ಮನಸೂರೆಗೊಂಡ ವಿಕೆ ವಿಜಯ ವೈಭವ

Spread the love

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ವಿಜಯನಗರ ಮೂರನೇ ಹಂತದಲ್ಲಿರುವ ವಿಕೆ ಪಬ್ಲಿಕ್ ಸ್ಕೂಲ್ ತನ್ನ ಚೊಚ್ಚಲ ವಾರ್ಷಿಕೋತ್ಸವವನ್ನು ವಿಕೆ ವಿಜಯ ವೈಭವ ಎಂಬ ಹೆಸರಿನಲ್ಲಿ ವಿಶೇಷವಾಗಿ ಆಚರಿಸಿತು.

ಭಾನುವಾರ ಸಂಜೆ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಸುಮಾರು 1500 ಕ್ಕೂ ಹೆಚ್ಚು ಪ್ರೇಕ್ಷಕರನ್ನು ತನ್ನತ್ತ ಸೆಳೆದಿದ್ದು ವಾರಾಂತ್ಯವನ್ನು ಮತ್ತಷ್ಟು ಕಂಗೊಳಿಸುವಂತೆ ಮಾಡಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಸಕ ಜಿ. ಟಿ. ದೇವೇಗೌಡರು ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಾಲಾ ವಾರ್ಷಿಕೋತ್ಸವ ಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಮಕ್ಕಳಲ್ಲಿರುವ ಕಲೆಯನ್ನು ಗುರುತಿಸಿ ಹೊರ ತರಲು ಪೋಷಕರು ಉತ್ತೇಜನ ನೀಡುವಂತೆ ಪ್ರೇರೇಪಿಸಿರುತ್ತಾರೆ ಎಂದು ತಿಳಿಸಿದರು.

ಮತ್ತೊಬ್ಬ ಅತಿಥಿ ಶಾಸಕ ಕೆ. ಹರೀಶ್ ಗೌಡರು ಮಾತನಾಡಿ, ಕೇವಲ ಎರಡು ವರ್ಷಗಳಲ್ಲಿ ಶಾಲೆ ನಡೆದುಬಂದ ಹಾದಿ ಅತ್ಯದ್ಭುತವಾಗಿದೆ, ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಎಂದು ತಿಳಿಸಿದರು.

ಮಾಜಿ ಸಚಿವಎಂ. ಶಿವಣ್ಣ ಅವರು
ಮಾತನಾಡುತ್ತಾ ಪ್ರತಿದಿನವೂ ಶಾಲೆಯನ್ನು ಬಹು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದು ಬೆಳಗಿನ ಪ್ರಾರ್ಥನೆಯಿಂದ ಹಿಡಿದು ಪ್ರತಿಯೊಬ್ಬರಲ್ಲೂ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಶಾಲೆ ಮುಖ್ಯ ಪಾತ್ರ ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾ ವಿಕಾಸ್ ಇಂಜಿನಿಯರಿಂಗ್ ಕಾಲೇಜಿನ
ಕಾರ್ಯದರ್ಶಿ ಕವಿಶ್ ಗೌಡ ವಾಸು ಮಾತನಾಡಿ, ಕಡಿಮೆ ಶುಲ್ಕ ತೆಗೆದುಕೊಂಡು ಎಲ್ಲಾ ಸೌಕರ್ಯವನ್ನು ನೀಡುತ್ತಾ, ಪ್ರತಿಯೊಂದರಲ್ಲೂ ಅಚ್ಚುಕಟ್ಟಾಗಿ ಶಿಸ್ತುಬದ್ಧವಾಗಿ ಮಕ್ಕಳಿಗೆ ಶಿಕ್ಷಣ ಒದಗಿಸಿ ಕೊಡುವುದರಲ್ಲಿ ವಿಕೆ ಪಬ್ಲಿಕ್ ಶಾಲೆ ಮೈಸೂರಿನ ಜನತೆಗೆ ಅತ್ಯುತ್ತಮವಾದ ಒಂದು ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಈ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ್, ಅಧ್ಯಕ್ಷ ಎಮ್‌.ಟಿ ಮಂಜುನಾಥ್‍, ಸದಸ್ಯರುಗಳಾದ ಬಿ. ಸುರೇಶ್ ಬಾಬು, ಗೋವಿಂದರಾಜು, ಪ್ರೊ. ಮಹದೇವಪ್ಪ, ರಾಮನಾಯಕ್ ಹಾಗೂ ಲೋಬೋ ಉಪಸ್ಥಿತರಿದ್ದರು.

ಕರ್ನಾಟಕದ ಹಾಗೂ ದೇಶದ ಹಲವಾರು ಭಾಗಗಳಿಂದ ನೃತ್ಯರೂಪಗಳನ್ನು ಆರಿಸಿ, ನೋಡುಗರಿಗೆ ಮೈಮನ ಸೆಳೆಯುವಂತ ಕಾರ್ಯಕ್ರಮಗಳನ್ನ ವಿಕೆ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನೀಡುವ ಮೂಲಕ ಪ್ರೇಕ್ಷಕರು ಕುಣಿದು ಕೊಪ್ಪಳಿಸುವಂತೆ ಮಾಡಿತು.