ಮೈಸೂರು: ಶೈವಾಗಮ ರೀತ್ಯಾ ಅರ್ಚಕರ ಪೂಜಾ ತರಬೇತಿ ಹಾಗೂ ಪಂಚಾಂಗ ಪರಿಚಯ ದೀಕ್ಷಾ ಉಪನಯನ ಶಿಬಿರದ ಸಮಾರೋಪ ಸಮಾರಂಭ ಯಶಸ್ವಿಯಾಗಿ ನೆರವೇರಿತು.
ಮೈಸೂರಿನ ಕುವೆಂಪು ನಗರದಲ್ಲಿರುವ
ಕರ್ನಾಟಕ ರಾಜ್ಯ ಶಿವಾರ್ಚಕರ ಸಂಘ ಹಮ್ಮಿಕೊಂಡಿದ್ದ ಶೈವಾಗಮ ರೀತ್ಯಾ ಅರ್ಚಕರ ಪೂಜಾ ತರಬೇತಿ ಹಾಗೂ ಪಂಚಾಂಗ ಪರಿಚಯ ದೀಕ್ಷಾ ಉಪನಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಕ್ಷಿಣ ಮೂರ್ತಿ, ಶಿವ್ವಾದ್ವೈತ ಪ್ರವರ್ತಕರಾದ ಶ್ರೀಕಂಠ ಶಿವಾಚಾರ್ಯ ಗುರುಗಳ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.
ಪುಷ್ಪ ನಮನ ಸಲ್ಲಿಸುವ ಮೂಲಕ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ ಎಸ್ ಶ್ರೀವತ್ಸ ಅವರು ಮೆರವಣಿಗೆಗೆ ಚಾಲನೆ ನೀಡಿದರು.

ಈ ಶಿಬಿರದಲ್ಲಿ ಶೈವಾಗಮ ರೀತ್ಯಾ ಅರ್ಚಕರ ಪೂಜಾ ತರಬೇತಿ ಹಾಗೂ ಪಂಚಾಂಗ ಪರಿಚಯ ದೀಕ್ಷಾ, ಉಪನಯನ ಮಾಡಲಾಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಅಂಬಳೆ ಶಿವಣ್ಣ,ಅಧ್ಯಕ್ಷ ಪ್ರೊ. ಎಂ ಮಲ್ಲಣ್ಣ, ಉಪಾಧ್ಯಕ್ಷ ಕುಮಾರಸ್ವಾಮಿ, ಕಾರ್ಯದರ್ಶಿ ಟಿ ಎನ್ ನಾಗೇಂದ್ರ, ಜಿ ಡಿ ಮಹಾದೇವಸ್ವಾಮಿ, ಕೋಶಾಧ್ಯಕ್ಷ ವಿ.ಸಿ ಗಿರೀಶ್ ಕುಮಾರ್, ನಿಲಯ ಪಾಲಕರಾದ ತಿಲಕ್ ದೇವಿತಂದ್ರೆ, ಮನುಕುಮಾರ್, ನಿರ್ದೇಶಕರಾದ ಸಚಿನ್, ಮಂಜು ಡಿ, ಬಾಬು, ವೀರಣ್ಣ , ಬಿ.ಎಂ ಮಹದೇವಸ್ವಾಮಿ, ಎಂ.ಪಿ ಶಿವಶಂಕರಪ್ಪ, ಮಲ್ಲಣ್ಣ, ಗುರುದೇವ್, ಶಂಕರ್, ಕೆ ಆರ್ ಸ್ವಾಮಿ ಹಾಗೂ ಮಕ್ಕಳು ಪಾಲ್ಗೊಂಡಿದ್ದರು.