ಫ್ಲಾರಿಡಾ (ಅಮೆರಿಕ): ಕಳೆದ ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ನೋರ್ ಅವರು ಮಾರ್ಚ್ 19ರಂದು ಭೂಮಿಗೆ ವಾಪಸಾಗುವ ಸಾಧ್ಯತೆಯಿದೆ.
10 ಮಿಷನ್ ಅನ್ನು ಶುಕ್ರವಾರ ಯಶಸ್ವಿಯಾಗಿ ಉಡಾವಣ ಮಾಡಲಾಯಿತು. ‘ಕ್ರೂ ಡ್ರಾಗನ್’ ಹೆಸರಿನ ಗಗನನೌಕೆಯನ್ನು ಹೊತ್ತುಕೊಂಡ ಸ್ಪೇಸ್‌ಎಕ್ಸ್‌ನ ‘ಫಾಲ್ಕನ್ 9’ ರಾಕೆಟ್ ಇಲ್ಲಿನ ಕೆನಡಿ ಸ್ಪೇಸ್ ಸೆಂಟರ್‌ನಿಂದ ಸ್ಥಳೀಯ ಕಾಲಮಾನ ಶುಕ್ರವಾರ ರಾತ್ರಿ 7.03ಕ್ಕೆ ನಭಕ್ಕೆ ಚಿಮ್ಮಿತು.
ಈ ಗಗನನೌಕೆಯಲ್ಲಿ ನಾಲ್ವರು ಗಗನಯಾನಿಗಳು ಐಎಸ್‌ಎಸ್‌ಗೆ ಪ್ರಯಾಣಿಸಿದ್ದಾರೆ.
ಗಗನನೌಕೆಯು ಮರಳುವಾಗ ಸುನಿತಾ ಮತ್ತು ವಿಲ್ನೋರ್ ಅಲ್ಲದೆ, ಐಎಸ್‌ಎಸ್‌ನಲ್ಲಿರುವ ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೊರ್ಬನೊವ್ ಅವರನ್ನೂ ಕರೆತರಲಿದೆ.
ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕಳೆದ ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಮೂಲಕ ಕೇವಲ ಎಂಟು ದಿನಗಳಿಗಾಗಿ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿದ್ದರು. ಆದರೆ ಸ್ಟಾರ್‌ಲೈನರ್‌ನಲ್ಲಿನ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಇನ್ನೂ ಹಿಂತಿರುಗಲು ಸಾಧ್ಯವಾಗಲಿಲ್ಲ.
ಎಲ್ಲವೂ ಅಂದ್ಕೊಂಡಂತೆ ನಡೆದರೆ ಸುನಿತಾ ವಿಲಿಯಮ್ಸ್, ವಿಲ್ಮೋರ್ ಮಾರ್ಚ್ನಲ್ಲೇ ಭೂಮಿ ಮೇಲೆ ಇರುತ್ತಾರೆ.