ಬೆಂಗಳೂರು: ರಾಜಾಜಿನಗರ ಕನ್ನಡ ಜಾನಪದ ಪರಿಷತ್ ವಿಧಾನಸಭಾ ಕ್ಷೇತ್ರ ಘಟಕದ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಸರ್ವಾಧ್ಯಕ್ಷರಾಗಿ ರಾಜ್ಯಸಭಾ ಮಾಜಿ ಸದಸ್ಯ ಡಾ ಎಲ್ ಹನುಮಂತಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಅವರ ನೇತೃತ್ವದ ನಿಯೋಗ ಡಾ ಎಲ್ ಹನುಮಂತಯ್ಯ ಅವರನ್ನು ಭೇಟಿ ಮಾಡಿ,ಅವರಿಗೆ ಆಯ್ಕೆ ಪತ್ರ ನೀಡಿ ಗೌರವಿಸಿ ಅಭಿನಂದಿಸಲಾಯಿತು.

ಈ ವೇಳೆ ರಾಜಾಜಿನಗರ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ರಾ ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಸಂತ ವಾಣಿ ಸುಧಾಕರ್, ಶಂಕರ್, ಜಯರಾಮ್, ರಾಜಾಜಿನಗರ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ, ಗೋವಿಂದರಾಜ ನಗರ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಕುಮಾರ್, ಅಶ್ವಥ್ ನಾರಾಯಣ್,ಕೇಶವರಾಜು, ರಾಮಾಂಜನೇಯ, ಮುರಳಿಧರ್ ಮತ್ತಿತರರು ನಿಯೋಗದಲ್ಲಿ ಹಾಜರಿದ್ದರು.