ಬೆಂಗಳೂರು: ದರ ಏರಿಕೆ ಮಾಡುವ ಮೂಲಕ ಮದ್ಯಪ್ರಿಯರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ.
ಬಜೆಟ್‌ಗೆ ಮೊದಲೇ ಮದ್ಯದ ದರ ಏರಿಕೆಯಾಗಿದೆ.10 ರೂಪಾಯಿಯಿಂದ 45 ರೂಪಾಯಿ ವರೆಗೂ ಬೆಲೆ ಏರಿಕೆಯಾಗಿದೆ ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದ್ದು ಮದ್ಯಪ್ರಿಯರಿಗೆ ಸರ್ಕಾರ ಬರೆ ಎಳೆದಿದೆ.
ಸಾಧಾರಣವಾಗಿ ಬಜೆಟ್‌ನಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ಹಾಕಲಾಗುತ್ತದೆ. ಆದರೆ ಈ ಬಾರಿ ಬಜೆಟ್ ಗೂ ಮೊದಲೇ ಸರ್ಕಾರ ದರ ಏರಿಕೆ ಮಾಡಿದೆ.
ಕಳೆದ 6 ತಿಂಗಳ ಹಿಂದೆ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಲಾಗಿತ್ತು. ದುಬಾರಿ ಬೆಲೆಯ ಬಿಯರ್ ದರ ಏರಿಕೆಯಾಗಿಲ್ಲ. ಬದಲಾಗಿ 300 ರೂ. ಒಳಗಡೆ ಇರುವ ಮದ್ಯದ ದರವನ್ನು ಅಬಕಾರಿ ಇಲಾಖೆ ಏರಿಸಿದೆ.