ಕೀನ್ಯಾದಲ್ಲಿ ‌ಕಂದಕಕ್ಕೆ ಉರುಳಿದ ಬಸ್ಆರು ಭಾರತೀಯರ ದು*ರ್ಮರಣ

ಕೀನ್ಯಾ: ಕೀನ್ಯಾದಲ್ಲಿ ಚಾಲಕನ‌ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಆರು ಭಾರತೀಯರು ಸಾವನ್ನಪ್ಪಿದ್ದಾರೆ.

ಕೀನ್ಯಾದಲ್ಲಿ ಪ್ರಯಾಣಿಸುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಮೃತರೆಲ್ಲರೂ ಕತಾರ್ ನಲ್ಲಿ ನೆಲೆಸಿದ್ದ ಭಾರತೀಯ ಮೂಲದವರು ಎಂದು ಗುರುತಿಸಲಾಗಿದೆ.

ಐವರು ಕೇರಳದವರೆಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದ ಮಾವೆಲಿಕ್ಕರ ಮೂಲದ ಗೀತಾ ಶೋಜಿ ಐಸಾಕ್ (58), ಜಸ್ನಾ ಕುಟ್ಟಿಕ್ಕಟ್ಟುಚಲಿಲ್ (29), ರುಹಿ ಮೆಹ್ರಿ ಮೊಹಮ್ಮದ್ (18 ತಿಂಗಳ), ಒಟ್ಟಪಾಲಂ ಮೂಲದ ರಿಯಾ ಎನ್ (41) ಮತ್ತು ಟೈರಾ ರೊಡ್ರಿಗಸ್ (8) ಮೃತಪಟ್ಟವರೆಂದು ಗುರುತಿಸಲಾಗಿದೆ, ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ.

ನ್ಯಾಂಡರುವಾ ಕೌಂಟಿಯ ಓಲ್ ಜೊರೊರೊಕ್-ನಕುರು ರಸ್ತೆಯಲ್ಲಿರುವ ಗಿಚಾಕಾದಲ್ಲಿ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ 27 ಮಂದಿ ಗಾಯಗೊಂಡಿದ್ದಾರೆ. ಪ್ರವಾಸಿಗರು ನ್ಯಾಹುರುರುವಿನ ಪನಾರಿ ರೆಸಾರ್ಟ್‌ಗೆ ತೆರಳುತ್ತಿದ್ದಾಗ ಬಸ್ ಕಂದಕಕ್ಕೆ ಬಿದ್ದಿದೆ.

ಕಡಿದಾದ ಇಳಿಜಾರು ಪ್ರದೇಶದಲ್ಲಿ ತಿರುವು ಪಡೆಯಲು ಯತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ. ಬಸ್ ನಲ್ಲಿ 28 ಪ್ರವಾಸಿಗರು, ಮೂವರು ಸ್ಥಳೀಯ ಮಾರ್ಗದರ್ಶಕರು ಇದ್ದರು