ವಿಮಾನ ಪತನದಲ್ಲಿ ಮೃತಪಟ್ಟ ಪ್ರಯಾಣಿಕರಿಗೆ ಮೈಸೂರಲ್ಲಿ ಸಂತಾಪ

ಮೈಸೂರು: ಏರ್ ಇಂಡಿಯಾ ವಿಮಾನ ಪತನದಲ್ಲಿ ಸಾವಗಿಡಾದ ಪ್ರಯಾಣಿಕರಿಗೆ ಮೈಸೂರಿನಲ್ಲಿ ಮೇಣದಬತ್ತಿ ಬೆಳಗಿಸಿ ಸಂತಾಪ ಸಲ್ಲಿಸಲಾಯಿತು.

ನಗರದ ಡಿ ದೇವರಾಜ ಅರಸು ರಸ್ತೆಯಲ್ಲಿ ಕರ್ನಾಟಕ ಹಿತರಕ್ಷಣ ವೇದಿಕೆ ವತಿಯಿಂದ‌
ಅಹಮದಾಬಾದ್‌ನಿಂದ ಲಂಡನ್‌ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ
ದುರಂತದಲ್ಲಿ ಸಾವಿಗಿಡಾದ ಪ್ರಯಾಣಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಕರ್ನಾಟಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್,
ಈ ದುರಂತ ತೀವ್ರ ಆಘಾತ ಹಾಗೂ ದಿಗ್ಭ್ರಮೆಯನ್ನು ಉಂಟು ಮಾಡಿದೆ ಎಂದು ಹೇಳಿದರು.

ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ, ಮೃತರ ಕುಟುಂಬಸ್ಥರಿಗೆ ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.

ಈ ವಿಮಾನ ಪತನದ ಬಗ್ಗೆ ಶೀಘ್ರ ತನಿಖೆಯಾಗಲಿ ಎಂದು ಅವರು ಹೇಳಿದರು.

ವಿನಯ್ ಅವರೊಂದಿಗೆ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಜಿ ರಾಘವೇಂದ್ರ,ಮಂಜುನಾಥ್,ಎಸ್ ಎನ್ ರಾಜೇಶ್, ರವಿಚಂದ್ರ, ನೀತು, ನಂಜುಂಡಿ, ಸಂತೋಷ್, ರಾಕೇಶ್, ಕಣ್ಣನ್, ರವಿ, ಉಮೇಶ್, ಸತೀಶ್, ಗುರುರಾಜ್ ಶೆಟ್ಟಿ, ಪ್ರಮೋದ್ ಗೌಡ ಮತ್ತಿತರರು ಮೇಣದ ಬತ್ತಿ ಬೆಳಗಿಸಿ ಸಂತಾಪ ಸಲ್ಲಿಸಿದರು.

ವಿಮಾನ ಪತನದಲ್ಲಿ ಮೃತಪಟ್ಟ ಪ್ರಯಾಣಿಕರಿಗೆ ಮೈಸೂರಲ್ಲಿ ಸಂತಾಪ Read More

ವಿಮಾನ ಹೈಜಾಕ್ ಮಾಡಲು ಬಂದು ಬಲಿಯಾದ ದಾಳಿಕೋರ

ಬೆಲೀಜ್: ಚಾಕು ತೋರಿಸಿ ವಿಮಾನವನ್ನು ಹೈಜಾಕ್ ಮಾಡಲು ಬಂದ ವ್ಯಕ್ತಿ ಪ್ರಯಾಣಿಕರೊಬ್ಬರು ಹಾರುಸಿದ ಗುಂಡಿಗೆ ಬಲಯಾದ ಘಟನೆ ಬೆಲೀಜ್​ನಲ್ಲಿ ನಡೆದಿದೆ.

ಅಮೆರಿಕದ ಪ್ರಜೆಯೊಬ್ಬ ಚಾಕು ತೋರಿಸಿ ವಿಮಾನ ಹೈಜಾಕ್ ಮಾಡಲು ಯತ್ನಿಸಿದ್ದ,ತಕ್ಷಣ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಪರವಾನಗಿ ಹೊಂದಿರುವ ಪಿಸ್ತೂಲಿನಿಂದ ಆರೋಪಿಗೆ ಗುಂಡು ಹಾರಿಸಿದ್ದಾರೆ.ಹಾಗಾಗಿ ಆತ ಅಲ್ಲೇ ಸಾವನ್ನಪ್ಪಿದ್ದಾನೆ.

ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ಸ್ಯಾನ್ ಪೆಡ್ರೊಗೆ ತೆರಳುತ್ತಿದ್ದ ವಿಮಾನ ಆಕಾಶದಲ್ಲಿ ಹಾರುತ್ತಿದ್ದಾಗ ವ್ಯಕ್ತಿ ಪ್ರಯಾಣಿಕರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ.

ಆಗ ಪ್ರಯಾಣಿಕರು ಆತಂಕದಿಂದ ಕಿರುಚಾಡತೊಡಗಿದ್ದಾರೆ.ತಕ್ಷಣ ಪ್ರಯಾಣಿಕರೊಬ್ಬರು ಎಚ್ಚತ್ತು ತಮ್ಮ ಬಳಿ ಇದ್ದ ಪಿಸ್ತೂಲಿನಿಂದ ದಾಳಿಕೋರನಿಗೆ‌ ಗುಂಡು ಹಾರಿಸಿದ್ದಾರೆ. ಆತ ಅಲ್ಲೇ ಮೃತಪಟ್ಟಿದ್ದಾನೆ.ಸಧ್ಯ ಬಚಾವಾದೆವಲ್ಲ ಎಂದು ಸಹ ಪ್ರಯಾಣಿಕರು ಗುಂಡು ಹಾರಿಸಿದಾತನಿಗೆ ಧನ್ಯವಾದ ಹೇಳಿದ್ದಾರೆ.

ಬೆಲೀಜ್ ಪೊಲೀಸ್ ಆಯುಕ್ತ ಚೆಸ್ಟರ್ ವಿಲಿಯಮ್ಸ್ ಅವರ ಪ್ರಕಾರ, ದಾಳಿಕೋರನನ್ನು ಅಮೆರಿಕದ ಪ್ರಜೆ ಅಕಿನ್ಯೆಲಾ ಸಾವಾ ಟೇಲರ್ ಎಂದು ಗುರುತಿಸಲಾಗಿದೆ ಎಂದು ಬೆಲೀಜ್ ಪೊಲೀಸ್ ಆಯುಕ್ತ ಚೆಸ್ಟರ್ ವಿಲಿಯಮ್ಸ್ ತಿಳಿಸಿದ್ದಾರೆ.ಜತೆಗೆ ಗುಂಡು ಹಾರಿಸಿದ ಪ್ರಯಾಣಿಕನನ್ನು ಹೊಗಳಿದ್ದಾರೆ.

ವಿಮಾನ ಹೈಜಾಕ್ ಮಾಡಲು ಬಂದು ಬಲಿಯಾದ ದಾಳಿಕೋರ Read More

ಅಮೆರಿಕದಲ್ಲಿ ವಿಮಾನ ಪತನ

ವಾಷಿಂಗ್ಟನ್: ಅಮೆರಿಕದಲ್ಲಿ ಮತ್ತೊಂದು ವಿಮಾನ ಅಪಘಾತ ಸಂಭವಿಸಿದ್ದು, ವಿಮಾನವೊಂದು ಜನವಸತಿ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಅಮೆರಿಕದ ಅಯೋವಾದಿಂದ ಮಿನ್ನೇಸೋಟಕ್ಕೆ ತೆರಳುತ್ತಿದ್ದ ಸಣ್ಣ ವಿಮಾನವೊಂದು ಮಿನ್ನಿಯಾಪೋಲಿಸ್ ಉಪನಗರದಲ್ಲಿರುವ ಕಟ್ಟಡಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಸ್ಪೋಟವಾಗಿದೆ.

ಇದರಿಂದಾಗಿ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ವಿಮಾನವು ಡಿಕ್ಕಿ ಹೊಡೆದ ಕಾರಣ ಕಟ್ಟಡಕ್ಕೆ ಬಹಳ ಹಾನಿಯಾಗಿದೆ. ಅದೃಷ್ಟವಶಾತ ಮನೆಯಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.

ಸಿಂಗಲ್ ಎಂಜಿನ್ ಹೊಂದಿರುವ ವಿಮಾನದಲ್ಲಿ ಎಷ್ಟು ಜನರಿದ್ದರು ಎಂಬುದು ಗೊತಗತಾಗಿಲ್ಲ ಆದರೆ ಇದ್ದವರು ಯಾರೂ ಬದುಕುಳಿದಿಲ್ಲ ಎಂದು ವರದಿಯಾಗಿದೆ.

ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (FAA) ಪ್ರಕಾರ, ವಿಮಾನವು ಡೆಸ್ ಮೊಯಿನ್ಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮತ್ತೊಂದು ಮಿನ್ನಿಯಾಪೋಲಿಸ್ ಉಪನಗರದಲ್ಲಿರುವ ಅನೋಕಾ ಕೌಂಟಿ-ಬ್ಲೇನ್ ವಿಮಾನ ನಿಲ್ದಾಣಕ್ಕೆ ತೆರಳಿತ್ತು. ಮಾರ್ಗಮಧ್ಯೆ ವಿಮಾನ ತಾಂತ್ರಿಕ ಸಮಸ್ಯೆಯಿಂದಾಗಿ ಜನವಸತಿ ಕಟ್ಟಡಕ್ಕೆ ಢಿಕ್ಕಿಯಾಗಿದೆ.

ಅಮೆರಿಕದಲ್ಲಿ ವಿಮಾನ ಪತನ Read More