ಬೆಂಗಳೂರು: ಅಪ್ರಾಪ್ತೆ ಮತ್ತು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರಿನ ಯೋಗ ಗುರುವನ್ನು ಪೋಕ್ಸೊ ಕಾಯ್ದೆ ಅಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಯೋಗ ತರಬೇತಿ ಮತ್ತು ಸ್ಪರ್ಧೆ ನಿಯೋಜನೆಗಳ ನೆಪದಲ್ಲಿ ಅಪ್ರಾಪ್ತೆಗೆ ಆರೋಪಿ ನಿರಂಜನ್ ಮೂರ್ತಿ ಆಮಿಶ ಒಡ್ಡಿ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದನೆಂದು ಆರೋಪಿಸಲಾಗಿದೆ.
ಹಲವಾರು ಮಹಿಳೆಯರ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ರಾಜರಾಜೇಶ್ವರಿ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಯೋಗಗುರು ಕರ್ನಾಟಕ ಯೋಗಾಸನ ಕ್ರೀಡಾ ಸಂಘದ ಕಾರ್ಯದರ್ಶಿಯೂ ಆಗಿದ್ದಾನೆಂದು ಗೊತ್ತಾಗಿದೆ.
ಮೂರ್ತಿ ಯೋಗ ಸಮುದಾಯದೊಳಗಿನ ತನ್ನ ಪ್ರಭಾವವನ್ನು ದುರುಪಯೋಗ ಪಡಿಸಿಕೊಂಡು,ಮಹಿಳೆಯರು,ಯುವತಿಯರಿಗೆ ಪದಕಗಳು ಮತ್ತು ವೃತ್ತಿ ಪ್ರಗತಿಯನ್ನು ಕೊಡಿಸುವುದಾಗಿ ಭರವಸೆ ನೀಡಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತೆ 2019 ರಿಂದ ನಿರಂಜನ ಮೂರ್ತಿ ಬಳಿ ಯೋಗ ಕಲಿತು 2021 ರಲ್ಲಿ ಅವರು ಆಯೋಜಿಸಿದ್ದ ಯೋಗ ಸ್ಪರ್ಧೆಗಳಿಗೆ ಹಾಜರಾಗಲು ಪ್ರಾರಂಭಿಸಿದ್ದಳು.
2023 ರಲ್ಲಿ,ಅಪ್ರಾಪ್ತೆ ಮೂರ್ತಿಯೊಂದಿಗೆ ಸ್ಪರ್ಧೆಗಾಗಿ ಥೈಲ್ಯಾಂಡ್ಗೆ ಹೋಗಿದ್ದಳು, ಅಲ್ಲೂ ಕೂಡಾ ಆರೋಪಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದನೆಂದು ಆರೋಪಿಸಲಾಗಿದೆ.
2024 ರಲ್ಲಿ ಆಕೆ ಆರ್.ಆರ್. ನಗರದಲ್ಲಿರುವ ಮೂರ್ತಿಯವರ ಸನ್ಶೈನ್ ಸಂಸ್ಥೆಗೆ ಮತ್ತೆ ಸೇರಿದ್ದಳು,ಆದರೆ ಆತ ಅಲ್ಲೂ ನಿರಂತರ ಕಿರುಕುಳ ನೀಡಿದ್ದಾನೆ.
ಆಗಸ್ಟ್ 2025 ರಲ್ಲಿ, ಮೂರ್ತಿ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಪದಕ ಮತ್ತು ಸ್ಥಾನ ನೀಡುವ ಭರವಸೆ ನೀಡಿ ದೈಹಿಕವಾಗಿ ಆಕೆಯನ್ನು ಬಳಸಿಕೊಳ್ಳಲು ಯತ್ನಿಸಿದ್ದಾನೆ ಆಗಸ್ಟ್ 22 ರಂದು ಮತ್ತೆ ಅಪ್ರಾಪ್ತೆಯೊಂದಿಗೆ ಮತ್ತೆ ದೈಹಿಕ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಕೊನೆಗೆ ಆಗಸ್ಟ್ 30 ರಂದು ರಾತ್ರಿ 11 ಗಂಟೆಗೆ ದೂರು ದಾಖಲಿಸಿದ್ದಾರೆ,ಈಗ ನಿರಂಜನ ಮೂರ್ತಿಯ ವಿಚಾರಣೆ ಮುಂದುವರಿದಿದೆ.