ಉತ್ತರ ಮೆಕೆಡೊನಿಯಾನಲ್ಲಿ ಅಗ್ನಿ ದುರಂತ 59 ಮಂದಿ ಸಜೀವ ದಹನ

Spread the love

ಕೊಕಾನಿ: ಉತ್ತರ ಮೆಕೆಡೊನಿಯಾದ ಪೂರ್ವ ಪಟ್ಟಣವಾದ ಕೊಕಾನಿಯಾದ ನೈಟ್‌ಕ್ಲಬ್‌ನಲ್ಲಿ ಭಾನುವಾರ ಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದೆ.

ಈ ಅವಘಡದಲ್ಲಿ 59 ಜನ ಮೃತಪಟ್ಟಿದ್ದು, 155 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಲಬ್ ಪಲ್ಸ್‌ನಲ್ಲಿ ಸ್ಥಳೀಯ ಪಾಪ್ ಗುಂಪಿನ ಸಂಗೀತ ಕಚೇರಿಯ ಸಮಯದಲ್ಲಿ ಇಂದು ಬೆಳಗಿನ ಜಾವ 2.30 ರ ವೇಳೆ ಬೆಂಕಿ ಕಾಣಿಸಿಕೊಂಡಿದೆ ಎಂದು ಆಂತರಿಕ ಸಚಿವ ಪಂಚೆ ತೋಷ್ಕೋವ್ಸ್ಕಿ ತಿಳಿಸಿದ್ದಾರೆ.

ಒಟ್ಟು 59 ಮಂದಿ ಸಜೀವ ದಹನವಾಗಿದ್ದು, ಇದುವರೆಗೆ ಮೃತಪಟ್ಟವರ ಪೈಕಿ 39 ಜನರನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪೈರೋಟೆಕ್ನಿಕ್‌ಗಳು ಕ್ಲಬ್ ನ ಸೀಲಿಂಗ್ ಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿರಬಹುದು ಎಂದು ಅವರು ತಿಳಿಸಿದ್ದಾರೆ.

ಗಾಯಾಳುಗಳನ್ನು ರಾಜಧಾನಿ ಸ್ಕೋಪ್ಜೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಅವರಲ್ಲಿ ಹಲವರು ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

118 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಬೇನಿಯಾ, ಬಲ್ಗೇರಿಯಾ, ಗ್ರೀಸ್ ಮತ್ತು ಸೆರ್ಬಿಯಾ ಸೇರಿದಂತೆ ನೆರೆಯ ದೇಶಗಳು ನೆರವಿನ ಹಸ್ತ ಚಾಚಿವೆ ಎಂದು ಆರೋಗ್ಯ ಸಚಿವ ಅರ್ಬೆನ್ ತಾರಾವರಿ ಅವರು ಹೇಳಿದ್ದಾರೆ.