ಮೋದಿ ಹೆಸರು ಹೇಳಲು ಹೆದರುವ‌‌ ಪ್ರಧಾನಿ:ಶೆಹಬಾಜ್‌ ವಿರುದ್ಧ ಪಾಕ್ ಸಂಸದ ಕಿಡಿ

Spread the love

ಇಸ್ಲಾಮಾಬಾದ್: ಭಾರತದ ಪ್ರಧಾನಿ ಮೋದಿ ಹೆಸರು ಹೇಳುವುದಕ್ಕೂ ನಮ್ಮ ನಾಯಕ ಹೆದರುತ್ತಿದ್ದಾರೆ ಎಂದು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ವಿರುದ್ಧ ಸಂಸದ ಶಾಹಿದ್‌ ಖಟ್ಟಕ್‌ ಗುಡುಗಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೂ ಭಾರತದೊಂದಿಗೆ ನಡೆಯುತ್ತಿರುವ ಸಂಘರ್ಷವನ್ನು ಸರ್ಕಾರ ಹೇಗೆ ನಿಭಾಯಿಸುತ್ತಿದೆ ಎಂಬುದರ ಕುರಿತು ಶುಕ್ರವಾರ ನಡೆದ ಚರ್ಚೆಯಲ್ಲಿ ಪಾಕಿಸ್ತಾನ ಸಂಸತ್ತು ರಣಾಂಗಣವಾಗಿತ್ತು.

ಶುಕ್ರವಾರ ನಡೆದ ಸಂಸತ್ ಅಧಿವೇಶನದಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ದಕ್ಷಿಣ ವಲಯ ಖೈಬರ್ ಪಖ್ತುನ್ಖ್ವಾ ಅಧ್ಯಕ್ಷನೂ ಆಗಿರುವ ಪಾಕಿಸ್ತಾನ ಸಂಸದ ಶಾಹಿದ್ ಖಟ್ಟಕ್, ಪ್ರಧಾನಿ ಶೆಹಬಾಜ್ ಷರೀಫ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.

ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡದ ಹೇಡಿ ಎಂದು ಆತ ಜರಿದಿದ್ದಾರೆ.

ಗಡಿಯಲ್ಲಿ ನಿಂತಿರುವ ಪಾಕಿಸ್ತಾನಿ ಸೈನಿಕರು ಸರ್ಕಾರ ಧೈರ್ಯದಿಂದ ಹೋರಾಡುತ್ತದೆ ಎಂದು ನಿರೀಕ್ಷಿಸುತ್ತಾರೆ. ನಮ್ಮ ನಾಯಕ, ಮೋದಿಯ ಹೆಸರನ್ನು ಸಹ ಉಚ್ಚರಿಸಲಾಗದ ಹೇಡಿ. ಗಡಿಯಲ್ಲಿ ಹೋರಾಡುವ ಸೈನಿಕನಿಗೆ ನೀವು ಯಾವ ಸಂದೇಶವನ್ನು ನೀಡುತ್ತಿದ್ದೀರಿ ಎಂದು ಪಾಕ್‌ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾನೆ.