ಕುಡಿತದ ವಿಷಯಕ್ಕೆ ಕಿರಿಕ್:ವ್ಯಕ್ತಿಯಕಾಲಿಗೆ ಕಲ್ಲಿನಿಂದ ಹಲ್ಲೆ ಮಾಡಿದ ಅಪರಿಚಿತ

Spread the love

ಮೈಸೂರು: ಎಣ್ಣೆ ಕೊಡಿಸಲು ಹಣ ಇಲ್ಲವೆಂದ ವ್ಯಕ್ತಿ ಮೇಲೆ ಅಪರಿಚಿತ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾದ ಘಟನೆ ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದರಿಂದ ಮಧು ಎಂಬಾತ ಗಾಯಗೊಂಡಿದ್ದು,ಹಲ್ಲೆ ನಡೆಸಿದ ಅಪರಿಚಿತ ಪರಾರಿಯಾಗಿದ್ದಾನೆ.

ಗಾರೆ ಕೆಲಸ ಮಾಡುವ ಮಧು ನಾಲ್ಕು ದಿನಗಳ ಹಿಂದೆ ಬಿ.ಕೆ.ಸ್ಟ್ರೀಟ್ ನಲ್ಲಿರುವ ಬಾರ್ ಒಂದರಲ್ಲಿ ಮದ್ಯ ಸೇವಿಸಿ ಫುಟ್ ಪಾತ್ ನಲ್ಲಿ ಕುಳಿತಿದ್ದಾಗ ಅಪರಿಚಿತ ವ್ಯಕ್ತಿ ಪರಿಚಯ ಮಾಡಿಕೊಂಡು ಎಣ್ಣೆ ಹೊಡೆಯುವಂತೆ ಪುಸಲಾಯಿಸಿದ್ದಾನೆ.

ಅಪರಿಚಿತನ ಆಹ್ವಾನ ಸ್ವೀಕರಿಸಿ ಮಧು ಮತ್ತೆ ಮದ್ಯ ಕುಡಿದಿದ್ದಾನೆ.ಬಾಟಲ್ ಖಾಲಿ ಆದ ನಂತರ ನನಗೂ ಎಣ್ಣೆ ಹೊಡೆಸು ಎಂದು ಅಪರಿಚಿತ ಕೇಳಿದ್ದಾನೆ.ನನ್ನ ಬಳಿ ಹಣ ಇಲ್ಲವೆಂದು ಮಧು ತಿಳಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಣ ಇಲ್ಲದಿದ್ದ ಮೇಲೆ ನನ್ನ ಎಣ್ಣೆ ಯಾಕೆ ಕುಡಿದೆ ಎಂದು ಕಿರುಚಾಡಿ ಕಾಲಿನ ಮೇಲೆ ಕಲ್ಲು ಎತ್ತಿಹಾಕಿ ಪರಾರಿಯಾಗಿದ್ದಾನೆ.

ಗಾಯಗೊಂಡು ನರಳುತ್ತಿದ್ದ ಮಧು ನನ್ನು ಸ್ಥಳೀಯರೊಬ್ಬರು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಸಂಬಂಧ ಮಧು ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ