ಮೈಸೂರು: ಕರ್ನಾಟಕ ಸೇನಾ ಪಡೆ ವತಿಯಿಂದ ಭಾರತೀಯ ಯೋಧರು ಪಾಕಿಸ್ತಾನದ ಭಯೋತ್ಪಾದಕರ ಹತ್ಯೆ ಮಾಡಿದ್ದನ್ನು ಸ್ವಾಗತಿಸಿ ಸರಸ್ವತಿಪುರಂ ಪೋಲಿಸ್ ಠಾಣೆ ಸಿಬ್ಬಂದಿಗೆ ಸಿಹಿ ವಿತರಿಸಲಾಯಿತು.
ಯೋಧರು ದೇಶದ ಹೊರಗೆ ರಕ್ಷಣೆ ನೀಡಿದರೆ, ಪೋಲಿಸರು ದೇಶದ ಒಳಗೆ ರಕ್ಷಣೆ ನೀಡುವರು, ಆಪರೇಷನ್ ಸಿಂಧೂರ ಯಶಸ್ವಿಯಾದ ಹಿನ್ನಲೆಯಲ್ಲಿ ಪೋಲಿಸ ರೊಂದಿಗೆ ಸಂಭ್ರಮಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸರಸ್ವತಿ ಪುರಂ ಪೋಲಿಸ್ ಠಾಣೆ ಆರಕ್ಷಕ ನಿರೀಕ್ಷಕ ಪುರುಷೋತ್ತಮ, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಭಾಗ್ಯಮ್ಮ, ವರಕೂಡು ಕೃಷ್ಣೇಗೌಡ, ಸಿಂದುವಳ್ಳಿ ಶಿವಕುಮಾರ್, ಹನುಮಂತಯ್ಯ, ಪ್ರಭುಶಂಕರ್, ನೇಹಾ ,ರಘು ಅರಸ್, ಬಸವರಾಜು, ಅಂಬಳೆ ಶಿವಣ್ಣ, ಪ್ರಭಾಕರ್, ಸುಬ್ಬೇಗೌಡ ಹಾಗೂ ಪೋಲೀಸ್ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು.