ಬೆಳಗಾವಿ ಮಾರುಕಟ್ಟೆ ಠಾಣೆ ಪೊಲೀಸರಿಂದಎಂಇಎಸ್ ಪುಂಡರ ವಿರುದ್ಧ ಎಫ್ಐಆರ್

Spread the love

ಬೆಳಗಾವಿ: ಕನ್ನಡ ರಾಜ್ಯೋತ್ಸವ ದಿನ ಬೆಳಗಾವಿಯಲ್ಲಿ ರಾಜ್ಯ ಸರಕಾರದ ವಿರುದ್ಧ ಎಂಇಎಸ್ ನಡೆಸಿದ ಕರಾಳ ದಿನಾಚರಣೆ ಹಿನ್ನೆಲೆ, ಬೆಳಗಾವಿ ಮಾರುಕಟ್ಟೆ ಠಾಣೆ ಪೊಲೀಸರು 150ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ‌ ಎಂಇಎಸ್ ಪುಂಡರು ಘೋಷಣೆ ಕೂಗಿ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿ, ಭಾಷಾ ಹಾಗೂ ಗಡಿತಂಟೆ ಕೆಣಕಿ ವಿಷಬೀಜ ಬಿತ್ತುವ ಕೆಲಸ ಮಾಡಿದ್ದಾರೆ.

ಸಾಮಾಜಿಕ ದೊಂಬಿ ಎಬ್ಬಿಸುವ ಹುನ್ನಾರ ನಡೆಸಿದ ಆರೋಪಗಳ ಮೇಲೆ ಪಿಎಸ್‌ಐ ವಿಠ್ಠಲ ಹಾವಣ್ಣವರ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಂಇಎಸ್ ಮಾಜಿ ಶಾಸಕ ಮನೋಹರ ಕಿಣೇಕರ, ಶುಭಂ ಸೆಳಕೆ ಸೇರಿ 150 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೇಸು ದಾಖಲಾಗುತ್ತಿದ್ದಂತೆ ಆರೋಪಿಗಳು ಬೆಳಗಾವಿ ನಗರದಿಂದ ಓಡಿಹೋಗಿದ್ದಾರೆ.

ಆರೋಪಿಗಳನ್ನು ವಶಕ್ಕೆ ಪಡೆಯಲು ಬೆಳಗಾವಿ ನಗರ ಪೊಲೀಸರು ಬಲೆ ಬೀಸಿದ್ದಾರೆ.

ಬೆಳಗಾವಿಯಲ್ಲಿ ರಾಜಕೀಯ ಹೋರಾಟದ ಮುನ್ನೆಲೆ ಕಳೆದುಕೊಂಡಿರುವ ಎಂಇಎಸ್, ರಾಜಕೀಯ ಮಾಡಲು ಮರಾಠಿಗರನ್ನು ಕನ್ನಡಿಗರ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ.