ಮೈಸೂರು: ಮಾಗಡಿಯ ಹುಲಿಯೂರು ದುರ್ಗದ ಕುಣಿಗಲ್ ತಾಲೂಕಿನಲ್ಲಿ ಸಮಾಜ ಸೇವಕರಾದ ಕೆ.ಜಿ ಕೃಷ್ಣ ಅವರು ಶ್ರೀ ಜೈ ಕೃಷ್ಣ ಪ್ಯಾಲೇಸ್ ಕನ್ವೆನ್ಷನ್ ಹಾಲ್ ನಿರ್ಮಿಸಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಆರ್ ವಿ ವೈ ಪ್ರಾಪರ್ಟೀಸ್ ಮಾಲೀಕರಾದ ರಮೇಶ ರಾಮಪ್ಪ ಹಾಗೂ ಮರಟಿ ಕ್ಯಾತನಹಳ್ಳಿ ಮಂಜುನಾಥ್ ಶ್ರೀ ಜೈ ಕೃಷ್ಣ ಪ್ಯಾಲೇಸ್ ಕನ್ವೆನ್ಷನ್ ಹಾಲ್ ಗೆ
ಭೇಟಿ ನೀಡಿ ವಿದ್ಯಾ ಗಣಪತಿ ವಿಗ್ರಹ ನೀಡಿ ಕೆ.ಜಿ ಕೃಷ್ಣ ಅವರಿಗೆ ಶುಭ ಹಾರೈಸಿದರು.
ಈ ವೇಳೆ ನಜರ್ ಬಾದ್ ನಟರಾಜ್ ಮಾತನಾಡಿ, ಆತ್ಮೀಯರಾದ ಕೃಷ್ಣ ಅವರು ನೂತನವಾಗಿ ಪ್ರಾರಂಭಿಸಿರುವ ಈ ಕನ್ವೆನ್ಷನ್ ಹಾಲ್ ಸಾರ್ವಜನಿಕರ ಉಪಯೋಗಕ್ಕೆ ಬಳಕೆಯಾಗಲಿ ಸಭೆ ಸಮಾರಂಭಗಳು ಯಾವುದೇ ವಿಘ್ನವಿಲ್ಲದೆ ವಿಘ್ನೇಶ್ವರನ ಆಶೀರ್ವಾದದಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.