ಹೂಸ್ಟನ್: ಮಧ್ಯ ಅಮೆರಿಕದಲ್ಲಿ ಭಾರಿ ಸುಂಟರಗಾಳಿ ಉಂಟಾಗಿ ಸುಮಾರು 32 ಮಂದಿ ಮೃತಪಟ್ಟಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ.
ಅದೆಷ್ಟರ ಮಟ್ಟಿಗೆ ಗಾಳಿ ಬೀಸುತ್ತಿದೆ ಎಂದರೆ
ಗಾಳಿಯ ರಭಸಕೆ ಮನೆಗಳ ಹೆಂಚುಗಳು ಹಾರಿಹೋಗಿವೆ.ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳು ಉರುಳಿವೆ,ಕೆಲವೆಡೆ ವಾಹನಗಳು ಚಲಿಸುತ್ತಿದ್ದಾಗಲೇ ಉರುಳಿವೆ.
ಬೃಹತ್ ಟ್ರಕ್‌ಗಳು ಪಲ್ಟಿಯಾಗುವ ದೃಶ್ಯಗಳನ್ನು ಸ್ಥಳೀಯ ವಾಹಿನಿಗಳು ಪ್ರಸಾರ ಮಾಡಿವೆ. ಭಾರಿ ಸುಂಟರಗಾಳಿ ಅಪ್ಪಳಿಸಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದರು.