ಪೋಪ್ ಫ್ರಾನ್ಸಿಸ್ ವಿಧಿವಶ

ವ್ಯಾಟಿಕನ್​ ಸಿಟಿ(ಯುರೋಪ್): ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ ಅವರು ವಿಧಿವಶರಾಗಿದ್ದಾರೆ.

ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿರುವ ವ್ಯಾಟಿಕನ್ ಸಿಟಿಯ ಕಾರ್ಡಿನಲ್ ಕೆವಿನ್ ಫಾರೆಲ್ ಅವರು,ಆತ್ಮೀಯ ಸಹೋದರ, ಸಹೋದರಿಯರೇ, ಪೋಪ್​ ಫ್ರಾನ್ಸಿಸ್ ಅವರು ಮೃತಪಟ್ಟಿದ್ದಾರೆ ಎಂಬುದನ್ನು ತೀವ್ರ ದುಃಖದಿಂದ ಘೋಷಿಸಬೇಕಾಗಿದೆ. ಸೋಮವಾರ ಬೆಳಿಗ್ಗೆ 7.35 ಕ್ಕೆ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿಸಿದ್ದಾರೆ.

ರೋಮ್‌ನ ಬಿಷಪ್ ಮತ್ತು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರಾಗಿದ್ದ ಪೋಪ್ ಅವರು ಬಡವರು, ದೀನದಲಿತರಿಗಾಗಿ ಶ್ರಮಿಸಿದವರು.ಅವರಿಗೆ 88 ವರ್ಷಗಳಾಗಿತ್ತು.

ಇತ್ತೀಚೆಗೆ ಪೋಪ್ ಅವರು ಗಂಭೀರ ಅನಾರೋಗ್ಯಕ್ಕೆ ತುತ್ತಾಗಿದ್ದರು. ನಿರಂತರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದ ಬಗ್ಗೆ ಭಕ್ತರಲ್ಲಿ ತೀವ್ರ ಕಳವಳ ಮೂಡಿಸಿತ್ತು.

ಫೆಬ್ರವರಿ 14ರಂದು, ಪೋಪ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅವರಿಗೆ ನ್ಯುಮೋನಿಯಾ ಕಾಣಿಸಿಕೊಂಡಿತ್ತು. ರಕ್ತಹೀನತೆಯಿಂದಲೂ ಬಳಲುತ್ತಿದ್ದ ಅವರಿಗೆ ರಕ್ತ ವರ್ಗಾವಣೆ ಮಾಡಲಾಗಿತ್ತು.

ಫೆಬ್ರವರಿ 22ರಂದು, ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಬಳಿಕ ಅವರಿಗೆ ಕೃತಕ ಆಕ್ಸಿಜನ್​ ಅಳವಡಿಸಲಾಗಿತ್ತು. ಶ್ವಾಸಕೋಶ ಸಮಸ್ಯೆ ಮತ್ತು ಮೂತ್ರಪಿಂಡ ವೈಫಲ್ಯ ಕೂಡಾ ಉಂಟಾಗಿತ್ತು. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ತಿಂಗಳುಗಳ ಕಾಲ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಮುಂದುವರಿಸಲಾಗಿತ್ತು.

16ನೇ ಬೆನೆಡಿಕ್ಟ್ ಅವರ ರಾಜೀನಾಮೆ ಬಳಿಕ ಪೋಪ್ ಫ್ರಾನ್ಸಿಸ್​ ಅವರು 2013ರಲ್ಲಿ ರೋಮ್‌ನ ಬಿಷಪ್ ಮತ್ತು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರಾಗಿದ್ದರು. ಅವರ ಅಗಲಿಕೆಯಿಂದ ಹೊಸ ಪೋಪ್ ಅನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ.

ಪೋಪ್ ಫ್ರಾನ್ಸಿಸ್ ವಿಧಿವಶ Read More

ಯುರೋಪ್​ನ ಪ್ರಮುಖ ನದಿಗಳಲ್ಲೂಆತಂಕಕಾರಿ ಮೈಕ್ರೋಪ್ಲಾಸ್ಟಿಕ್ ಪತ್ತೆ

ಯುರೋಪ್​: ನಮ್ಮ ದೇಶದಲ್ಲಷ್ಟೇ ಅಲ್ಲಾ,ಸ್ವಚ್ಛ ನಗರಗಳಲ್ಲಿ ಒಂದಾದ ಯುರೋಪ್​ನ ಪ್ರಮುಖ ನದಿಗಳಲ್ಲೂ ಕಲುಶಿತ ಕಂಡು ಬಂದಿದೆ.

ಅಲ್ಲಿನ ನದಿಗಳಲ್ಲಿ ಆತಂಕಕಾರಿ ಮಟ್ಟದ ಮೈಕ್ರೋಪ್ಲಾಸ್ಟಿಕ್​ ಇರುವುದಾಗಿ ವಿಜ್ಞಾನಿಗಳು ನಡೆಸಿದ ಅಧ್ಯಯನಗಳಲ್ಲಿ ಬಯಲಾಗಿದೆ.

ವಿಜ್ಞಾನಿಗಳು ನಡೆಸಿದ 14 ಅಧ್ಯಯನಗಳು ನಿನ್ನೆ ಏಕಕಾಲದಲ್ಲಿ ಪ್ರಕಟವಾಗಿದ್ದು, ಎಲ್ಲ ಅಧ್ಯಯನಗಳು ಈ ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿವೆ.

ಯುರೋಪ್​ನ ಎಲ್ಲಾ ನದಿಗಳು ಮಲಿನಗೊಂಡಿರುವುದು ಅಧ್ಯಯನದಲ್ಲಿ ಗೊತ್ತಾಗಿದೆ ಎಂದು ಥೇಮ್ಸ್​ನಿಂದ ಟೈಬರ್​ವರೆಗಿನ ಒಂಬತ್ತು ಪ್ರಮುಖ ನದಿಗಳಲ್ಲಿ ದೊಡ್ಡ ಪ್ರಮಾಣದ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಫ್ರೆಂಚ್​ ವಿಜ್ಞಾನಿ ಜೀನ್​ – ಫ್ರಾಂಕೋಯಿಸ್​ ಘಿಗ್ಲಿಯೋನ್​ ತಿಳಿಸಿದ್ದಾರೆ.

ಪರಿಸರ ವಿಜ್ಞಾನ ಮತ್ತು ಮಾಲಿನ್ಯ ಸಂಶೋಧನಾ ಜರ್ನಲ್‌ನಲ್ಲಿ ಪ್ರಕಟವಾದ ವರದಿಯಲ್ಲಿ, ಮಲಿನಗೊಂಡಿರುವ ನದಿಗಳೆಲ್ಲದರಲ್ಲೂ ಸರಾಸರಿ ಪ್ರತಿ ಘನ ಮೀಟರ್ ನೀರಿಗೆ 3 ಮೈಕ್ರೋಪ್ಲಾಸ್ಟಿಕ್‌ ಗಳಿರುವುದು ಗೊತ್ತಾಗಿದೆ.

ವಿಶ್ವದ ಅತ್ಯಂತ ಕಲುಷಿತ ನದಿಗಳಾದ ಯೆಲ್ಲೋ ನದಿ, ಯಾಂಗ್ಟ್ಜೆ, ಮೆಕಾಂಗ್, ಗಂಗಾ, ನೈಲ್, ನೈಜರ್, ಸಿಂಧೂ, ಅಮುರ್, ಪರ್ಲ್ ಮತ್ತು ಹೈ ಗಳಲ್ಲಿ ಪ್ರತಿ ಘನ ಮೀಟರ್‌ಗೆ 40 ಮೈಕ್ರೋಪ್ಲಾಸ್ಟಿಕ್‌ಗಳಿರುವುದು ಈ ಹಿಂದಿನ ಹಲವು ಅಧ್ಯಯನ ವರದಿಗಳಿಂದ ತಿಳಿದು ಬಂದಿದೆ.

ಅತ್ಯಂತ ಕಲುಷಿತ 10 ನದಿಗಳು, ಹೆಚ್ಚಿನ ಪ್ಲಾಸ್ಟಿಕ್ ಉತ್ಪಾದಿಸುವ ಅಥವಾ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಿಸುವ ದೇಶಗಳಲ್ಲಿ ಹರಿಯುತ್ತವೆ. ಆದರೆ, ಈ ಸಂಖ್ಯೆಗೆ ಹೋಲಿಸಿದರೆ ಯುರೋಪ್​ನ ನದಿಗಳು ಕಲುಷಿತ ಮಟ್ಟದಲ್ಲಿ ಬಹಳ ದೂರ ಇವೆ.

ಸೆಕೆಂಡಿಗೆ ಪ್ಲಾಸ್ಟಿಕ್​ 3000 ಕಣಗಳು: ಫ್ರಾನ್ಸ್​ನ ವ್ಯಾಲೆನ್ಸ್​ನಲ್ಲಿರುವ ರೋನ್​ ನದಿಯ ವೇಗದ ಹರಿವಿನಲ್ಲಿ ಪ್ರತಿ ಸೆಕೆಂಡಿಗೆ 3000 ಪ್ಲಾಸ್ಟಿಕ್​ ಕಣಗಳಿದ್ದರೆ, ಪ್ಯಾರಿಸ್​ನ ಸೀನ್​ ನದಿಯಲ್ಲಿ ಪ್ರತಿ ಸೆಕೆಂಡಿಗೆ ಸುಮಾರು 900 ಪ್ಲಾಸ್ಟಿಕ್​ ಕಣಗಳು ಪತ್ತೆಯಾಗಿವೆ ಎಂದು ವಿಜ್ಞಾನಿ ಘಿಗ್ಲಿಯೋನ್​ ತಿಳಿಸಿದ್ದಾರೆ.

ಬರಿಗಣ್ಣಿಗೆ ಕಾಣದ ಮೈಕ್ರೋಪ್ಲಾಸ್ಟಿಕ್‌ಗಳ ದ್ರವ್ಯರಾಶಿ ಗೋಚರಿಸುವ ಮೈಕ್ರೋಪ್ಲಾಸ್ಟಿಕ್​ಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿವೆ ಎಂದೂ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

ಯುರೋಪ್​ನ ಪ್ರಮುಖ ನದಿಗಳಲ್ಲೂಆತಂಕಕಾರಿ ಮೈಕ್ರೋಪ್ಲಾಸ್ಟಿಕ್ ಪತ್ತೆ Read More