ಮೈಸೂರು: ಪಿರಂಗಿ ತಾಲೀಮು ಯಶಸ್ಸಿಗಾಗಿ ಸಿಎಆರ್ ಸಿಬ್ಬಂದಿ ಕೋಟೆ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ತಾಲೀಮು ಸಮಯದಲ್ಲಿ ಯಾವುದೇ ವಿಘ್ನಗಳು ನಡೆಯಬಾರದೆಂಬ ಕಾರಣಕ್ಕೆ ಮಾರಮ್ಮ ದೇವಿಗೆ ಹಾಲು ಮೊಸರು ಅಭಿಷೇಕ ನೆರವೇರಿಸಿ ಬೇವಿನ ಸೊಪ್ಪು ಇಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪ್ರತಿಭಾರಿ ತಾಲೀಮು ಆರಂಭಕ್ಕೆ ಮುನ್ನ ಕೋಟೆ ಮಾರಮ್ಮನಿಗೆ ಪೂಜೆ ಸಲ್ಲಿಸುವ ವಾಡಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಕೋಟೆ ಮಾರಮ್ಮನಿಗೆ ಪೂಜೆ ಅಭಿಷೇಕ ಸಲ್ಲಿಸಿ ತಾಯಿಯ ಆಶೀರ್ವಾದ ಪಡೆದ ನಂತರ ಕುಂಕುಮ,ಅರಿಶಿನ,ಹೂವು ಹಾಗೂ ಬೇವಿನ ಸೊಪ್ಪಿನ ಪ್ರಸಾದ ತೆಗೆದುಕೊಂಡು ಪಿರಂಗಿ ಗಾಡಿಗಳ ಮೇಲೆ ಇಟ್ಟು ಸಿಎಆರ್ ಸಿಬ್ಬಂದಿಗಳು ಪೂಜೆ ಸಲ್ಲಿಸುವುದು ವಾಡಿಕೆ.
ಶುಕ್ರವಾರ ಕೂಡಾ ತಾಲೀಮು ಪ್ರಾರಂಭಕ್ಕೆ ಮುನ್ನ ಮಾರಮ್ಮ ತಾಯಿಗೆ ಪೂಜೆ ಸಲ್ಲಿಸಿ, ವಸ್ತುಪ್ರದರ್ಶನದ ಆವರಣದಲ್ಲಿ ಗಜಪಡೆಗೆ ಎರಡನೇ ಹಂತದ ತಾಲೀಮು ನಡೆಯಲಿದೆ.
ಮಂಡ್ಯ,ಏ.3: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಾರಿಗೆ ಐರಾವತ ಬಸ್ ಡಿಕ್ಕಿ ಹೊಡೆದು ಅರಸು ಮನೆತನದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲ್ಲೂಕು ತೂಬಿನಕೆರೆ ಎಕ್ಸಿಟ್ ಬಳಿ ನಡೆದಿದೆ.
ಕಾರು ಬೆಂಗಳೂರಿಂದ ಮೈಸೂರು ಕಡೆಗೆ ಹೊರಟಿತ್ತು. ಈ ವೇಳೆ ಎಕ್ಸ್ ಪ್ರೆಸ್ ವೇ ಎಕ್ಸಿಟ್ ಆಗುವಾಗ ಕಾರು ಚಾಲಕನಿಗೆ ಗೊಂದಲ ಉಂಟಾಗಿದ್ದು, ಮತ್ತೆ ಕಾರನ್ನು ಎಕ್ಸ್ಪ್ರೆಸ್ ವೇಗೆ ತಿರುಗಿಸಿದ್ದಾನೆ. ಇದೇ ವೇಳೆ ಹಿಂದಿನಿಂದ ಕೆಎಸ್‌ಆರ್‌ಟಿಸಿ ಐರಾವತ ಬಸ್ ಬಂದಿದ್ದು, ಎದುರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಮೃತರು ಬೆಂಗಳೂರಿನ ಜೆಪಿ ನಗರದಲ್ಲಿ ವಾಸಿಸುತ್ತಿದ್ದರು.
ಮೂಲತಃ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ತುಂಗ ನಿವಾಸಿ ಸುವೇದಿನಿ ರಾಣಿ(50), ಅವರ ಪತಿ ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಮರೂರು ಗ್ರಾಮದ ಚಂದ್ರು(62),ಪಿರಿಯಾಪಟ್ಟಣ ತಾಲೂಕು ಬೇಲಾಳು ಗ್ರಾಮದ ಸತ್ಯಾನಂದ ರಾಜೇ ಅರಸ್ ಮತ್ತು ಅವರ ಪತ್ನಿ ನಿಶ್ಚಿತಾ ಮೃತಪಟ್ಟ ದುರ್ದೈವಿಗಳು.
ವಿಷಯ ತಿಳಿಯುತ್ತಿದ್ದಂತೆ ಮಂಡ್ಯ ಪೊಲೀಸ್ ಅಧಿಕಾತಿಗಳು ಮತ್ತು ಗ್ರಾಮಾಂತರ ಠಾಣೆ ಪೊಲೀಸರು ಧಾವಿಸಿ ಟ್ರಾಫೀಕ್ ಜಾಮ್ ಸರಿಪಡಿಸಿ ಮೃತ ದೇಹಗಳನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸಿದರು.
ಮೈಸೂರು: ವೈಯುಕ್ತಿಕ ಉಪಯೋಗಕ್ಕಾಗಿ ವ್ಯಕ್ತಿಯೊಬ್ಬರಿಂದ ಪಡೆದ ಕಾರನ್ನ ಹಿಂದಿರುಗಿಸದ ಮೈ ಟಾರ್ಪಾಲಿನ್ಸ್ ಮಾಲೀಕ ಪ್ರದೀಪ್ ಸಿಂಗ್ ವಿರುದ್ದ ದೇವರಾಜ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಪ್ರದೀಪ್ ಸಿಂಗ್ ವಿರುದ್ಧ ಬೆಂಗಳೂರಿನ ರಾಜಿಯಾ ಖಾನಂ ಎಂಬುವರು ಪ್ರಕರಣ ದಾಖಲಿಸಿದ್ದಾರೆ.
ಫಾರ್ಚುನರ್ ಕಾರನ್ನ ವೈಯುಕ್ತಿಕ ಕಾರಣಕ್ಕೆ ಪಡೆದಿದ್ದ ಪ್ರದೀಪ್ ಸಿಂಗ್ ನಂತರ ಸಂಪರ್ಕಕ್ಕೆ ಸಿಕ್ಕಿಲ್ಲವೆಂದು ಎಫ್.ಐ.ಆರ್.ನಲ್ಲಿ ತಿಳಿಸಲಾಗಿದೆ.
ರಾಜಿಯಾ ಖಾನಂ ಅವರು ಖಾಸಗಿ ಫೈನಾನ್ಸ್ ನಲ್ಲಿ 21 ಲಕ್ಷ ಸಾಲ ಪಡೆದು ಸೆಕೆಂಡ್ ಹ್ಯಾಂಡ್ ಫಾರ್ಚುನರ್ ಕಾರು ಖರೀದಿಸಿದ್ದರು.ಅವರ ಮೈದುನ ಕಾರನ್ನ ಬಳಸುತ್ತಿದ್ದರು.
2024 ನವೆಂಬರ್ ನಲ್ಲಿ ಪ್ರದೀಪ್ ಸಿಂಗ್ ತಮ್ಮ ವೈಯುಕ್ತಿಕ ಬಳಕೆಗೆ ಕಾರು ಪಡೆದಿದ್ದರು.ನಂತರ ಕಾರನ್ನ ಹಿಂದಿರುಗಿಸದೆ ಸಂಪರ್ಕಕ್ಕೆ ಸಿಕ್ಕಿಲ್ಲ.ಕಾರಿನಲ್ಲೇ ಒರಿಜಿನಲ್ ಡಾಕ್ಯುಮೆಂಟ್ಸ್ ಇಟ್ಟಿದ್ದರೆಂದು ಹೇಳಿಕೆ ನೀಡಿರುವ ರಾಜಿಯಾ ಖಾನಂ ಅವರು ಪ್ರದೀಪ್ ಸಿಂಗ್ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಕೊಳ್ಳೇಗಾಲ,ಮಾ.1: ಅತಿ ವೇಗವಾಗಿ ಬಂದ ಟಿಪ್ಪರ್ ಕಾರ್ ಗೆ ಅಪ್ಪಳಿಸಿದ ಪರಿಣಾಮ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದ ಐದು ಮಂದಿ ಮೃತಪಟ್ಟ ಘಟನೆ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಅಪಘಾತದಲ್ಲಿ ಮೂವರು ಯುವಕರು ಇಬ್ಬರು ಯುವತಿಯರು ಒಟ್ಟು ಐವರು ಸ್ಥಳದಲ್ಲೆ ಸಾವನ್ನಪ್ಪಿದ್ದು,ಈ ಘಟನೆ ಚಿಕ್ಕಿoದುವಾಡಿ ಸಮೀಪ ಇಂದು ಬೆಳಿಗ್ಗೆ ಸಂಭವಿಸಿದೆ
ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು ಹಲ್ಲೆಗೆರೆ ಗ್ರಾಮದ ಶ್ರೇಯಸ್, ಇದೇ ತಾಲೂಕಿನ ಲಕ್ಷ್ಮಿಗೌಡನದೊಡ್ಡಿಯ ನಿತಿನ್, ಮಂಡ್ಯದ ಶ್ರೀರಾಮನಗರ ನಿವಾಸಿ ಸುಹಾಸ್, ಮೈಸೂರಿನ ಆಲನಹಳ್ಳಿ ವಾಸಿ ಶ್ರೀ ಲಕ್ಷ್ಮಿ ಹಾಗೂ ಪಿರಿಯಾಪಟ್ಟಣ ತಾಲೂಕು ಶಾನುಭೋಗನ ಹಳ್ಳಿಯ ಲಿಖಿತ ಮೃತಪಟ್ಟ ದುರ್ದೈವಿಗಳು.
ಈ ನತದೃಷ್ಟರು ಸುಮಾರು 22 ರಿಂದ 23 ವಯಸ್ಸಿನ ಆಸುಪಾಸಿನವರು.
ಇಂದು ಬೆಳಿಗ್ಗೆ 9.30 ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಮೃತರೆಲ್ಲರೂ ಸ್ನೇಹಿತರು. ಸ್ವಿಫ್ಟ್ ಕಾರಿನಲ್ಲಿ ಇಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿದ್ದ ಮಹಾ ರಥೋತ್ಸವಕ್ಕೆ ತೆರಳುತ್ತಿದ್ದರು ಎಂದು ಗೊತ್ತಾಗಿದೆ.
ಹನೂರು ಕಡೆಯಿಂದ ಬರುತ್ತಿದ್ದ ಟಿಪ್ಪರ್ ಚಾಲಕ ಮುಂದೆ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಸ್ವಿಫ್ಟ್ ಕಾರ್ ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿ ರಸ್ತೆ ಬದಿಯ ಗದ್ದೆಗೆ ಉರುಳಿ ಬಿದ್ದಿದೆ. ಘಟನೆಯಿಂದ ಕಾರಿನಲ್ಲಿದ್ದ ಐವರು ಕಾರಿನೊಳಗೆ ಉಸಿರು ಚೆಲ್ಲಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತ ದೇಹಗಳನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ.
ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಮುಂದಿನ ಕ್ರಮದ ಬಗ್ಗೆ ಸೂಚಿಸಿದ್ದಾರೆ
ಆದರೆ ಕಾರಿನಲ್ಲಿದ್ದ ಇವರು ಒಟ್ಟಿಗೆ ಮೃತಪಟ್ಟಿರುವುದರಿಂದ ಮೃತರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇನ್ನು ಲಭ್ಯವಾಗಿಲ್ಲ. ಸ್ವಿಫ್ಟ್ ಕಾರಿನ ಸಂಖ್ಯೆ ಕೆ.ಎ11 ಆಗಿರುವುದರಿಂದ ಮಂಡ್ಯ ಜಿಲ್ಲೆಯವರಿರ ಬೇಕೆಂದು ಶಂಕಿಸಲಾಗಿದೆ.
ಕೊಳ್ಳೇಗಾಲ ಮಲೆ ಮಾದೇಶ್ವರ ಬೆಟ್ಟ ರಸ್ತೆಯನ್ನು ಕೆ ಸಿಫ್ ಯೋಜನೆಯಡಿ ಅಭಿವೃದ್ಧಿಪಡಿಸಿರುವುದರಿಂದ ವಾಹನ ಸವಾರರು ತಮ್ಮ ವಾಹನಗಳನ್ನು ಅತಿ ವೇಗವಾಗಿ ಚಲಾಯಿಸುವುದರಿಂದ ಆಗಿಂದಾಗ್ಗೆ ಈ ರಸ್ತೆಯಲ್ಲಿ ಭೀಕರ ಅಪಘಾತಗಳು ಸಂಭವಿಸುತ್ತಿರುವೆ.
ರಸ್ತೆ ಅಭಿವೃದ್ಧಿಪಡಿಸಿರುವ ಕೇಸಿಫ್ ಯೋಜನೆ ಅಧಿಕಾರಿಗಳು ರಸ್ತೆ ಅಭಿವೃದ್ಧಿ ವೇಳೆ ಈ ರಸ್ತೆಯನ್ನು ಅಲ್ಲಲ್ಲಿ ಸುಮಾರು 6 ರಿಂದ 8 ಅಡಿ ಎತ್ತರಕ್ಕೆ ಎತ್ತರಿಸಿದ್ದಾರೆ.
ಆದರೆ ರಸ್ತೆಗಳ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸಿಲ್ಲ .ಇದರಿಂದಾಗಿ ಅತಿ ವೇಗವಾಗಿ ಚಲಿಸುವ ಬಹುತೇಕ ವಾಹನಗಳು ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದು ಸಾವು,ನೋವು ಹೆಚ್ಚಾಗುತ್ತಿದೆ.
ಬೆಳಗಾವಿ: ಬೈಕ್ ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ತಂದೆ ಹಾಗೂ ಮಗಳು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದಿದೆ.
ಪತಿ, ಪತ್ನಿ ಹಾಗೂ ಮಗಳು ಬೈಕ್ ನಲ್ಲಿ ಸಂಬಂಧಿಕರ ಮದುವೆಗೆ ತೆರಳುತ್ತಿದ್ದರು. ಈ ವೇಳೆ ಅಥಣಿ ಬಳಿ ಹಿಂದಿನಿಂದ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ ಇದರಿಂದ ತಂದೆ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಹಾರಾಷ್ಟ್ರದ ಜತ್ತ ತಾಲೂಕಿನ ಮಂಡಿಗೇರಿ ನಿವಾಸಿಗಳಾದ ರಾಮು ಕರ್ಣಿ (49) ಮಗಳು ಜಾಹ್ನವಿ (11) ಮೃತಪಟ್ಟ ದುರ್ದೈವಿಗಳು.
ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.