ಜೆಜೆಎಂಪಿ ಮುಖ್ಯಸ್ಥ ನಕ್ಸಲ್ ಪಪ್ಪು ಲೋಹ್ರಾ,ಪ್ರಭಾತ್‌ ಗಂಜು ಎನ್ಕೌಂಟರ್

ರಾಂಚಿ: ಜಾರ್ಖಂಡ್‌ನ ಲತೇಹಾರ್‌ ಜಿಲ್ಲೆಯಲ್ಲಿ ಜೆಜೆಎಂಪಿ ಮುಖ್ಯಸ್ಥ ಪಪ್ಪು ಲೋಹ್ರಾ ಸೇರಿ ಮೂವರು ಪ್ರಮುಖ ನಕ್ಸಲ್‌ ನಾಯಕರನ್ನು ಎನ್‌ಕೌಂಟರ್‌ ಮಾಡಲಾಗಿದೆ.

ಶನಿವಾರ ಮುಂಜಾನೆ ಭದ್ರತಾ ಪಡೆಗಳು ನಡೆಸಿದ ಕಾರ್ಯಚರಣೆಯಲ್ಲಿ ನಕ್ಸಲ್ ದಂಗೆಕೋರ ಸಂಘಟನೆ ಜಾರ್ಖಂಡ್ ಜನ ಮುಕ್ತಿ ಪರಿಷತ್ ನ ಇಬ್ಬರು ಹಾಗೂ ಮತ್ತೊಬ್ಬ ನಕ್ಸಲ ಬಲಿಯಾಗಿದ್ದಾರೆ.

ಮೃತರಲ್ಲಿ ಪಪ್ಪು ಲೋಹ್ರಾನ ತಲೆಗೆ 10 ಲಕ್ಷ ರೂ. ಹಾಗೂ ಪ್ರಭಾತ್‌ ಗಂಜು ತಲೆಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.

ಈ ಪ್ರದೇಶದಲ್ಲಿ ಶಸ್ತ್ರಸಜ್ಜಿತ ನಕ್ಸಲರು ಇರುವಿಕೆ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ಆಧಾರದ ಮೇಲೆ ಜಂಟಿ ಭದ್ರತಾ ಪಡೆಗಳು ಈ ಕಾರ್ಯಾಚರಣೆಯನ್ನು ನಡೆಸಿದ್ದವು. ಭೀಕರ ಗುಂಡಿನ ಚಕಮಕಿಯ ಸಮಯದಲ್ಲಿ ಮೂವರು ಹತರಾಗಿದ್ದಾರೆ.

ಈ ವೇಳೆ ಒಂದು ಐಎನ್‌ಎಸ್‌ಎಎಸ್ ರೈಫಲ್ ವಶಪಡಿಸಿಕೊಳ್ಳಲಾಗಿದ್ದು ಕಾರ್ಯಚರಣೆ ಮುಂದುವರಿದಿದೆ.

ಜೆಜೆಎಂಪಿ ಮುಖ್ಯಸ್ಥ ನಕ್ಸಲ್ ಪಪ್ಪು ಲೋಹ್ರಾ,ಪ್ರಭಾತ್‌ ಗಂಜು ಎನ್ಕೌಂಟರ್ Read More

ಛತ್ತೀಸ್‌ಗಢದಲ್ಲಿ 26 ನಕ್ಸಲರ ಎನ್‌ *ಕೌಂಟರ್‌

ರಾಯ್ಪರ್‌: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ 26 ನಕ್ಸಲರು ಬಲಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಗೃಹ ಸಚಿವ ವಿಜಯ್ ಶರ್ಮಾ ತಿಳಿಸಿದ್ದಾರೆ.

ಅಬುಜ್ಮದ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ.

ಏ.21 ರಿಂದ ಮೇ 11 ರ ನಡುವೆ ಛತ್ತೀಸ್‌ಗಢ ಹಾಗೂ ತೆಲಂಗಾಣ ಗಡಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ರಾಜ್ಯ ಪೊಲೀಸರ ಜಂಟಿ ಪಡೆಗಳು ನಡೆಸಿದ್ದ ಕಾರ್ಯಾಚರಣೆಯಲ್ಲಿ 31 ನಕ್ಸಲರನ್ನು ಹತ್ಯೆ ಮಾಡಲಾಗಿತ್ತು. ಕಾರ್ಯಾಚರಣೆಯಲ್ಲಿ ಒಟ್ಟು 214 ನಕ್ಸಲ್ ಅಡಗುತಾಣಗಳನ್ನು ನಾಶಮಾಡಲಾಗಿತ್ತು.

ಆಗಿನ ಕಾರ್ಯಾಚರಣೆಯಲ್ಲಿ ಒಟ್ಟು 450 ಐಇಡಿಗಳು, 818 ಬಿಜಿಎಲ್ ಶೆಲ್‌ಗಳು, 899 ಬಂಡಲ್ ಕೋಡೆಕ್ಸ್, ಡಿಟೋನೇಟರ್‌ಗಳು ಮತ್ತು ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಛತ್ತೀಸ್‌ಗಢದಲ್ಲಿ 26 ನಕ್ಸಲರ ಎನ್‌ *ಕೌಂಟರ್‌ Read More

ಹುಬ್ಬಳ್ಳಿ ಅತ್ಯಾಚಾರಿ ಎನ್‌ಕೌಂಟರ್; ಸರಕಾರ,ಪೊಲೀಸರಿಗೆ ರೇಖಾ ಅಭಿನಂದನೆ

ಮೈಸೂರು: ಹುಬ್ಬಳ್ಳಿಯಲ್ಲಿ ಚಿಕ್ಕ ಮಗುವನ್ನು ಅಪಹರಿಸಿ, ಕೊಲೆ ಮಾಡಿದ ಆರೋಪಿಯನ್ನು ಕಾನೂನಿನ ಚೌಕಟ್ಟಿನಲ್ಲಿ ಗುಂಡಿಟ್ಟು ಕೊಲ್ಲಲಾಗಿದ್ದು, ತಕ್ಕ ಶಾಸ್ತಿ ಮಾಡಲಾಗಿದೆ ಎಂದು ಶ್ರೀ ದುರ್ಗಾಪೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಇಂತಹ ಕ್ರಮ ಕೈಗೊಂಡಿದ್ದಕ್ಕೆ ಸರಕಾರ ಹಾಗೂ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಘಟನೆ ಇಡೀ ಸಮಾಜ ತಲೆ ತಗ್ಗಿಸುವಂತಹದು, ಇಂತಹ ಘಟನೆಗಳು ಕೊನೆಯಾಗಬೇಕು. ಈ ರಾಕ್ಷಸಿ ಕೃತ್ಯವನ್ನು ಎಲ್ಲರೂ ಖಂಡಿಸಬೇಕು ಎಂದು ಕರೆ ನೀಡಿದ್ದಾರೆ.

ಹುಬ್ಬಳ್ಳಿ ಪೊಲೀಸರ ಈ ದಿಟ್ಟ ಕ್ರಮಕ್ಕೆ ಎಲ್ಲೆಡೆಯಿಂದ ಶ್ಲಾಘನೆ ಕೇಳಿ ಬರುತ್ತಿವೆ, ಇದು ಅತ್ಯಾಚಾರಿಗಳಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ, ಅತ್ಯಾಚಾರಿಗಳಿಗೆ ಇಂತಹ ಶಿಕ್ಷೆ ನೀಡಿದರೆ ಅವರಲ್ಲಿ ಭಯ ಬರುವುದು,
ತ್ವರಿತವಾಗಿ ವಿಧಿಸಿದ ಈ ಶಿಕ್ಷೆಯ ಭಯದಿಂದಾದರೂ ಇಂಥಾ ದುರುಳರ ಸಂಖ್ಯೆ ಕಡಿಮೆಯಾಗಲಿ ಎಂದು ರೇಖಾ ಶ್ರೀನಿವಾಸ್ ಹೇಳಿದ್ದಾರೆ.

ಹುಬ್ಬಳ್ಳಿ ಅತ್ಯಾಚಾರಿ ಎನ್‌ಕೌಂಟರ್; ಸರಕಾರ,ಪೊಲೀಸರಿಗೆ ರೇಖಾ ಅಭಿನಂದನೆ Read More

ಇಸ್ರೇಲ್ ಗೆ ನುಗ್ಗಲು ಯತ್ನಿಸಿದವ ಮಟಾಶ್

ಇಸ್ರೇಲ್: ಅಕ್ರಮವಾಗಿ ಇಸ್ರೇಲ್ ಗಡಿ ಪ್ರವೇಶಿಸಲು ಯತ್ನಿಸಿದ ಕೇರಳ ಮೂಲದ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಇಸ್ರೇಲ್ ಗಡಿ ನುಸುಳಲು ಯತ್ನಿಸಿದ ಈ ಗುಂಪಿನಲ್ಲಿ ಒಟ್ಟು ನಾಲ್ವರು ವ್ಯಕ್ತಿಗಳು ಇದ್ದರು ಎಂದು ವರದಿಗಳು ಸ್ಪಷ್ಟಪಡಿಸಿವೆ.

ಗುಂಪಿನಲ್ಲಿದ್ದ ಇಬ್ಬರು ಕೇರಳಿಯನ್ನರು ಪ್ರಸ್ತುತ ಇಸ್ರೇಲ್‌ನಲ್ಲಿ ಬಂಧನದಲ್ಲಿದ್ದಾರೆ.ಒಬ್ಬನ ಹತ್ಯೆಯಾಗಿದೆ.ಇನ್ನೊಬ್ಬನ ಬಗ್ಗೆ ಮಾಹಿತಿ ಇಲ್ಲ.

ಇಸ್ರೇಲ್ ಗೆ ನುಗ್ಗಲು ಯತ್ನಿಸಿದವ ಮಟಾಶ್ Read More

ಭದ್ರತಾ ಪಡೆ ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ಶನಿವಾರ ಮುಂಜಾನೆ ಮೂವರು ಉಗ್ರರು ಹತರಾಗಿದ್ದಾರೆ.

ಶುಕ್ರವಾರ ತಡರಾತ್ರಿ ಉತ್ತರ ಕಾಶ್ಮೀರ ಜಿಲ್ಲೆಯ ಪಟ್ಟಾನ್ ಪ್ರದೇಶದ ಚಕ್ ಟಪ್ಪರ್ ಕ್ರೀರಿಯ ಪ್ರದೇಶಗಳನ್ನು ಭದ್ರತಾ ಪಡೆ ಯೋಧರು ಸುತ್ತುವರೆದು ಕಾರ್ಯಾಚರಣೆ ಪ್ರಾರಂಭಿಸಿದರು.

ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಕಾರ್ಯಾಚರಣೆಯು ಎನ್‌ಕೌಂಟರ್‌ಗೆ ತಿರುಗಿ ಅದರಲ್ಲಿ ಇಬ್ಬರು ಯೋಧರು ಹುತಾತ್ಮರಾದರೆ ಮತ್ತಿಬ್ಬರು ಗಾಯಗೊಂಡಿದ್ದಾರೆ.

ಈ ವೇಳೆ ಪ್ರತಿದಾಳಿ ನಡೆಸಿದ ಯೋಧರು ಶನಿವಾರ ಮುಂಜಾನೆ ಮೂವರು ಉಗ್ರರನ್ನು ಎನ್ಕೌಂಟರ್ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಉಗ್ರರ ಗುರುತು ಪತ್ತೆ ಹಚ್ಚಲಾಗುತ್ತಿದ್ದು, ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.

ಭದ್ರತಾ ಪಡೆ ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಫಿನಿಶ್ Read More

6 ಮಾವೋವಾದಿಗಳ ಹತ್ಯೆ: ಇಬ್ಬರು ಯೋಧರಿಗೆ ಗಾಯ

ಹೈದರಾಬಾದ್: ತೆಲಂಗಾಣ ರಾಜ್ಯದ ಭದ್ರಾದ್ರಿ ಕೊತಗುಡೆಂ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ನಡೆದ ಎನ್ ಕೌಂಟರ್ ನಲ್ಲಿ 6 ಮಂದಿ ಮಾವೋವಾದಿಗಳು ಹತ್ಯೆಗೀಡಾಗಿದ್ದಾರೆ.

ಇಬ್ಬರು ಭದ್ರತಾ ಪಡೆ ಯೋಧರಿಗೆ ಗಾಯವಾಗಿದ್ದು ಒಬ್ಬರ ಸ್ಥಿತಿ ಗಂಭೀರವಾಗಿದೆ.

ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆಯಲ್ಲಿ ಮುಂಜಾನೆ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಎನ್‌ಕೌಂಟರ್ ನಡೆದು 6 ಮಾವೋವಾದಿಗಳು ಮೃತಪಟ್ಟಿದ್ದಾರೆ ಎಂದು ಭದ್ರಾದ್ರಿ ಕೊತಗುಡೆಂ ಜಿಲ್ಲಾ ವರಿಷ್ಠಾಧಿಕಾರಿ ರೋಹಿತ್ ರಾಜ್ ತಿಳಿಸಿದ್ದಾರೆ.

6 ಮಾವೋವಾದಿಗಳ ಹತ್ಯೆ: ಇಬ್ಬರು ಯೋಧರಿಗೆ ಗಾಯ Read More