ಉತ್ತರ ಕೆರೊಲಿನಾದಲ್ಲಿ ವಿಮಾನ ಪತನ:7 ಮಂದಿ‌ ದುರ್ಮರಣ

ಕೆರೊಲಿನಾ: ಅಮೆರಿಕದ ಉತ್ತರ ಕರೊಲಿನಾದಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೆ ವಿಮಾನ ಅಪಘಾತಕ್ಕೀಡಾಗಿ ಏಳು ಮಂದಿ ಮೃತಪಟ್ಟಿದ್ದಾರೆ.

ಈ ಅಪಘಾತದಲ್ಲಿ ನಿವೃತ್ತ ಎನ್ ಎ ಎಸ್‌ ಸಿ ಎ ಆರ್ ಚಾಲಕ ಗ್ರೆಗ್ ಬಿಫಲ್, ಅವರ ಪತ್ನಿ ಮತ್ತು ಅವರ ಇಬ್ಬರು ಮಕ್ಕಳು ಕೂಡಾ ಮೃತಪಟ್ಟಿದ್ದಾರೆ.

ಸೆಸ್ನಾ C550 ವಿಮಾನವು ಬೆಳಗ್ಗೆ 10 ಗಂಟೆ ಸುಮಾರಿಗೆ ಸ್ಟೇಟ್ಸ್‌ವಿಲ್ಲೆ ಪ್ರಾದೇಶಿಕ ವಿಮಾನ ನಿಲ್ದಾಣದಿಂದ ಹೊರಟಿತ್ತು. ವಿಮಾನವು ಫ್ಲೋರಿಡಾಕ್ಕೆ ತೆರಳುತ್ತಿತ್ತು, ಆದರೆ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ, ಪೈಲಟ್ ವಿಮಾನ ನಿಲ್ದಾಣಕ್ಕೆ ಹಿಂದಿರುಗಿಸಲು ಪ್ರಯತ್ನಿಸಿದ್ದಾರೆ,ಆಗ ಅದು ಸ್ಪೋಟಗೊಂಡು‌ ಹೊತ್ತಿ ಉರಿದಿದೆ.

ಷಾರ್ಲೆಟ್‌ನಿಂದ ಉತ್ತರಕ್ಕೆ ಸುಮಾರು 72 ಕಿಲೋಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ತಕ್ಷಣ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ.

ಉತ್ತರ ಕೆರೊಲಿನಾದಲ್ಲಿ ವಿಮಾನ ಪತನ:7 ಮಂದಿ‌ ದುರ್ಮರಣ Read More