ಮೈಸೂರು: ದೇವರ ಶ್ಲೋಕ ಸಂಸ್ಕೃತ ಮತ್ತು ಸ್ತೋತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿರುವ ಶ್ರೀ ಭಾರತಿ ತೀರ್ಥ ಸ್ವಾಮೀಜಿಯವರು ಶೃಂಗೇರಿ ಮಠವನ್ನು ಒಂದು ಸುಂದರ ತಾಣವಾಗಿ ರೂಪಿಸಿದ್ದಾರೆ ಎಂದು ಶಾಸಕ ಟಿ.ಎಸ್ ಶ್ರೀವತ್ಸ ಬಣ್ಣಿಸಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾರ ಸ್ವರ್ಣ ಮಹೋತ್ಸವದ ಅಂಗವಾಗಿ ಅಗ್ರಹಾರದಲ್ಲಿ ಭಕ್ತಾದಿಗಳಿಗೆ ಏರ್ಪಡಿಸಿದ್ದ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸಂಸ್ಕೃತ ಮತ್ತು ಶ್ಲೋಕ ಹೇಳಿ ಕೊಡುವ ಮೂಲಕ ಶೃಂಗೇರಿ ಮಠವನ್ನು ಸುಂದರ ತಾಣವಾಗಿ ಪರಿವರ್ತನೆ ಮಾಡಿದ್ದಾರೆ ಈ ಕ್ಷೇತ್ರವು ದೇಶಕ್ಕೆ ಮಾದರಿಯಾಗಿದೆ,ಇದು ರಾಜಕೀಯತರ ಕ್ಷೇತ್ರವಾಗಿದೆ ಎಂದು ಹೇಳಿದರು.
ನಕ್ಸಲಿಯರ ಹಾವಳಿ ತೀವ್ರವಾಗಿದ್ದಾಗ ಬೇಸತ್ತ ಜನರಿಗೆ ದೇವರ ನಾಮ ಹೇಳಿಕೊಡುವ ಮೂಲಕ ನೆಮ್ಮದಿ ತಂದು ಕೊಟ್ಟರು, ಜೊತೆಗೆ ನಕ್ಸಲರ ಹಾವಳಿ ಜನರ ಮೇಲೆ ಆಗದಂತೆ ಅವರ ಮೇಲೆ ಜಗದ್ಗುರುಗಳು ಪ್ರಭಾವ ಬೀರಿದ್ದರು ಎಂದು ತಿಳಿಸಿದರು.
ಸಮಾಜದಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಾ ಸಮಾಜದ ಚಿಂತನೆಗಾಗಿಯೇ ಇರುವ ಈ ಶೃಂಗೇರಿ ಕ್ಷೇತ್ರ ಸುತ್ತಮುತ್ತಲಿನ ಪರಿಸರವು ಚೆನ್ನಾಗಿರುವಂತೆ ಮಾಡಿದ್ದಾರೆ,ಶೃಂಗೇರಿ ಎಂಬ ಶಬ್ದ ಕೇಳಿದ ಕೂಡಲೆ ಎಲ್ಲರಲ್ಲೂ ಶ್ರದ್ದೆ, ಗೌರವ ಎದ್ದು ಕಾಣುತ್ತದೆ ಎಂದು ಶ್ರೀ ವತ್ಸ ಬಣ್ಣಿಸಿದರು.

ಇಂತಹ ಉತ್ತಮ ಕಾರ್ಯ ಹಮ್ಮಿಕೊಂಡ ಬ್ರಾಹ್ಮಣ ಸಭಾದ ಎಲ್ಲರಿಗೂ ಮತ್ತು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಶಾಸಕರು ತಿಳಿಸಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್,
ಶಂಕರ ಮಠದ ಧರ್ಮಾಧಿಕಾರಿ ರಾಮಚಂದ್ರ ರಾಯರು, ಶಂಕರ್ ಮಠದ ವ್ಯವಸ್ಥಾಪಕ ಶೇಷಾದ್ರಿ ಭಟ್,ಕಲ್ಪನಾ ರಾಮಚಂದ್ರ, ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ಶಂಕರ ಮಠದ ಸೇವಾ ಕತೃಗಳಾದ ಎಸ್ ರಂಗನಾಥ ,ಹರೀಶ್, ಎಂ ಆರ್ ಬಾಲಕೃಷ್ಣ, ರಾಮಕುಮಾರ್, ನಾಗಭೂಷಣ್, ಬಾಬಣ್ಣ, ಸುಚಿಂದ್ರ ,ಚಕ್ರಪಾಣಿ, ನಾಗಶ್ರೀ, ಜ್ಯೋತಿ, ಮೀನಾಕ್ಷಿ, ಸಹನ,ಪಂತ್ತು ಮತ್ತಿತರ ಭಕ್ತಾದಿಗಳು ಹಾಜರಿದ್ದರು.