ ಬದಿ ಕಾರು ನಿಲ್ಲಿಸಿ ಹೋಟೆಲ್ ಗೆ ತೆರಳಿದ್ದರು.ಈ ವೇಳೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಕೂಡಲೇ ಅಗ್ನಿಶಾಮಕ ಠಾಣೆಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾದರು.ಆದರೂ ಕಾರು ಸಂಪೂರ್ಣ ಸುಟ್ಟುಹೋಗಿದೆ.
ಮೈಸೂರು: ಮುಡಾದಲ್ಲಿ ಕೆಲವು ಸೈಟ್‌ಗಳ ದಾಖಲಾತಿಗಳನ್ನು ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿರುವ ಶಾಸಕ ಶ್ರೀವತ್ಸ, 50:50 ಅನುಪಾತದಲ್ಲಿ ಮನೆ ಕಟ್ಟುವುದಕ್ಕೆ ಅನುಮತಿ ನೀಡಬೇಡಿ ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವು ಸೈಟ್‌ಗಳ ದಾಖಲೆಗಳ ತೆಗೆದುಕೊಂಡು ಹೋಗಿದ್ದಾರೆ ಎಂದು ಮುಡಾ ಸಭೆಯಲ್ಲೇ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಈ ನಡುವೆ 50:50 ಅನುಪಾತದಲ್ಲಿ ಮನೆ ನಿರ್ಮಿಸಲು ನಕ್ಷೆಗೆ ಅನುಮತಿ ಕೊಡುವುದನ್ನು ನಿಲ್ಲಿಸಬೇಕು. ಈಗಾಗಲೇ ನಕ್ಷೆಗೆ ಅನುಮತಿ ಪಡೆದು ಕಾಮಗಾರಿ ಮಾಡುತ್ತಿರುವವರಿಗೆ ತಡೆಯಾಜ್ಞೆ ನೀಡಿ ಎಂದು ಮನವಿ ಮಾಡಿದ್ದಾರೆ.
250 ರಿಂದ 300 ಮಂದಿ ಮನೆ ಕಟ್ಟುವುದಕ್ಕೆ ಪ್ಲ್ಯಾನ್ ಮಾಡಿದ್ದಾರೆ. ಖಾಲಿ ಸೈಟ್ ಇದ್ದರೆ ಮುಡಾ ಜಪ್ತಿ ಮಾಡಿಕೊಳ್ಳುವುದು ಸುಲಭ ಆಗುತ್ತದೆ. ಒಂದು ವೇಳೆ ನಿರ್ಮಾಣ ಕಾಮಗಾರಿ ನಡೆದಿದ್ದರೆ ಅದನ್ನು ಕಟ್ಟದಂತೆ ತಡೆಯಬೇಕಾಗುತ್ತದೆ. ಈ ಎರಡೂ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಾನು ಮನವಿ ಪತ್ರ ಕೊಟ್ಟಿದ್ದೇನೆ ಎಂದು ತಿಳಿಸಿದರು.
ಬ್ಯಾಂಕಾಕ್, ಅ1: ಪ್ರವಾಸಕ್ಕೆ ಹೋಗಿದ್ದ ಶಾಲಾ ಮಕ್ಕಳನ್ನು ಹೊತ್ತ ಬಸ್ ಬ್ಯಾಂಕಾಕ್‌ನ ಉತ್ತರಕ್ಕೆ ಪ್ರವಾಸದಿಂದ ಹಿಂತಿರುಗುವಾಗ ಬೆಂಕಿ ಅವಘಡ ಸಂಭವಿಸಿ 25 ಮಂದಿ ಬೆಂಕಿಗೆ ಆಹುತಿಯಾದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಬ್ಯಾಂಕಾಕ್ ಹೊರಗೆ ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿದೆ. 20 ಮಕ್ಕಳು ಮತ್ತು ಮೂವರು ಶಿಕ್ಷಕರ ಮೃತದೇಹಗಳು ಪತ್ತೆಯಾಗಿವೆ.
ದೇಶದ ಉತ್ತರಕ್ಕೆ ತೆರಳಿದ್ದ ಬಸ್ ಶಾಲಾ ಪ್ರವಾಸದ ನಂತರ ಥಾಯ್ ರಾಜಧಾನಿಗೆ ಹಿಂತಿರುಗುತ್ತಿತ್ತು.
ಬೆಂಕಿ ಹೊತ್ತಿಕೊಂಡ ಕೂಡಲೇ ದಟ್ಟವಾದ ಕಪ್ಪು ಹೊಗೆಯ ಬೃಹತ್ ಮೋಡಗಳು ಆಕಾಶಕ್ಕೆ ಚಿಮ್ಮಿತ್ತೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಮೇಲ್ಸೇತುವೆಯ ಅಡಿಯಲ್ಲಿ ಬಸ್ಸು ಸುಟ್ಟುಹೋದಾಗ ಜ್ವಾಲೆಗಳು ಬಸ್ ಅನ್ನು ಆವರಿಸಿಕೊಂಡಿತ್ತು ಎಂದು ಹೇಳಿದ್ದಾರೆ.