ಅಮೆರಿಕದಲ್ಲಿ ಓದಿದ ವಿದ್ಯಾರ್ಥಿಗಳು ತವರಿಗೆ ಹೋಗುವುದು ನಾಚಿಕೆಗೇಡು: ಟ್ರಂಪ್​

ವಾಷಿಂಗ್ಟನ್: ನಮ್ಮಲ್ಲಿನ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿ, ಪ್ರತಿಭೆ ಸಂಪಾದಿಸಿದ ವಿದೇಶಿ ವಿದ್ಯಾರ್ಥಿಗಳು ತವರೂರಿಗೆ ತೆರಳುವುದು ನಾಚಿಕೆಗೇಡಿನ ಸಂಗತಿ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಚಾಟಿ ಬೀಸಿದ್ದಾರೆ.

ಹೊಸ ವಲಸೆ ನೀತಿ ಟ್ರಂಪ್​ ಗೋಲ್ಡ್​ ಕಾರ್ಡ್​ ಜಾರಿ ಅನುಷ್ಠಾನ ಮಾಡಿದ ನಂತರ ಮಾತನಾಡಿದ ಟ್ರಂಪ್, ಭಾರತ ಮತ್ತು ಚೀನಾದ ವಿದ್ಯಾರ್ಥಿಗಳು ಅಮೆರಿಕದ ಉನ್ನತ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದು ನಂತರ ತಾಯ್ನಾಡಿಗೆ ಹಿಂತಿರುಗುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮಲ್ಲಿನ ಕಂಪನಿಗಳು ಅಂತಹ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ಟ್ರಂಪ್ ಗೋಲ್ಡ್ ಕಾರ್ಡ್ ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ಅಮೆರಿಕಕ್ಕೆ ಶ್ರೀಮಂತ ವ್ಯಕ್ತಿಗಳು ಬರುವಂತೆ ಮಾಡುವುದು ಗೋಲ್ಡ್ ಕಾರ್ಡ್​ ಹಿಂದಿನ ಉದ್ದೇಶ. ಜೊತೆಗೆ, ಇಲ್ಲಿ ವ್ಯಾಸಂಗ ಮಾಡಿ ಪ್ರತಿಭೆಯನ್ನು ಹೊತ್ತೊಯ್ಯಬಾರದು ಎಂಬುದು ನನ್ನ ಉದ್ದೇಶ. ಅಂಥವರನ್ನು ಇಲ್ಲಿಯೇ ಉಳಿಸಿಕೊಳ್ಳಲು ಸರ್ಕಾರ ಹೊಸ ವಲಸೆ ನೀತಿ ರೂಪಿಸಿದೆ. ಈ ಮೂಲಕ ಅಮೆರಿಕನ್ನರಿಗೂ ಲಾಭವಾಗಲಿದೆ ಎಂದು ತಿಳಿಸಿದ್ದಾರೆ.

ನಮ್ಮ ಕಂಪನಿಗಳು ಉನ್ನತ ವಿಶ್ವವಿದ್ಯಾಲಯಗಳಾದ ವಾರ್ಟನ್, ಹಾರ್ವರ್ಡ್ ಮತ್ತು ಎಂಐಟಿಯಿಂದ ನೇಮಕ ಮಾಡಿಕೊಳ್ಳುವ ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳಲು ಗೋಲ್ಡ್ ಕಾರ್ಡ್ ಖರೀದಿಸಬಹುದು ಎಂದು ಟ್ರಂಪ್ ಕರೆ ನೀಡಿದರು.

ಹೊಸ ಗೋಲ್ಡ್ ಕಾರ್ಡ್ ಯೋಜನೆ ಬುಧವಾರದಿಂಸ ಆರಂಭವಾಗಿದ್ದು,
ನಿನ್ನೆಯಿಂದಲೇ ಅರ್ಜಿಗಳನ್ನು ಆಹ್ವಾನಿಸಿದೆ.

ಅಮೆರಿಕದಲ್ಲಿ ಓದಿದ ವಿದ್ಯಾರ್ಥಿಗಳು ತವರಿಗೆ ಹೋಗುವುದು ನಾಚಿಕೆಗೇಡು: ಟ್ರಂಪ್​ Read More

ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ಇತ್ಯರ್ಥಪಡಿಸಿದ್ದು ನಾನೇ:ಟ್ರಂಪ್

ವಾಷಿಂಗ್ಟನ್ : ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸಂಘರ್ಷವನ್ನು ನಾನೇ ಇತ್ಯರ್ಥಪಡಿಸಿದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.

ನಾವು ಪಾಕಿಸ್ತಾನ ಮತ್ತು ಭಾರತದೊಂದಿಗೆ ಏನು ಮಾಡಿದ್ದೇವೆ ಎಂಬುದನ್ನು ನೀವು ನೋಡಿದ್ದೀರಿ. ನಾನು ಅದನ್ನು ವ್ಯಾಪಾರದ ಮೂಲಕ ಇತ್ಯರ್ಥಪಡಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ಮತ್ತೆ ಹೇಳಿದ್ದಾರೆ.

ತಮ್ಮ ಓವಲ್​ ಕಚೇರಿಯಲ್ಲಿ ಬುಧವಾರ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಎರಡರೊಂದಿಗೂ ಅಮೆರಿಕ ದೊಡ್ಡ ಪ್ರಮಾಣದಲ್ಲಿ ವ್ಯವಹಾರ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಈ ಸಂಘರ್ಷದಲ್ಲಿ ಯಾರಾದರೂ ಕೊನೆಯದಾಗಿ ಗುಂಡು ಹಾರಿಸಬೇಕಾಗಿತ್ತು. ಆದರೆ ಗುಂಡಿನ ದಾಳಿ ಇನ್ನಷ್ಟು ಕೆಟ್ಟದಾಗುತ್ತಾ, ದೊಡ್ಡದಾಗುತ್ತಾ, ದೇಶಗಳ ಮಧ್ಯ ಆಳವಾದ ಕಂದಕಕ್ಕೆ ಕಾರಣವಾಗುತ್ತಿತ್ತು. ಹೀಗಾಗಿ ನಾವು ಅವರೊಂದಿಗೆ ಮಾತನಾಡಿದೆವು. ಆದರೆ ನಾನೇ ಇದನ್ನು ಸರಿ ಮಾಡಿದೆ ಎಂದು ಹೇಳಲು ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.

ಪಾಕಿಸ್ತಾನವು ಕೆಲವು ಅತ್ಯುತ್ತಮ ಜನರನ್ನು ಮತ್ತು ಕೆಲವು ಒಳ್ಳೆಯ ನಾಯಕರನ್ನು ಹೊಂದಿದೆ. ಇನ್ನು ಭಾರತ ಹಾಗೂ ನನ್ನ ಸ್ನೇಹಿತ ಮೋದಿ ಎಂದು ಟ್ರಂಪ್ ಹೇಳಿದರು.

ಈ ವೇಳೆ ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಮೋದಿ, ಪರಸ್ಪರ ಸ್ನೇಹಿತ ಎಂದು ಉತ್ತರಿಸಿದರು. ಈ ವೇಳೆ ಮತ್ತೆ ಮಾತು ಮುಂದುವರಿಸಿದ ಟ್ರಂಪ್​, ಅವರು ಒಬ್ಬ ಒಳ್ಳೆಯ ವ್ಯಕ್ತಿ ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಇತ್ಯರ್ಥಗೊಳಿಸಲು ನಾನು ಸಹಾಯ ಮಾಡಿದೆ ಎಂದು ಪದೇ ಪದೇ ಟ್ರಂಪ್ ಹೇಳಿಕೊಳ್ಳುತ್ತಿದ್ದು,​ ಅವರ ಈ ಹೇಳಿಕೆ ಭಾರತದಲ್ಲಿ ಪ್ರತಿಪಕ್ಷಗಳು, ಮೋದಿ ಸರ್ಕಾರ ವಿರುದ್ಧ ಮುಗಿ ಬೀಳುವಂತೆ ಮಾಡಿದೆ.

ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ಇತ್ಯರ್ಥಪಡಿಸಿದ್ದು ನಾನೇ:ಟ್ರಂಪ್ Read More

ಟ್ರಂಪ್‌ ತೆರಿಗೆ ಸಮರದಿಂದ ಷೇರುಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ

ವಾಶಿಂಗ್ಟನ್,ಏ.7: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರಂಭಿಸಿದ ತೆರಿಗೆ ಸಮರದಿಂದ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗಿದ್ದು, ಇಂದು ಒಂದೇ ದಿನ ಹೂಡಿಕೆದಾರರಿಗೆ 19 ಲಕ್ಷ ಕೋಟಿ ರೂ. ನಷ್ಟವಾಗಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರೀ ಪ್ರಮಾಣದಲ್ಲಿ ಹೂಡಿಕೆಯನ್ನು ಹಿಂದಕ್ಕೆ ಪಡೆದ ಕಾರಣ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚಂಕ್ಯ ನಿಫ್ಟಿ ಭಾರೀ ಇಳಿಕೆ ಕಂಡಿದೆ.

ಸೆನ್ಸೆಕ್ಸ್‌ ಆರಂಭದಲ್ಲಿ 4 ಸಾವಿರ ಅಂಕ ಪತನಗೊಂಡು ನಂತರ ಚೇತರಿಕೆ ಕಂಡಿತ್ತು. ಬೆಳಗ್ಗೆ 11 ಗಂಟೆ ವೇಳೆಗೆ 2,900 ಅಂಕ ಚೇತರಿಕೆಯಾಗಿ 72,423.48 ರಲ್ಲಿ ವ್ಯವಹಾರ ನಡೆಸುತ್ತಿತ್ತು. ನಿಫ್ಟಿ 900 ಅಂಕ ಇಳಿಕೆಯಾಗಿ 21,960.80 ರಲ್ಲಿ ವ್ಯವಹಾರ ನಡೆಸುತ್ತಿದೆ. ರಿಯಾಲ್ಟಿ, ಐಟಿ, ಆಟೋ ಮತ್ತು ಲೋಹ ಮುಂತಾದ ಕ್ಷೇತ್ರಗಳ ಷೇರುಗಳ ಮೌಲ್ಯ ಇಳಿಕೆಯಾಗಿದೆ.

ಸೋಮವಾರ ಬೆಳಿಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಏಷ್ಯಾದ ಎಲ್ಲ ಮಾರುಕಟ್ಟೆಗಳಲ್ಲಿ ಭಾರೀ ಇಳಿಕೆಯಾಗಿತ್ತು.

ಗಿಫ್ಟ್‌ ನಿಫ್ಟಿಯೂ ಅಂಕ ಇಳಿಕೆಯಾಗುತ್ತಿದ್ದಂತೆ ಭಾರತದಲ್ಲೂ ಪರಿಣಾಮ ಬೀರುವುದು ಖಚಿತವಾಗಿತ್ತು. ಬೆಳಗ್ಗೆಯವರೆಗೆ 19 ಲಕ್ಷ ಕೋಟಿ ನಷ್ಟ ಸಂಭವಿಸಿದ್ದು ನಿಫ್ಟಿ ಮತ್ತು ಸೆನ್ಸೆಕ್ಸ್‌ ಮತ್ತಷ್ಟು ಕುಸಿದರೆ ನಷ್ಟದ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ.

ಗಿಫ್ಟಿ ನಿಫ್ಟಿ 888, ಜಪಾನ್‌ನ ನಿಕ್ಕಿ 225 2,302 ಅಂಕ, ತೈವಾನ್‌ನ ವೈಯ್ಟೆಡ್ ಸೂಚ್ಯಂಕವೂ 2063 ಅಂಶ ಕುಸಿಯಿತು. ಹಾಂಕಾಂಗ್‌ನ ಹ್ಯಾಂಗ್‌ಸೆನ್‌ 2,677 ಅಂಕ ಕುಸಿದಿದೆ.

ಶುಕ್ರವಾರದಿಂದಲೇ ಅಮೆರಿಕ ಮಾಧ್ಯಮಗಳು ಹೆಸರಿನಲ್ಲಿ ಸೋಮವಾರ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಲಿದೆ ಎಂದು ವರದಿಗಳು ಬಿತ್ತರಿಸಿದ್ದವು. ನಿರೀಕ್ಷೆಯಂತೆ ಸೋಮವಾರ ವಿಶ್ವದ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗಿದ್ದು ಹೂಡಿಕೆದಾರರಿಗೆ ಭಾರೀ ನಷ್ಟವಾಗಿದೆ.

ಟ್ರಂಪ್‌ ತೆರಿಗೆ ಸಮರದಿಂದ ಷೇರುಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ Read More

ರಷ್ಯಾ, ಉಕ್ರೇನಿಯನ್ ನಾಯಕರ ವಿರುದ್ಧ ಟ್ರಂಪ್ ಟೀಕೆ

ಅಮೇರಿಕ: ಯುದ್ಧ ಕೊನೆಗೊಳಿಸಲು ಕದನ ವಿರಾಮವನ್ನು ರೂಪಿಸಲು ರಷ್ಯಾ ಮತ್ತು ಉಕ್ರೇನಿಯನ್ ನಾಯಕರು ಹೆಣಗಾಡುತ್ತಿದ್ದರೆ‌ ಇತ್ತ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇಬ್ಬರನ್ನೂ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಕದನ ವಿರಾಮ ವಿಚಾರದಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸುತ್ತಿದ್ದೇವೆ ಇಬ್ಬರ ನಡುವೆ ಅಗಾಧ ದ್ವೇಷವಿದೆ ಪುಟಿನ್ ಝೆಲೆನ್ಸ್ಕಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಕ್ಕೆ ಅವರು ಕೋಪಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಅಂತೆಯೇ ಈಗಾಗಲೇ ತೀವ್ರ ಆರ್ಥಿಕ ನಿರ್ಬಂಧಗಳನ್ನು ಎದುರಿಸುತ್ತಿರುವ ರಷ್ಯಾದ ಮೇಲೆ ಹೊಸ ನಿರ್ಬಂಧಗಳನ್ನು ಸೇರಿಸುವುದನ್ನು ಮತ್ತು ಅದರ ತೈಲ ರಫ್ತನ್ನು ದುರ್ಬಲಗೊಳಿಸಲು ಸುಂಕಗಳನ್ನು ಬಳಸುವುದನ್ನು ಪರಿಗಣಿಸುವುದಾಗಿ ಟ್ರಂಪ್ ಹೇಳಿದರು.

ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಝೆಲೆನ್ಸ್ಕಿ ಕಾನೂನು ಬದ್ಧತೆಯನ್ನು ಹೊಂದಿಲ್ಲ ಎಂದು ರಷ್ಯಾ ಅಧ್ಯಕ್ಷ ಪುಟಿನ್ ತಕರಾರು ತೆಗೆದಿದ್ದಾರೆ. ಅಲ್ಲದೆ ಉಕ್ರೇನ್‌ಗೆ ಬಾಹ್ಯ ಆಡಳಿತದ ಅಗತ್ಯವಿದೆ ಎಂದು ಮತ್ತೆ ಪುನರುಚ್ಚರಿಸಿದ್ದಾರೆ.

ರಷ್ಯಾ, ಉಕ್ರೇನಿಯನ್ ನಾಯಕರ ವಿರುದ್ಧ ಟ್ರಂಪ್ ಟೀಕೆ Read More

ಸುನಿತಾ ವಿಲಿಯಮ್ಸ್ ಗೆ‌ ಹೆಚ್ಚುವರಿ ವೇತನ-ಟ್ರಂಪ್

ವಾಷಿಂಗ್ಟನ್: 8 ದಿನಗಳ ಅಧ್ಯಯನಕ್ಕಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಹೆಚ್ಚುವರಿಯಾಗಿ 278 ದಿನಗಳು ಅಲ್ಲೇ ಉಳಿದಿದ್ದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸ್ವಂತ ಹಣದಿಂದ ಹೆಚ್ಚುವರಿ ವೇತನ ನೀಡುವುದಾಗಿ ತಿಳಿಸಿದ್ದಾರೆ.

ಹೆಚ್ಚುವರಿ ಸಂಬಳದ ಬಗ್ಗೆ ಯಾರೂ ನನ್ನ ಬಳಿ ಬಂದು ಕೇಳಿಕೊಂಡಿಲ್ಲ. ಒಂದು ವೇಳೆ ಅದರ ಅವಶ್ಯಕತೆ ಇದ್ದಲ್ಲಿ ನನ್ನ ಸ್ವಂತ ಹಣದಿಂದಲೇ ಅವರಿಗೆ ಸಂಬಳ ನೀಡುತ್ತೇನೆ ಎಂದು ಹೇಳಿದ್ದಾರೆ ‌

ಬೇರೆ ಖಾಸಗಿ ವಲಯಗಳಂತೆ ನಾಸಾದ ಗಗನಯಾತ್ರಿಗಳಿಗೆ ಹೆಚ್ಚುವರಿ ಕೆಲಸಕ್ಕೆ ಹೆಚ್ಚು ಸಂಬಳ ಸಿಗುವುದಿಲ್ಲ,ಬದಲಿಗೆ ಅಮೆರಿಕದ ಫೆಡರಲ್(ಸರ್ಕಾರಿ) ಉದ್ಯೋಗಿಗಳಂತೆ ಅವರಿಗೆ ಸೌಲಭ್ಯಗಳು ದೊರೆಯುತ್ತವೆ.

ಸುನಿತಾ ವಿಲಿಯಮ್ಸ್ ಗೆ‌ ಹೆಚ್ಚುವರಿ ವೇತನ-ಟ್ರಂಪ್ Read More

ಲಕ್ಷಾಂತರ ವಲಸಿಗರ ಕಾನೂನುಬದ್ಧ ರಕ್ಷಣೆ ರದ್ದು:ಟ್ರಂಪ್‌

ವಾಷಿಂಗ್ಟನ್: ಲಕ್ಷಾಂತರ ವಲಸಿಗರ ಕಾನೂನುಬದ್ಧ ರಕ್ಷಣೆಯನ್ನು ರದ್ದುಗೊಳಿಸುವುದಾಗಿ ಅಮೆರಿಕ ಹೇಳಿದ್ದು, ಅವರಿಗೆ ದೇಶ ತೊರೆಯಲು ವಾರಗಳ ಕಾಲಾವಕಾಶ ನೀಡಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಇತಿಹಾಸದಲ್ಲಿಯೇ ಅತಿದೊಡ್ಡ ಗಡಿಪಾರು ಅಭಿಯಾನವನ್ನು ಕೈಗೊಳ್ಳುವುದಾಗಿ ಅದರಲ್ಲೂ ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಿಂದ ಅಕ್ರಮ ವಲಸೆ ತಡೆಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಅಕ್ಟೋಬರ್ 2022ರ ನಂತರ ಅಮೆರಿಕ್ಕೆ ಬಂದಿರುವ ಕ್ಯೂಬಾ, ಹೈಟಿ, ನಿಕರಾಗುವಾ ಮತ್ತು ವೆನೆಜುವೆಲಾ ಸೇರಿದಂತೆ ನಾಲ್ಕು ದೇಶಗಳ ಸುಮಾರು 5,32,000 ಜನರಿಗೆ ಅನ್ವಯಿಸುತ್ತದೆ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಅವರು ಹೇಳಿದ್ದಾರೆ.

ಈ ನಾಲ್ಕು ದೇಶದ ಲಕ್ಷಾಂತರ ನಾಗರಿಕರು ಏಪ್ರಿಲ್ 24ರಂದು ಅಥವಾ ಫೆಡರಲ್ ರಿಜಿಸ್ಟರ್‌ನಲ್ಲಿ ನೋಟಿಸ್ ಪ್ರಕಟವಾದ 30 ದಿನಗಳಲ್ಲಿ ಅಮೆರಿಕದಲ್ಲಿ ಉಳಿಯುವ ತಮ್ಮ ಕಾನೂನು ರಕ್ಷಣೆಯನ್ನು ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಲಕ್ಷಾಂತರ ವಲಸಿಗರ ಕಾನೂನುಬದ್ಧ ರಕ್ಷಣೆ ರದ್ದು:ಟ್ರಂಪ್‌ Read More

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರ

ವಾಶಿಂಗ್ಟನ್: ಡೊನಾಲ್ಡ್ ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ವೆಸ್ಟ್ ಲಾನ್‌ನಲ್ಲಿರುವ ಬೃಹತ್ ವೇದಿಕೆಯಲ್ಲಿ ನೂತನ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.

ಜೆಡಿ ವ್ಯಾನ್ಸ್ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಚುನಾವಣಾ ಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ಗುಂಡಿನ ದಾಳಿಯಿಂದ ಅದೃಷ್ಟವಶಾತ್ ಪಾರಾಗಿದ್ದರು. ಇದು ಅಮೆರಿಕ ರಾಜಕೀಯದ ಚಿತ್ರಣವನ್ನೇ ಬದಲಾಯಿಸಿತು. ಕಮಲಾ ಹ್ಯಾರಿಸ್‌ರನ್ನು ಮಣಿಸಿದ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷಾರಿ ಆಯ್ಕೆಯಾದರು.

ಯುಎಸ್‌ನಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ಗಡೀಪಾರು ಮಾಡುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ.

ರಾಜಕೀಯ ಶತ್ರುಗಳ ವಿರುದ್ಧ ಪ್ರತಿಕಾರ ತೀರಿಸುವ ಮತ್ತು ಜಗತ್ತಿನಲ್ಲಿ ಮತ್ತೆ ಅಮೆರಿಕದ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತೇನೆ ಎಂಬ ಭರವಸೆ ನೀಡಿದ್ದ ಟ್ರಂಪ್, ಸೋಮವಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ, ಇದೀಗ ಇಡೀ ವಿಶ್ವವೇ ಅಮೆರಿಕದತ್ತ ನೋಡುತ್ತಿದೆ.

ಅಮೆರಿಕ ಅಧ್ಯಕ್ಷರಾಗಿ 78 ವರ್ಷದ ಡೊನಾಲ್ಡ್‌ ಟ್ರಂಪ್‌ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾರತದಿಂದ ಸಚಿವ ಎಸ್‌. ಜೈಶಂಕರ್, ಉದ್ಯಮಿಗಳಾದ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕೂಡ ಭಾಗಿಯಾಗಿದ್ದಾರೆ. ವಿಶ್ವದ ಮೂವರು ಶ್ರೀಮಂತ ವ್ಯಕ್ತಿಗಳಾದ ಎಲಾನ್ ಮಸ್ಕ್, ಜೆಫ್ ಬೆಜೋಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ಕೂಡ ಟ್ರಂಪ್ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರ Read More

ಟ್ರಂಪ್ ಗೆ 2ನೇ ಬಾರಿ ಅಮೆರಿಕ ಅಧ್ಯಕ್ಷ ಪಟ್ಟ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಇನ್ನೂ ಅಧಿಕೃತವಾಗಿ ಗೆದ್ದವರು ಯಾರು ಎಂದು ಘೋಷಿಸಿಲ್ಲ,ಆದರೂ ಬಹುತೇಕ ಫಲಿತಾಂಶ ನಿರ್ಧಾರವಾಗಿರುವುದರಿಂದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವಿನ ನಗೆ ಬೀರಿದ್ದಾರೆ

ಫಲಿತಾಂಶದ ಬಗ್ಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್ ಇದು ಹಿಂದೆಂದೂ ಯಾರೂ ನೋಡದ ಚಳವಳಿ. ನಾನೂ, ಇದು ಸಾರ್ವಕಾಲಿಕ ಶ್ರೇಷ್ಠ ರಾಜಕೀಯ ಚಳವಳಿ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.

ಈ ದೇಶದ ಜನತೆಯ ಜೊತೆ ನಾನು ಯಾವತ್ತಿಗೂ ಇರುತ್ತೇನೆ. ನಾವು ನಮ್ಮ ಗಡಿಗಳನ್ನು ಸರಿಪಡಿಸಲು ಹೊರಟಿದ್ದೇವೆ, ನಮ್ಮ ದೇಶದ ವಿಚಾರಗಳನ್ನು ಸರಿಪಡಿಸಬೇಕಿದೆ. ನಾವು ಇಂದು ಇತಿಹಾಸವನ್ನು ನಿರ್ಮಿಸಿದ್ದೇವೆ, ಯಾರೂ ಯೋಚಿಸದ ಅಡೆತಡೆಗಳನ್ನು ನಾವು ಜಯಿಸಿದ್ದೇವೆ. ನಾವು ಹೆಚ್ಚಿನದನ್ನು ಸಾಧಿಸಿದ್ದು, ರಾಜಕೀಯ ಗೆಲುವಾಗಿದೆ ಎಂದು ಬಣ್ಣಿಸಿದ್ದಾರೆ.

ಶ್ವೇತಭವನವನ್ನು ಗೆಲ್ಲಲು ಅಗತ್ಯವಿರುವ 270 ಚುನಾವಣಾ ಮತಗಳಲ್ಲಿ ಟ್ರಂಪ್ 267 ಎಲೆಕ್ಟೊರಲ್ ಮತಗಳನ್ನು ಈಗಾಗಲೇ ಗೆದ್ದಿದ್ದಾರೆ. ಇದೊಂದು ದೊಡ್ಡ ಕೆಲಸ. ಇದು ಪ್ರಪಂಚದ ಅತ್ಯಂತ ಪ್ರಮುಖ ಕೆಲಸ.. ನಾನು ನಿಮಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ, ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಟ್ರಂಪ್ ಭರವಸೆ ನೀಡಿದ್ದಾರೆ.

ಚುನಾವಣಾ ಪ್ರಚಾರ ವೇಳೆ ಡೊನಾಲ್ಡ್ ಟ್ರಂಪ್ ಮೇಲೆ ಸಾಕಷ್ಟು ಬಾರಿ ಹತ್ಯೆಯತ್ನ ನಡೆದಿತ್ತು, ಕೂದಲೆಳೆ ಅಂತರದಲ್ಲಿ ಅವರು ಬಚಾವಾಗಿದ್ದರು. ಅದನ್ನು ಸಹ ಇಂದಿನ ಭಾಷಣದಲ್ಲಿ ಟ್ರಂಪ್ ಪ್ರಸ್ತಾಪಿಸಿದರು. ದೇವರು ಒಂದು ಕಾರಣಕ್ಕಾಗಿ ನನ್ನ ಜೀವವನ್ನು ಉಳಿಸಿದನು. ಆ ಕಾರಣವು ನಮ್ಮ ದೇಶವನ್ನು ಉಳಿಸಲು ಮತ್ತು ಅಮೇರಿಕಾವನ್ನು ಶ್ರೇಷ್ಠತೆಗೆ ಮರುಸ್ಥಾಪಿಸಲು, ನಾವು ಒಟ್ಟಾಗಿ ಆ ಮಿಷನ್ ನ್ನು ಪೂರೈಸಲಿದ್ದೇವೆ ಎಂದು ಹೇಳಿದರು.

78 ವರ್ಷ ವಯಸ್ಸಿನ ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಚುನಾಯಿತರಾದ ಅತ್ಯಂತ ಹಿರಿಯ ಅಧ್ಯಕ್ಷರಾಗಲಿದ್ದಾರೆ. ಅಧ್ಯಕ್ಷ ಜೋ ಬಿಡೆನ್ ಅವರು ಈ ಹಿಂದೆ 77 ನೇ ವಯಸ್ಸಿನಲ್ಲಿ ಚುನಾಯಿತರಾದ ಅತ್ಯಂತ ಹಳೆಯ ಅಧ್ಯಕ್ಷರಾಗಿದ್ದರು.

ಟ್ರಂಪ್ ಗೆ 2ನೇ ಬಾರಿ ಅಮೆರಿಕ ಅಧ್ಯಕ್ಷ ಪಟ್ಟ Read More