ಪಾತಿ ಫೌಂಡೇಶನ್ 125ನೇ ಕಾರ್ಯಕ್ರಮ: ಹಳೆ ಚಿತ್ರಗೀತೆಗಳು,ವಿಶೇಷ ಮಕ್ಕಳಿಗೆ ಧನಸಹಾಯ

Spread the love

ಮೈಸೂರು: ಮೈಸೂರಿನ ಜೆ ಎಲ್ ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ಜೂ. 26ರಂದು ಸಂಜೆ 5 ಗಂಟೆಗೆ ಪಾತಿ ಫೌಂಡೇಶನ್ 125 ನೇ ಕಾರ್ಯಕ್ರಮದ ಅಂಗವಾಗಿ ಚಲನಚಿತ್ರ ಹಾಡುಗಳ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸಾಹಸಸಿಂಹ ವಿಷ್ಣುವರ್ಧನ್, ಪ್ರಣಯ ರಾಜ ಶ್ರೀನಾಥ್, ಅನಂತ್ ನಾಗ್ ಅವರುಗಳು ನಟಿಸಿರುವ ಚಿತ್ರದ ಹಾಡುಗಳ ಕಾರ್ಯಕ್ರಮ ಹಾಗೂ ವಿಶೇಷ ಅಂದ ಮಕ್ಕಳಿಗೆ ಸಹಾಯಧನ ಮತ್ತು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ಪ್ರಚಾರ ಸಾಮಗ್ರಿಯನ್ನು
ಶ್ರೀರಾಂಪುರದಲ್ಲಿ ಶಾಸಕ ಟಿ ಎಸ್ ಶ್ರೀವತ್ಸ ಅವರು ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು ಪಾತಿ ಅವರು
ನಗರಪಾಲಿಕೆ ಸದ್ಯಸರಾದಾಗಿನಿಂದಲೂ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿದು, ಅಸಹಾಯಕರಿಗೆ ಸಹಾಯ, ಮಾಡುತ್ತಾ ಬಂದಿರುವುದನ್ನು ಗಮನಿಸಿದ್ದೇವೆ
ಎಂದು ಹೇಳಿದರು.

ಅವರ ಈ 125ನೇ ಕಾರ್ಯಕ್ರಮ ಮನೋರಂಜನೆ ಹಾಗೂ ವಿಶೇಷ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಹಾಯಧನ ನೀಡುವ ಕಾರ್ಯಕ್ರಮ ಅರ್ಥಗರ್ಭಿತ ಕಾರ್ಯಕ್ರಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಮೈಸೂರು ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲಿ ಎಂದು ಕರೆ ನೀಡಿದರು.

ಪಾತಿ ಫೌಂಡೇಶನ್ ಅಧ್ಯಕ್ಷ ಎಂ ಡಿ ಪಾರ್ಥಸಾರಥಿ ಅವರು ಮಾತನಾಡಿ,
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಚಲನಚಿತ್ರ ಮಂಡಳಿಯ ಅಧ್ಯಕ್ಷರಾದ ನರಸಿಂಹಲು, ಶಾಸಕರಾದ ಟಿ ಎಸ್ ಶ್ರೀವತ್ಸ, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ,ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷರಾದ ನಾಗರಾಜ್ ವಿ ಬೈರಿ, ಹಿರಿಯ ಸಮಾಜಸೇವಕರಾದ ಕೆ ರಘುರಾಮ್ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಚಂಪಕ, ಜಗದೀಶ್,
ಕೇಬಲ್ ರಮೇಶ್, ಜೋಗಿ ಮಂಜು,
ಸಂತೋಷ್, ಎಸ್ ಎನ್ ರಾಜೇಶ್,
ಮನೋಜ, ಹೇಮಂತ, ಅಭಿ, ಲಕ್ಷ್ಮಣ್, ಯೋಗೇಂದ್ರ ಮತ್ತಿತರರು ಹಾಜರಿದ್ದರು.