ಜಗಳ ಬಿಡಿಸಿದ್ದಕ್ಕೆ ವ್ಯಕ್ತಿ ಮೇಲೆ ನಾಲ್ವರಿಂದ ಹಲ್ಲೆ: ನಾಲ್ವರ ವಿರುದ್ದ ಎಫ್ಐಆರ್

ಮೈಸೂರು: ಜಗಳ ಬಿಡಿಸಿದ್ದಕ್ಕೆ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಕೆ.ಆರ್.ಆಸ್ಪತ್ರೆ ಆವರಣದಲ್ಲಿ ವ್ಯಕ್ತಿ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡೆದಿದೆ.

ಸುರೇಶ್ ಹಲ್ಲೆಗೆ ಒಳಗಾಗಿದ್ದು‌ ಚಿಕಿತ್ಸೆ ಪಡೆದಿದ್ದಾರೆ.

ಘಟನೆಗೆ ಸಂಭಂಧಿಸಿದಂತೆ ದೇವರಾಜ ಪೊಲೀಸ್ ಠಾಣೆಯಲ್ಲಿ ಮಹದೇವಸ್ವಾಮಿ,ಸಾವಿತ್ರಿ,ಪುಟ್ಟಮ್ಮ,ರತ್ನಮ್ಮ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.

ಸುರೇಶ್ ಆಟೋ ಚಾಲಕರಾಗಿದ್ದು,ರವಿ ಎಂಬುವರ ಆಟೋ ಓಡಿಸುತ್ತಿದ್ದರು.

ರವಿ ಅವರ ವಿಜಯನಗರದ ಮನೆಯಲ್ಲಿ ಕೌಟುಂಬಿಕ ವಿಚಾರದಲ್ಲಿ ಗಲಾಟೆ ಆಗಿದೆ.ಪತ್ನಿ ನಾಗರತ್ನ ಎಂಬುವರ ಮೇಲೆ ಸಂಭಂಧಿಕರು ಹಲ್ಲೆ ನಡೆಸಿದ್ದಾರೆ.

ಈ ವೇಳೆ ಜಗಳ ಬಿಡಿಸಿ ಅರೆಪ್ರಜ್ಞಾವಸ್ತೆಯಲ್ಲಿದ್ದ ನಾಗರತ್ನ ರನ್ನ ಕೆ.ಆರ್.ಆಸ್ಪತ್ರೆಗೆ ಸುರೇಶ್ ಕರೆತಂದಿದ್ದಾರೆ.

ಅದೇ ಸಮಯದಲ್ಲಿ ಅಲ್ಲಿಗೆ ಬಂದ ರವಿ ಸಂಭಂಧಿಕರಾದ ಮಹದೇವಸ್ವಾಮಿ,ಸಾವಿತ್ರಿ,ಪುಟ್ಟಮ್ಮ ಹಾಗೂ ರತ್ನಮ್ಮ ಅವರು ನೀನು ಯಾರೋ ಜಗಳ ಬಿಡಿಸಲು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆ.ಆರ್.ಆಸ್ಪತ್ರೆ ಆವರಣದಲ್ಲೇ ಹಲ್ಲೆ ನಡೆಸಿದ್ದಾರೆ.

ಸುರೇಶ್ ತಲೆಗೆ ಬಲವಾದ ವಸ್ತುವಿನಿಂದ ಹಲ್ಲೆ ನಡೆಸಿದ್ದಾರೆ.ಗಾಯಗೊಂಡ ಸುರೇಶ್ ಗೂ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಹಲ್ಲೆ ನಡೆಸಿದ ನಾಲ್ಕು ಮಂದಿ ವಿರುದ್ದ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಗಳ ಬಿಡಿಸಿದ್ದಕ್ಕೆ ವ್ಯಕ್ತಿ ಮೇಲೆ ನಾಲ್ವರಿಂದ ಹಲ್ಲೆ: ನಾಲ್ವರ ವಿರುದ್ದ ಎಫ್ಐಆರ್ Read More

ಆಪರೇಷನ್ ಸಿಂಧೂರ ಬೆನ್ನಲ್ಲೇಗುಂಡಿನ ದಾಳಿ ಮಾಡಿದ ಪಾಕ್: 7 ಸಾವು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು 7 ಮಂದಿ ಮೃತಪಟ್ಟಿದ್ದಾರೆ.

ಎಂದು ಸೇನಾ ಮೂಲಗಳು ತಿಳಿಸಿವೆ.

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ತಾಣಗಳನ್ನು ಗುರಿಯಾಗಿರಿಸಿಕೊಂಡು ಭಾರತ ಆಪರೇಷನ್ ಸಿಂಧೂರ ನಡೆಸಿದ ಬೆನ್ನಲ್ಲೇ ಪಾಕಿಸ್ತಾನ ಎಲ್‌ಒಸಿಯಲ್ಲಿ ಶೆಲ್ ದಾಳಿ ನಡೆಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ

ಈ ವೇಳೆ ಏಳು ಮಂದಿ ಭಾರತೀಯ ನಾಗರಿಕರು ಮೃತಪಟ್ಟಿದ್ದು, ಶೆಲ್ ದಾಳಿಯಿಂದಾಗಿ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಆಪರೇಷನ್ ಸಿಂಧೂರ ಬೆನ್ನಲ್ಲೇಗುಂಡಿನ ದಾಳಿ ಮಾಡಿದ ಪಾಕ್: 7 ಸಾವು Read More

ದುಬೈನಲ್ಲಿ ಪಾಕಿಸ್ತಾನಿ ಪ್ರಜೆಯಿಂದ ದಾಳಿ: ಇಬ್ಬರು ತೆಲಂಗಾಣ ಯುವಕರು ಸಾವು

ದುಬೈ: ದುಬೈನ ಬೇಕರಿಯೊಂದರಲ್ಲಿ ಪಾಕಿಸ್ತಾನಿ ಪ್ರಜೆ ಧಾರ್ಮಿಕ ಘೋಷಣೆಗಳನ್ನು ಕೂಗಿ ದಾಳಿ ಮಾಡಿದ ಪರಿಣಾಮ ತೆಲಂಗಾಣದ ಇಬ್ಬರು ಸಾವನ್ನಪ್ಪಿದ್ದಾರೆ.

ಸಾವನ್ನಪ್ಪಿದವರನ್ನು ನಿರ್ಮಲ್​ ಜಿಲ್ಲೆಯ ಸೋನ ಗ್ರಾಮದ ಅಷ್ಟಪು ಪ್ರೇಮ್​ಸಾಗರ್​ (35), ಹಾಗೂ ನಿಜಾಮಾಬಾದ್​ನ ಶ್ರೀನಿವಾಸ್​ ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ‌ ಸಾಗರ್​ ಎಂಬಾತ‌ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರೇಮಸಾಗರ್​ ಕಳೆದ ಐದಾರು ವರ್ಷಗಳಿಂದ ಘಟನೆ‌ ನಡೆದ ಬೇಕರಿಯಲ್ಲಿ ಉದ್ಯೋಗಿಯಾಗಿದ್ದರು. ಎರಡು ವರ್ಷಗಳ ಹಿಂದೆ ಊರಿಗೆ ಬಂದು ಹೋಗಿದ್ದರಂತೆ.

ಪ್ರೇಮಸಾಗರನ ಪಾರ್ಥೀವ ಶರೀರವನ್ನು ಭಾರತಕ್ಕೆ ತರಲು ಸರ್ಕಾರ ಸಹಾಯ ಮಾಡಬೇಕು. ಹಾಗೂ ಪ್ರೇಮಸಾಗರ್​ ಅವರ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅವರಿಗೆ ನೆರವು ನೀಡಬೇಕು ಎಂದು ಅವರ ಚಿಕ್ಕಪ್ಪ
ಮನವಿ ಮಾಡಿದ್ದಾರೆ.

ಈ ಬಗ್ಗೆ ಕೇಂದ್ರ ಸಚಿವ ಕಿಶನ್​ ರೆಡ್ಡಿ ಅವರು
ದುಃಖ ವ್ಯಕ್ತಪಡಿಸಿದ್ದು, ಪಾರ್ಥೀವ ಶರೀರಗಳನ್ನು ಭಾರತಕ್ಕೆ ತರಲು ಸಹಾಯಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​. ಜೈಶಂಕರ್​ ಅವರೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿರುವ ಕಿಶನ್​ ರೆಡ್ಡಿ,ದುಬೈನಲ್ಲಿ ತೆಲಂಗಾಣದ ಇಬ್ಬರು ಯುವಕರು ಹತ್ಯೆಯಾಗಿರುವುದು ತೀವ್ರ ಆಘಾತ ತಂದಿದೆ. ಈ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್​ ಅವರ ಜೊತೆಗೆ ಮಾತನಾಡಿದ್ದೇನೆ. ಅವರು ದುಃಖಿತ ಕುಟುಂಬಗಳಿಗೆ ಸಂಪೂರ್ಣ ಬೆಂಬಲ ನೀಡುವ ಹಾಗೂ ಪಾರ್ಥೀವ ಶರೀರಗಳನ್ನು ತುರ್ತು ಭಾರತಕ್ಕೆ ತರಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ದುಬೈನಲ್ಲಿ ಪಾಕಿಸ್ತಾನಿ ಪ್ರಜೆಯಿಂದ ದಾಳಿ: ಇಬ್ಬರು ತೆಲಂಗಾಣ ಯುವಕರು ಸಾವು Read More