ಮೈಸೂರು: ಸಾವರ್ಕರ್ ಪ್ರತಿಷ್ಠಾನ ಮೈಸೂರು ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ರಾಜ್ಯ ಮಟ್ಟದ ಕಾರ್ಯಗಾರವನ್ನು ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಸಮರ್ಥ ಶಿಕ್ಷಕ – ರಾಷ್ಟ್ರ ರಕ್ಷಕ ಎಂಬ ಧ್ಯೇಯವನ್ನಿಟ್ಟುಕೊಂಡು ನಡೆದ ಕಾರ್ಯಾಗಾರವನ್ನು
ಖ್ಯಾತ ಲೇಖಕರು, ವಾಗ್ಮಿಗಳು ಹಾಗು ಸಂಶೋಧಕರಾದ ಡಾ. ಜಿ.ಬಿ. ಹರೀಶ ಹಾಗು ಬೆಂಗಳೂರಿನ ಖ್ಯಾತ ಮಾನವ ಕೌಶಲ್ಯ ತರಬೇತಿ ತಜ್ಞ ಬಿ.ಪಿ. ಉದಯಚಂದ್ರ ಅವರು ಎರಡು ಅವಧಿಗಳಲ್ಲಿ ನಡೆಸಿಕೊಟ್ಟರು.

ಶಿಕ್ಷಕರು ಕೇವಲ ತರಗತಿಗಳ ಮಟ್ಟದಲ್ಲಿ ಅಲ್ಲದೆ, ಸಮಾಜ ಮತ್ತು ರಾಷ್ಟ್ರಪರ ಚಿಂತನೆಯ ನಾಯಕರಾಗಿ ರೂಪಿಸುವ ಉದ್ದೇಶ ಹೊಂದಿದ್ದ ಕಾರ್ಯಾಗಾರದಲ್ಲಿ ಮೈಸೂರು, ಬೆಂಗಳೂರು, ಚಾಮರಾಜನಗರ , ಹಾಸನ , ಕೊಡಗು, ಬೆಳಗಾವಿ, ಮಂಡ್ಯ ಜಿಲ್ಲೆಗಳಿಂದ 225ಕ್ಕೂ ಹೆಚ್ಚಿನ ಶಿಕ್ಷಕರು ಪಾಲ್ಗೊಂಡಿದ್ದರು,
ಸಾವರ್ಕರ್ ಕಲ್ಪನೆಯಲ್ಲಿ ಭಾರತೀಯ ಶಿಕ್ಷಣ, ಪಠ್ಯಗಳಲ್ಲಿ ಸಾವರ್ಕರ್, ಮತ್ತು ಶಿಕ್ಷಕರು ಎದುರಿಸುವ ಸವಾಲುಗಳು ಹಾಗೂ ಅದನ್ನು ಮೀರಿ ಕೆಲಸ ಮಾಡಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಾರ್ಗಗಳ ಕುರಿತು ಕಾರ್ಯಾಗಾರದಲ್ಲಿ ಚರ್ಚೆಗಳು ನಡೆದವು ಜತೆಗೆ ವಿಚಾರಗಳು ಮಂಡನೆಯಾದವು.
ಕಾರ್ಯಕ್ರಮದಲ್ಲಿ ಡಾ. ಜಿ.ಬಿ. ಹರೀಶ, ಬಿ.ಪಿ. ಉದಯಚಂದ್ರ, ಆದಿತ್ಯ ಅಧಿಕಾರಿ ಆಸ್ಪತ್ರೆಯ ಡಾ. ಚಂದ್ರಶೇಖರ್, ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಯಶಸ್ವಿನಿ.ಎಸ್, ಕಾರ್ಯದರ್ಶಿ ರಾಕೇಶ್ ಭಟ್,
ಪ್ರತಿಷ್ಠಾನದ ಸಹಕಾರ್ಯದರ್ಶಿ ಶಿವಕುಮಾರ್ ಚಿಕ್ಕಕಾನ್ಯ, ಮುಖಂಡರಾದ ಶಿವು ಪಟೇಲ್, ವಿಶಾಖ, ಮಹೇಶ್ ಕುಮಾರ್, ಸಂತೋಷ್, ರಾಘವೇಂದ್ರ ಮುಂತಾದವರು ಪಾಲ್ಗೊಂಡಿದ್ದರು.

