ಮೈಸೂರು: ಮೈಸೂರಿನ ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ- ಫರ್ಟಿಲಿಟಿ ಸೆಂಟರ್ ಹಾಗೂ ಶ್ರೀ ದುರ್ಗಾ ಫೌಂಡೇಶನ್ ನವರು ಪೌರಕಾರ್ಮಿಕರಿಗೆ ಸೀರೆ, ಬಳೆ, ಎಳ್ಳು, ಬೆಲ್ಲ, ಬಾಗಿನ ವಿತರಿಸಿ ವಿಶೇಷವಾಗಿ ಸಂಕ್ರಾಂತಿ ಹಬ್ಬ ಆಚರಿಸಲಾಯಿತು.
ಈ ವೇಳೆ ಆಸ್ಪತ್ರೆಯ ವೈದ್ಯರಾದ ಡಾ ಮಂಜುನಾಥ್ ಮಾತನಾಡಿ ಹಬ್ಬಗಳು ಸಂಸ್ಕಾರ ಬಿಂಬಿಸುವ ಪ್ರತೀಕವಾಗಿವೆ ಎಂದು ಹೇಳಿದರು.
ನಮ್ಮ ರಾಜ್ಯ ಸೇರಿದಂತೆ ಇಡೀ ದೇಶದಲ್ಲಿ ಸಂಕ್ರಾಂತಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ ರೈತರು ಹೊಸವರ್ಷದಂತೆ ಆಚರಿಸುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಕೃಷಿ ಸಲಕರಣೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಗೌರವಿಸಲಾಗುತ್ತಿದೆ, ಜಾನುವಾರುಗಳನ್ನು ಸಿಂಗಾರಗೊಳಿಸಿ, ಗ್ರಾಮಗಳಲ್ಲಿ ಮೆರವಣಿಗೆ ಮಾಡಲಾಗುತ್ತಿದೆ,ಕೆಲವೆಡೆ ಕಿಚ್ಚು ಹಾಯಿಸಲಾಗುತ್ತದೆ ಎಂದು ತಿಳಿಸಿದರು.
ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷರಾದ ಹೇಮಾನಂದೀಶ್ ಮಾತನಾಡಿ ಪೌರ ಕಾರ್ಮಿಕ ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆ ಜತೆಗೆ ಜನರ ಆರೋಗ್ಯ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಸಹೋದರಿಯರಿಗೆ ಬಾಗಿನ ನೀಡಿದ್ದು ಒಳ್ಳೆಯ ಬೆಳವಣಿಗೆ ಇದನ್ನು ಪ್ರತಿವರ್ಷ ಮುಂದುವರಿಸಲಿ ಎಂದು ಹಾರೈಸಿದರು.
ಇಂತಹ ಮೌಲ್ಯಯುತ ಸೇವೆ ಖುಷಿ ನೀಡಿದ್ದು, ನಮಗಾಗಿ ದುಡಿಯುವ ಪೌರಕಾರ್ಮಿಕ ಮಹಿಳೆಯರ ಮನ-ಮೊಗದಲ್ಲಿ ಸಂತಸ ಮೂಡಿರುವುದು ಸಾರ್ಥಕ್ಯ ತರಿಸಿದೆ ಎಂದು ಹೇಳಿದರು.
ಕಾಂಗರೂ ಕೇರ್ ಸಿ.ಇ.ಒ ಹಾಗೂ ಸಂಸ್ಥಾಪಕ
ಡಾ.ಶೇಖರ್ ಸುಬ್ಬಯ್ಯ,ವೈದ್ಯರಾದ ಡಾ. ವೀಣಾ, ಡಾ. ಶೃತಿ, ಡಾ. ಶುಭ, ಡಾ. ಸ್ವಾತಿ, ಡಾ. ರಶ್ಮಿ ಕಿಶೋರ್, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಅಕ್ಷತಾ, ನಿವೇದಿತ, ಗಣೇಶ್,ಅಂಬಾಭವಾನಿ ಮಹಿಳಾ ಸಂಘದ ಅಧ್ಯಕ್ಷೆ ಸವಿತಾ ಘಾಟ್ಕೆ, ಮಾಲಿನಿ ಪಾಲಾಕ್ಷ, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ,
ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಎ ರವಿ,
ಸಂಧ್ಯಾ ರಾಣಿ, ಐಶ್ವರ್ಯ, ಮಹಾನ್ ಶ್ರೇಯಸ್, ರಾಮಪ್ಪ ಮತ್ತಿತರರು ಹಾಜರಿದ್ದರು.