ಮೈಸೂರು,ಮಾ.4: ಮಹಿಳೆಯರು ಸ್ವಯಂ ಉದ್ಯೋಗಿಗಳಾಗಬೇಕೆಂದು ಖುಷಿ ವಿನು ಅಕಾಡೆಮಿಯ ಸಂಸ್ಥಾಪಕರಾದ ಖುಷಿ ವಿನು ಕರೆ ನೀಡಿದರು.
ವಿಜಯನಗರದಲ್ಲಿರುವ ಖುಷಿ ವಿನು ಅಕಾಡೆಮಿಯಲ್ಲಿ ಮಹಿಳೆಯರಿಗೆ ಹಮ್ಮಿಕೊಂಡಿದ್ದ 45 ದಿನಗಳ ಮೇಕಪ್ ಆರ್ಟಿಸ್ಟ್ ಕೋರ್ಸ್ ತರಬೇತಿ ಪಡೆದ ಮಹಿಳೆಯರಿಗೆ ಸಂಸ್ಥೆಯ ವತಿಯಿಂದ
ಪ್ರಮಾಣ ಪತ್ರ ನೀಡಿ ಗೌರವಿಸಿ ಅವರು ಮಾತನಾಡಿದರು.
ಇಂದಿನ ದುಬಾರಿ ಜೀವನದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಿಂದ ಮಧ್ಯಮ ವರ್ಗದವರ ಕುಟುಂಬ ನಿರ್ವಹಣೆ ಕಷ್ಟ,ಹಾಗಾಗಿ ಮಹಿಳೆಯರು ಸ್ವಯಂ ಉದ್ಯೋಗಿಗಳಾಗಿ ಕುಟುಂಬ ನಿರ್ವಹಣೆಗೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.
ಕೌಶಲ್ಯ ತರಬೇತಿಗಳು ಜೀವನಕ್ಕೆ ದಾರಿ ದೀಪವಾಗಲಿದ್ದು ಸಂಘ ಸಂಸ್ಥೆ ಹಾಗೂ ಸರ್ಕಾರಗಳು ನೀಡುವ ತರಬೇತಿ ಪಡೆದರೆ ಸ್ವಂತ ಜೀವನ ರೂಪಿಸಿಕೊಳ್ಳ ಬಹುದು ಎಂದು ಖುಷಿ ತಿಳಿಸಿದರು.
ಮಹಿಳೆಯರುನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಸರ್ಕಾರನೀಡುವ ಸೌಲಭ್ಯ ಪಡೆದುಕೊಂಡು ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಬೇಕೆಂದು ತಿಳಿಹೇಳಿದರು.