ಮೈಸೂರು: ಉಪ ಪೊಲೀಸ್ ಆಯುಕ್ತರಾದ ಬಿಂದುಮಣಿ ಮತ್ತು ಸುಂದರ್ ರಾಜ್ ಅವರ ನೇತೃತ್ವದಲ್ಲಿ ರೌಡಿ ನಿಗ್ರಹ ದಳ ತಂಡ ರೌಡಿ ಪರೇಡ್ ನಡೆಸಿದರು
ಕೃಷ್ಣರಾಜ ಉಪವಿಭಾಗದ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಗಳನ್ನು ವಿದ್ಯಾರಣ್ಯಪುರಂ ಠಾಣೆಗೆ ಕರೆಸಿ ರೌಡಿ ಪರೇಡ್ ನಡೆಸಲಾಯಿತು.
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು, ಸಾರ್ವಜನಿಕರಲ್ಲಿ ಹೆದರಿಕೆ ಹುಟ್ಟಿಸುವಂತ ಯಾವುದೇ ಕೆಲಸಗಳನ್ನು ಮಾಡಿದರೆ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾನೂನುಬಾಹಿರ ಪೋಸ್ಟ್ ಹಾಗೂ ರೀಲ್ಸ್ ಗಳನ್ನು ಹಾಕಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಡಿಸಿಪಿ ಗಳು ರೌಡಿಗಳಿಗೆ ಎಚ್ಚರಿಕೆ ನೀಡಿದರು.