ಡಾಕಾದಲ್ಲಿ ವಿಮಾನ ಅಪಘಾತ:20 ಮಂದಿ ದುರ್ಮ*ರಣ

ಢಾಕಾ: ಬಾಂಗ್ಲಾದೇಶ ವಾಯುಪಡೆಯ ತರಬೇತಿ ಜೆಟ್ ಅಪಘಾತಕ್ಕೀಡಾಗಿದ್ದು 20 ಮಂದಿ ಮೃತಪಟ್ಟಿದ್ದಾರೆ.

ಸೋಮವಾರ ರಾಜಧಾನಿ ಢಾಕಾದಲ್ಲಿ ಚೀನಾ ನಿರ್ಮಿತ F-7 BGI ವಿಮಾನ ಅಪಘಾತಕ್ಕೀಡಾಗಿದ್ದು 20 ಮಂದಿ ದುರ್ಮರಣ ಹೊಂದಿದ್ದಾರೆ.

ಸೋಮವಾರ ಮಧ್ಯಾಹ್ನ ಸುಮಾರು 1 ಗಂಟೆ 5 ನಿಮಿಷಕ್ಕೆ ವಿಮಾನ ಟೇಕ್ ಆಫ್ ಆಗಿದೆ,ಅದಾದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದೆ.

ವಿಮಾನವು ಮೈಲ್‌ಸ್ಟೋನ್ ಕಾಲೇಜಿನ ಕ್ಯಾಂಟೀನ್‌ನ ಛಾವಣಿಯ ಮೇಲೆ ಬಿದ್ದಿದೆ. ವಿಮಾನವು ಇದ್ದಕ್ಕಿದ್ದಂತೆ ದೊಡ್ಡ ಶಬ್ದದೊಂದಿಗೆ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಭಯಭೀತರಾಗಿ ಹೊರಗೆ ಓಡಿ ಬಂದಿದ್ದಾರೆ.

ಈ ಕಟ್ಟಡವನ್ನು ಪ್ಲೇಗ್ರೂಪ್ ತರಗತಿಗಳಿಗೆ ಬಳಸಲಾಗುತ್ತಿತ್ತು. ವಿಮಾನ ಪತನದಲ್ಲಿ 20 ಮಂದಿ ಸಾವನ್ನಪ್ಪಿದ್ದು 170 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಹಲವರ ಪರಿಸ್ಥಿತಿ ಗಂಭೀರವಾಗಿದೆ.

ಬಾಂಗ್ಲಾದೇಶ ರಾಜಧಾನಿಯಲ್ಲಿ ಅಪಘಾತಕ್ಕೀಡಾದ F-7 BGI ಚೀನಾದಲ್ಲಿ ತಯಾರಾದ ಬಹು-ಪಾತ್ರದ ಯುದ್ಧ ವಿಮಾನವಾಗಿದೆ. ಇದು ಬಾಂಗ್ಲಾದೇಶ ವಾಯುಪಡೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ F-7 (MiG-21 ನ ರೂಪಾಂತರ) ನ ಸುಧಾರಿತ ವಿಮಾನ ಇದಾಗಿದೆ.

ಡಾಕಾದಲ್ಲಿ ವಿಮಾನ ಅಪಘಾತ:20 ಮಂದಿ ದುರ್ಮ*ರಣ Read More

ಪವಿತ್ರ ಪಾಮ್ ಸಂಡೆ ದಿನ 20 ಜನಬಲಿ;ಉಕ್ರೇನ್‌ ಸುಮಿ ಮೇಲೆ ರಷ್ಯಾದ ಕ್ಷಿಪಣಿ ದಾಳಿ

ಉಕ್ರೇನ್: ಉಕ್ರೇನಿಯನ್ ನಗರದ ಸುಮಿ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ನಗರದ ಹಂಗಾಮಿ ಮೇಯರ್ ತಿಳಿಸಿದ್ದಾರೆ.

ಅದೂ ಪಾಮ್ ಸಂಡೆ ದಿನವೇ ಈ ದಾಳಿ ನಡೆದಿದೆ.

ಪಾಮ್ ಸಂಡೆ ಆಚರಿಸಲು ಸ್ಥಳೀಯರು ಒಟ್ಟಿಗೆ ಸೇರುತ್ತಿದ್ದಾಗ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ನಗರದ ಹೃದಯಭಾಗಕ್ಕೆ ಅಪ್ಪಳಿಸಿವೆ.

ಈ ಪವಿತ್ರ ಪಾಮ್ ಸಂಡೆಯಂದು, ನಮ್ಮ ಸಮುದಾಯವು ಭೀಕರ ದುರಂತವನ್ನು ಅನುಭವಿಸಿದೆ ಎಂದು ಆರ್ಟೆಮ್ ಕೊಬ್ಜಾರ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಇಂಧನ ಮೂಲಸೌಕರ್ಯದ ಮೇಲಿನ ದಾಳಿಯನ್ನು ನಿಲ್ಲಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಿಕೊಂಡ ತಾತ್ಕಾಲಿಕ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ರಷ್ಯಾ ಮತ್ತು ಉಕ್ರೇನ್‌ನ ಉನ್ನತ ರಾಜತಾಂತ್ರಿಕರು ಪರಸ್ಪರ ಆರೋಪ ಮಾಡಿಕೊಂಡ ಒಂದು ದಿನದ ಬಳಿಕ ಈ ದಾಳಿ ನಡೆದಿದೆ.

ಮೂರು ವರ್ಷಗಳ ಯುದ್ಧವನ್ನು ಕೊನೆಗೊಳಿಸಲು ಮಾತುಕತೆಗಳಲ್ಲಿನ ವಿಫಲತೆಯನ್ನು ಇದು ಎತ್ತಿ ತೋರಿಸಿದೆ.

ಶನಿವಾರ ಮುಂಜಾನೆ ಉಕ್ರೇನ್‌ನ ಕೀವ್‌ನಲ್ಲಿರುವ ಭಾರತೀಯ ಔಷಧ ಕಂಪನಿಯ ಗೋದಾಮಿನ ಮೇಲೂ ರಷ್ಯಾ ಕ್ಷಿಪಣಿ ದಾಳಿ ನಡೆಸಿತ್ತು.

ಭಾರತವನ್ನು ತಮ್ಮ ಆಪ್ತಮಿತ್ರ ಎಂದು ಹೇಳಿಕೊಳ್ಳುತ್ತಾ, ಉಕ್ರೇನ್‌ನಲ್ಲಿರುವ ಭಾರತೀಯ ವ್ಯವಹಾರಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂದು ಉಕ್ರೇನ್ ಆರೋಪಿಸಿದೆ.

ನಾಶವಾದ ಗೋದಾಮು ಉಕ್ರೇನ್‌ನ ಅತಿದೊಡ್ಡ ಔಷಧ ಕಂಪನಿಗಳಲ್ಲಿ ಒಂದಾದ ಕುಸುಮ್ ಎಂಬ ಔಷಧ ಕಂಪನಿಗೆ ಸೇರಿದ್ದು, ಕುಸುಮ್ ಹೆಲ್ತ್‌ಕೇರ್ ಮಾನವೀಯ ಉದ್ದೇಶಗಳಿಗಾಗಿ ಬಳಸಲಾಗುವ ಅಗತ್ಯ ವೈದ್ಯಕೀಯ ಸರಬರಾಜುಗಳನ್ನು ಸಂಗ್ರಹಿಸುತ್ತಿತ್ತು. ಭಾರತೀಯ ಉದ್ಯಮಿ ರಾಜೀವ್ ಗುಪ್ತಾ ಈ ಕಂಪನಿಯ ಮಾಲೀಕರಾಗಿದ್ದಾರೆ.

ಪವಿತ್ರ ಪಾಮ್ ಸಂಡೆ ದಿನ 20 ಜನಬಲಿ;ಉಕ್ರೇನ್‌ ಸುಮಿ ಮೇಲೆ ರಷ್ಯಾದ ಕ್ಷಿಪಣಿ ದಾಳಿ Read More