ಕನ್ನಡ ಪ್ರೇಮ ಮನದಿಂದ‌ ಮೂಡಿಬರಬೇಕು: ಮಡ್ಡಿಕೆರೆ ಗೋಪಾಲ್

ಮೈಸೂರು: ಕನ್ನಡ ಭಾಷಾ ಪ್ರೇಮ, ನಾಡ ಪ್ರೇಮ ಮಾತಿನಲ್ಲಿ ತಿಳಿಸುವಂತದ್ದಲ್ಲ, ಅದು ನಮ್ಮ ಮನದಿಂದ ಮೂಡಿ ಬರುವಂತಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್
ತಿಳಿಸಿದರು.

ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭೈರವಿ ಗೌಡತಿಯರ ಬಳಗದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕನ್ನಡ ನಾಡು ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಸದಾ ಕಾಲ ನಮ್ಮ ಮನದಲ್ಲಿ ಉಳಿಸಿಕೊಂಡಿರಬೇಕು, ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವದ ರಂಗು ಎಲ್ಲೆಡೆ ತುಂಬಿರುವುದನ್ನು ನಾವು ಕಾಣುತ್ತೇವೆ, ಇದು ಇಲ್ಲಿ ಆ ರಂಗಿನೊಂದಿಗೆ ಮಹಿಳೆಯರು ಶಿಸ್ತು, ಒಟ್ಟುಗೂಡಿ ಮತ್ತಷ್ಟು ಸೊಗಸು ತುಂಬಿದೆ ಎಂದು ನುಡಿದರು.

ಕನ್ನಡ ಭಾಷೆ ಉಳಿಸಿ ಬೆಳೆಸುವ ಕಾರ್ಯಗಳು ನಿಮ್ಮಿಂದ ಹೆಚ್ಚು ಹೆಚ್ಚು ಸಾಗಲಿ ಎಂದು ಭೈರವಿ ಗೌಡತಿಯರ ಬಳಗದವರಿಗೆ ಮಡ್ಡಿಕೆರೆ ಗೋಪಾಲ್ ಸಲಹೆ ನೀಡಿದರು.

ಇದೇ ವೇಳೆ ಜಾನಪದ ಕಲಾವಿದೆ ಹಾಡು ನೃತ್ಯ ಹಾಗೂ ಕಲೆಯಲ್ಲಿ ಖ್ಯಾತಿ ಗಳಿಸಿದ ಸುಮಾ ಪ್ರಶಾಂತ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕದ ವೀರ ವನಿತೆಯರ ವೇಷ ಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಬೈರವಿ ಗೌಡ್ತಿಯರ ಬಳಗದ ಅಧ್ಯಕ್ಷರಾದ ರೇವತಿ ಕೃಷ್ಣಪ್ಪ, ಗೌರವಾಧ್ಯಕ್ಷರಾದ ರಾಧಾ ಲಂಕೇಗೌಡ, ಹಾಗೂ ನಿರ್ದೇಶಕರುಗಳಾದ ಡಾಕ್ಟರ್ ಹೇಮಾ ನಂದೀಶ್,ಕೋಮಲ ವೆಂಕಟೇಶ, ಸುಶೀಲ ಬಸುವರಾಜು ಅವರು ಉಪಸ್ಥಿತರಿದ್ದರು.

ಆಯೋಜಕರು ಗಳಾದ ಪೂರ್ಣಿಮಾ, ಛಾಯಾ ಮಹೇಶ್, ಪದ್ಮಾ ಸುರೇಶ್, ಸುಮಿತ್ರ ರಮೇಶ್, ಪುಷ್ಪ, ಹೇಮಾ ಕಿರಣ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಲಕ್ಷ್ಮಿ ಕಿರಣ್ ಪಾಲ್ಗೊಂಡಿದ್ದರು.