ಮನಿಲಾ: ಮಧ್ಯ ಫಿಲಿಪೈನ್ಸ್ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿ ಮೃತಪಟ್ಟವರ ಸಂಖ್ಯೆ 70ಕ್ಕೆ ಏರಿಕೆಯಾಗಿದೆ.
ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಸಂಭವಿಸಿದ 6.9 ತೀವ್ರತೆಯ ಭೂಕಂಪದಿಂದಾಗಿ ಬೊಗೊ ನಗರ ಮತ್ತು ಸೆಬು ಪ್ರಾಂತ್ಯದ ಹೊರವಲಯದ ಗ್ರಾಮೀಣ ಪಟ್ಟಣಗಳಲ್ಲಿ ಮನೆಗಳು ನೈಟ್‌ಕ್ಲಬ್‌ಗಳು ಕುಸಿದು ಬಿದ್ದು ನೂರಾರು ನಿವಾಸಿಗಳು ನಿರಾಶ್ರಿತರಾಗಿದ್ದಾರೆ
ಬ್ಯಾಕ್‌ಹೋ ಮತ್ತು ಸ್ನಿಫರ್ ನಾಯಿಗಳ ಬೆಂಬಲದೊಂದಿಗೆ ಸೇನಾ ಪಡೆಗಳು, ಪೊಲೀಸರು ಮತ್ತು ನಾಗರಿಕ ಸ್ವಯಂಸೇವಕರನ್ನು ಬದುಕುಳಿದವರಿಗಾಗಿ ಮನೆ-ಮನೆಗೆ ಹುಡುಕಾಟ ನಡೆಸಲು ನಿಯೋಜಿಸಲಾಗಿದೆ.
ಸೆಬು ಪ್ರಾಂತ್ಯದಲ್ಲಿ ಸುಮಾರು 90,000 ಜನರಿರುವ ಕರಾವಳಿ ನಗರವಾದ ಬೊಗೊದ ಈಶಾನ್ಯಕ್ಕೆ ಸುಮಾರು 19 ಕಿಲೋಮೀಟರ್ ದೂರದಲ್ಲಿ ಭೂಕಂಪನ ಸಂಭವಿಸಿದೆ,
ಬೊಗೊದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೊಗೊ ಬಳಿಯ ಮೆಡೆಲಿನ್ ಪಟ್ಟಣದಲ್ಲಿ ಮನೆಗಳ ಛಾವಣಿಗಳು ಮತ್ತು ಗೋಡೆಗಳು ಕುಸಿದು ಕನಿಷ್ಠ 12 ಜನರು ಮೃತಪಟ್ಟಿದ್ದಾರೆ.