ವಿಶೇಷ ಮಕ್ಕಳ ಶಾಲೆಗೆ ಟ್ರೆಡ್ ಮಿಲ್ ಕೊಡುಗೆ ನೀಡಿದ ಅಲೋಕ್ ಆರ್ ಜೈನ್

Spread the love

ಮೈಸೂರು: ನಗರದ ಟಿ ಕೆ ಲೇಔಟ್ ಬಡಾವಣೆಯಲ್ಲಿರುವ ಕ್ಷೇಮ ವಿಶೇಷ ಶಾಲೆಯ ಮಕ್ಕಳಿಗೆ ಅಂತರಾಷ್ಟ್ರೀಯ
ವಿಶೇಷ ಚೇತನರ ಕ್ರೀಡಾಪಟು ಅಲೋಕ್ ಆರ್ ಜೈನ್ ಅವರು‌ ಟ್ರೆಡ್ ಮಿಲ್
ದಾನವಾಗಿ ನೀಡಿ ಮಾದರಿಯಾಗಿದ್ದಾರೆ.

ಈ ವೇಳೆ ಅಲೋಕ್ ಆರ್ ಜೈನ್ ಮಾತನಾಡಿ,ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಕೋರಿದರು.

ಎಲ್ಲರಿಗೂ ದೇವರು ಸರಿಯಾದ ಅಂಗಾಂಗಗಳನ್ನು ನೀಡಿದ್ದಾರೆ. ಆದರೆ ಕೆಲವು ಮಕ್ಕಳಿಗೆ ನೂನ್ಯತೆಯನ್ನು ನೀಡಿದ್ದಾರೆ. ನೂನ್ಯತೆಯನ್ನು ಹೊಂದಿರುವ ಮಕ್ಕಳು ಸಮಾಜಕ್ಕೆ ಬಂದಾಗ ಅದು ದೌರ್ಬಲ್ಯ ಆಗದಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.

ವಿಶೇಷ ಮಕ್ಕಳಿಗೆ ಬೇಕಾಗಿರುವುದು ಕರುಣೆಯಲ್ಲ ಕಾಳಜಿ.ವಿಕಲಚೇತನ ಮಕ್ಕಳನ್ನು ನೋಡಿಕೊಳ್ಳುವ ಹೆತ್ತವರು ಮತ್ತು ಶಿಕ್ಷಣ ನೀಡುವ ಶಿಕ್ಷಕರು ಹಾಗೂ ಚಿಕಿತ್ಸೆ ನೀಡುವ ವರ್ಗಕ್ಕೆ ಹೆಚ್ಚಿನ ತಾಳ್ಮೆ ಮತ್ತು ಸಹನೆ ಅಗತ್ಯವಿದ್ದು ಇದನ್ನು ಮೈಗೂಡಿಸಿಕೊಳ್ಳಬೇಕೆಂದು ಮನವಿ ಮಾಡಿದರು

ವಿಕಲಚೇತನ ಮಕ್ಕಳಿಗೆ ಫಿಸಿಯೋಥೆರಫಿ ಚಿಕಿತ್ಸಾ ವಿಧಾನದಿಂದ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗಳಾಗುತ್ತಿವೆ ಎಂದು ಹೇಳಿದರು.

ಈ ವೇಳೆ ಜಯೇಶ್, ಸಾಧನ ಜೈನ್, ಮಿತ ಧರಿವಾಲ್, ರೂಪಾಳಿ,
ಕ್ಷೇಮ ವಿಶೇಷ ಶಾಲಾ ಮುಖ್ಯಸ್ಥರಾದ ನೀಲಾಮಣಿ, ಶಿಕ್ಷಕರಾದ ಶಿಲ್ಪ, ಲಕ್ಷ್ಮಿ, ಸ್ವಾತಿ, ಶೀಲಾ, ದಿವ್ಯ, ಹೇಮಾ, ರಾಧಾ ಹಾಗೂ ವಿಶೇಷ ಚೇತನ ಮಕ್ಕಳುಗಳು ಹಾಜರಿದ್ದರು.