ನಾಗರಿಕರನ್ನ ಗುಂಡಿಯಿಂದ ಕಾಪಾಡಲು ಕರ್ನಾಟಕ ಹಿತರಕ್ಷಣಾ ವೇದಿಕೆ ಮನವಿ

Spread the love

ಮೈಸೂರು,ಆ.1: ನಾಗರೀಕರನ್ನು
ಗುಂಡಿಗಳಿಂದ ಕಾಪಾಡಬೇಕು ಹಾಗೂ ಸಾರ್ವಜನಿಕರಿಗೆ ಫುಟ್ ಪಾತ್ ಮುಕ್ತವಾಗಲಿ
ಎಂದು ಒತ್ತಾಯಿಸಿ ಕರ್ನಾಟಕ ಹಿತರಕ್ಷಣಾ ವೇದಿಕೆ‌ ಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ನಗರದ ಸಿದ್ಧಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್ ರೇಖಾ ಅವರಿಗೆ
ಮನವಿ ಪತ್ರ ನೀಡಲಾಯಿತು.

ಈ ವೇಳೆ ಕರ್ನಾಟಕ ಹಿತರಕ್ಷಣಾ ವೇದಿಕೆಯ
ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ
ನಾಡಹಬ್ಬ ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾದರೂ ನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇನ್ನೂ ಚಾಲನೆ ದೊರೆತಿಲ್ಲ ಎಂದು ಆರೋಪಿಸಿದರು.

ನಗರದ ಬಹುತೇಕ ರಸ್ತೆಗಳು ಗುಂಡಿಮಾಯವಾಗಿದ್ದು, ಸಂಚಾರ ದುಸ್ತರವಾಗಿದೆ, ಮೈಸೂರಿಗೆ ದಸರಾ ಮಾತ್ರವಲ್ಲದೆ ಎಲ್ಲಾ ಸಮಯದಲ್ಲೂ ಪ್ರವಾಸಿಗರು ಭೇಟಿ ನೀಡುತ್ತಾರೆ, ದಸರಾ ವೇಳೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ,ಆದರೆ ರಸ್ತೆಗಳು ನಗರದ ಸೌಂದರ್ಯಕ್ಕೆ ಪ್ಪುಚುಕ್ಕೆಯಾಗಿವೆ ಎಂದು ಹೇಳಿದರು.

ರಸ್ತೆಗಳಲ್ಲಿ ವಾಹನ ಚಾಲನೆ ಮಾಡಲು ಹರಸಹಾಸ ಪಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ, ಮಳೆ ಬಂದಾಗ ರಸ್ತೆ ಸಂಚಾರ ಮತ್ತಷ್ಟು ದುಸ್ತರವಾಗುತ್ತದೆ, ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿಕೊಂಡು ಅದನ್ನು ಗುರುತಿಸಲು ಸಾಧ್ಯವಾಗದೆ ಅಪಘಾತಗಳು ಸಂಭವಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೆಲವು ತಿಂಗಳ ಹಿಂದೆ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಲಾಯಿತು,ಈಗಾಗಲೇ ಮಳೆಗೆ ಕೆಲವು ರಸ್ತೆಯಲ್ಲಿ ಮತ್ತೆ ಗುಂಡಿಗಳು ಕಾಣಿಸಿಕೊಂಡಿವೆ, ಪ್ರತಿ ಬಾರಿ ದಸರಾ ಉತ್ಸವ ಸಂದರ್ಭ ನಗರ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಆದರೆ ಮೂರ್ನಾಲ್ಕು ತಿಂಗಳು ಕಲಿಯುವಷ್ಟರೊಳಗೆ ರಸ್ತೆ ಮತ್ತೆ ದುಸ್ಥಿತಿಗೆ ತಲುಪುತ್ತದೆ,ಇಂತಹ ಕಳಪೆ ಕಾಮಗಾರಿ ಯಾಕೆ ಮಾಡಬೇಕು ಎಂದು ಕಾರವಾಗಿ ಪ್ರಶ್ನಿಸಿದರು.

ಈ ಬಾರಿ ಕೈಗೊಳ್ಳುವ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ ಎಂದು ವಿನಯ್ ಕುಮಾರ್ ಒತ್ತಾಯಿಸಿದರು.

ದಸರಾ ಸಂದರ್ಭದಲ್ಲಿ ತರಾತುರಿಯಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳುವ ಬದಲು, ಈ ಕೂಡಲೇ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಬೇಕು, ರಸ್ತೆ ಗುಂಡಿಗಳಿಂದಿ ನಮ್ಮ ನಗರದ ಗೌರವವನ್ನು ನಾವೇ ಹರಾಜು ಹಾಕಿಕೊಂಡಂತೆ ಎಂದು ಹೇಳಿದರು.

ರಸ್ತೆಗಳು ಸಂಪೂರ್ಣ ಹದಾಗಿಟ್ಟಿದ್ದು, ನಗರ ಪಾಲಿಕೆ ಕೂಡಲೇ ಎಲ್ಲಾ ಬಡಾವಣೆಗಳ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಮತ್ತು ಗುಣಮಟ್ಟದಿಂದ ಕೂಡಿರಬೇಕು ಸುದೀರ್ಘ ಬಾಳಿಕೆ ಬರುವಂತಿರಬೇಕು ಎಂದು ಆಗ್ರಹಿಸಿದರು.

ಮೈಸೂರು ನಗರದಲ್ಲಿ ಪಾದಾಚಾರಿ ಮಾರ್ಗ ಒತ್ತುವರಿಯಿಂದಾಗಿ ಸಾರ್ವಜನಿಕರ ಓಡಾಟಕ್ಕೆ ಕಷ್ಟವಾಗುತ್ತಿದ್ದು, ನಗರದಲ್ಲಿ ಹಲವಡೆ ಫುಟ್ಪಾತ್ ಹುಡುಕಿದರೂ ಸಿಗದು, ಕೂಡಲೇ ಈ ಬಗ್ಗೆ ಆಡಳಿತ ವರ್ಗ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಬಹುತೇಕ ಪಾದಾಚಾರಿ ಮಾರ್ಗಗಳು ಹೊತ್ತುವರಿಯಾಗಿವೆ, ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ, ಜೊತೆಗೆ ಅಕ್ಷರಸ್ಥರೇ ಕಾರು ನಿಲುಗಡೆ ಮಾಡುವ ಜಾಗದಲ್ಲಿ ಬೈಕ್ ಗಳನ್ನು ನಿಲ್ಲಿಸುತ್ತಾರೆ, ಇದರಿಂದಾಗಿಯೂ ಸಮಸ್ಯೆ ಯಾಗುತ್ತಿದೆ, ಆದುದರಿಂದ ಜನರು ಜವಾಬ್ದಾರಿಯಿಂದ ವರ್ತಿಸಬೇಕು ಸಂಬಂಧ ಪಟ್ಟ ಅಧಿಕಾರಿಗಳು ಫುಟ್ ಪಾತ್ ಒತ್ತುವರಿ ತೆರವುಗೊಳಿಸಬೇಕು ಎಂದು ವಿನಯ್
ಆಗ್ರಹಿಸಿದರು.

ಈ ವೇಳೆ ಮೂಡ ಮಾಜಿ ಸದಸ್ಯರಾದ ಲಕ್ಷ್ಮೀದೇವಿ, ಕೆ ಆರ್ ಬ್ಯಾಂಕ್ ನಿರ್ದೇಶಕರಾದ ಜಿ ಎಂ ಪಂಚಾಕ್ಷರಿ, ಮುಖಂಡರಾದ ಆನಂದ್, ಎಸ್ ಎನ್ ರಾಜೇಶ್, ಬಸವರಾಜ್ ಮಸಲಿ, ಗೋಪಿ,
ಮಂಜುನಾಥ್, ರಾಕೇಶ್ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.