ಮೈಸೂರು: ಜಿಲ್ಲೆಯ ನಂಜನಗೂಡು ಪಟ್ಟಣದ ಶಂಕರಪುರ ಬಡಾವಣೆಯ ಮುಖ್ಯರಸ್ತೆಯಲ್ಲೇ ಯುಜಿಡಿ ಕೊಳಕು ನೀರು ರಸ್ತೆಯನ್ನು ರಾಡಿ ಮಾಡಿದೆ.
ಯುಜಿಡಿ ನೀರು ಸಾರ್ವಜನಿಕ ರಸ್ತೆಯನ್ನು ಆವರಿಸಿಕೊಂಡಿದ್ದು,ಗೊಬ್ಬು ವಾಸನೆಗೆ ಸ್ಥಳೀಯರು ಮೂಗು ಮುಚ್ಚಿ ಓಡಾಡುವಂತಾಗಿದೆ.

ಕಳೆದ 15 ದಿನಗಳಿಂದ ಇದೇ ಕಥೆ,ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಅವರು ತಲೆ ಕೆಡಿಸಿಕೊಂಡಿಲ್ಲ,ಶಂಕರಪುರ ಜನತೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಕೊಳಕು ನೀರಿನಿಂದಾಗಿ ರೋಗರುಜಿನಗಳ ಭೀತಿ ಎದುರಾಗಿದೆ,ಜನ ಆತಂಕಕ್ಕೆ ಒಳಗಾಗಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೂಡಲೇ ಯುಜಿಡಿ ಸರಿಪಡಿಸಿ ಜನರಿಗೆ ನೆಮ್ಮದಿ ನೀಡಬೇಕಿದೆ.