ಸುನೀತಾ ವಿಲಿಯಮ್ಸ್ ಮಾರ್ಚ್ ನಲ್ಲಿ ಭೂಮಿಗೆ

Spread the love

ಕೇಪ್ ಕೆನವೆರಲ್: ಭಾರತೀಯ ಸಂಜಾತೆ
ಸುನೀತಾ ವಿಲಿಯಮ್ಸ್ ಭೂಮಿಗೆ ವಾಪಸಾಗುವ ದಿನಗಳು ಸನಿಹವಾಗಿದ್ದು ಕೋಟ್ಯಂತರ ಅಭಿಮಾನಿಗಳಿಗೆ ಸಂತಸದ ವಿಷಯವಾಗಿದೆ.

ನಾಸಾದ ಇಬ್ಬರು ಗಗನಯಾತ್ರಿಗಳಾದ ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಬುಚ್ ಅವರು ಯೋಜಿಸಿದ್ದಕ್ಕಿಂತ ಸ್ವಲ್ಪ ಬೇಗ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ತಿಳಿಸಿದೆ.

ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರನ್ನು ಏಪ್ರಿಲ್ ಬದಲಿಗೆ, ಮಾರ್ಚ್ ಅಂತ್ಯ ಅಥವಾ ಮಾರ್ಚ್ ಮಧ್ಯದಲ್ಲಿ ಭೂಮಿಗೆ ಮರಳಿ ಕರೆತರಲಿದೆ ಎಂದು ನಾಸಾ ಮೂಲಗಳು ತಿಳಿಸಿವೆ.

ಸ್ಪೇಸ್‌ಎಕ್ಸ್ ಮುಂಬರುವ ಗಗನಯಾತ್ರಿ ಹಾರಾಟಗಳಿಗೆ ಕ್ಯಾಪ್ಸುಲ್‌ಗಳನ್ನು ಬದಲಾಯಿಸುತ್ತದೆ ಎಂದು ನಾಸಾ ತಿಳಿಸಿದೆ. ಈ ಬದಲಾವಣೆಯು ಸ್ಪೇಸ್‌ಎಕ್ಸ್‌ನ ಕ್ರೂ-10 ಮಿಷನ್‌ಗಾಗಿ ಬಾಹ್ಯಾಕಾಶ ನೌಕೆ ನಿಯೋಜನೆಯಲ್ಲಿನ ಬದಲಾವಣೆಗೆ ಸಂಬಂಧಿಸಿದೆ.

ಜೂನ್ ಮೊದಲ ವಾರದಲ್ಲಿ ಸುನೀತಾ ಕೇವಲ ಒಂದು ವಾರ ಬಾಹ್ಯಾಕಾಶಕ್ಕೆ ಹೋಗಿದ್ದರು. ಆದರೆ ಅವರ ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ಅವರು ಮತ್ತು ಬುಚ್ ಮರಳುವಿಕೆ ಮುಂದೂಡಲ್ಪಡುತ್ತಲೇ ಇದೆ,ಇದೀಗ ಮಾರ್ಚ್ ನಲ್ಲಿ ಮರಳುವರು ಎಂದು ನಾಸಾ ತಿಳಿಸಿದೆ.

ವಿಲ್ಮೋರ್ ಬುಚ್ ಮತ್ತು ಸುನಿತಾ ವಿಲಿಯಮ್ಸ್ ಅವರನ್ನು ಸಾಧ್ಯವಾದಷ್ಟು ಬೇಗ ಮರಳಿ ಕರೆತರಲು “ತ್ವರಿತವಾಗಿ” ಕೆಲಸ ಮಾಡುತ್ತಿರುವುದಾಗಿ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ.